ಅಮೆರಿಕದಲ್ಲಿರುವ 18,000 ಜನರನ್ನು ವಾಪಸ್ ಕರೆಸಿಕೊಳ್ಳಲು ಭಾರತ ಸಜ್ಜು!

ನವದೆಹಲಿ: 

   ಅಮೆರಿಕದಲ್ಲಿನ ಹೊಸ ಟ್ರಂಪ್ ಆಡಳಿತವನ್ನು ಸಮಾಧಾನಪಡಿಸುವ ಹಾಗೂ ಅಕ್ರಮ ವಲಸಿಗರ ವಿರುದ್ಧ ಶಿಸ್ತುಕ್ರಮಕ್ಕೆ ಸಹಕರಿಸಲು ಒಲವು ತೋರಿಸುವ ಪ್ರಯತ್ನದಲ್ಲಿ ಭಾರತ ಯುಎಸ್ ನಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ತನ್ನ ನಾಗರಿಕರನ್ನು ವಾಪಸ್ ಕರೆಸಿಕೊಳ್ಳಲು ಯೋಜಿಸುತ್ತಿದೆ.

   ಅಮೆರಿಕದಲ್ಲಿ ವಲಸೆ ನಿರ್ಬಂಧಿಸುವ ಹಾಗೂ ಸರಿಯಾದ ದಾಖಲೆಗಳಿಲ್ಲದೆ ವಾಸಿಸುತ್ತಿರುವ ಎಲ್ಲರನ್ನೂ ಗಡಿಪಾರು ಮಾಡುವ ಟ್ರಂಪ್ ಪ್ರಯತ್ನಗಳ ನಡುವೆ ಈ ಮಾತುಗಳು ಕೇಳಿಬರುತ್ತಿವೆ. ಸುಮಾರು 18,000 ಭಾರತೀಯರನ್ನು ಗಡಿಪಾರು ಮಾಡಲು ಗುರುತಿಸಲಾಗಿದೆ ಎಂದು ಹೆಸರಿಸದ ಮೂಲಗಳನ್ನು ಉಲ್ಲೇಖಿಸಿ ಬ್ಲೂಮ್‌ಬರ್ಗ್ ವರದಿ ತಿಳಿಸಿದೆ. ಆದಾಗ್ಯೂ, ಅಮೆರಿಕದಲ್ಲಿ ಕಾನೂನುಬಾಹಿರವಾಗಿ ಅಥವಾ ಸರಿಯಾದ ದಾಖಲೆಗಳಿಲ್ಲದೆ ವಾಸಿಸುವ ಭಾರತೀಯರ ನಿಖರವಾದ ಸಂಖ್ಯೆಯು ಅಸ್ಪಷ್ಟವಾಗಿದ್ದು, ಇದು ಲೆಕಕ್ಕೆ ಸಿಗುತ್ತಿಲ್ಲ.

   ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಹಾಗೂ ತಾತ್ಕಾಲಿಕ ವೀಸಾದಲ್ಲಿ ನೆಲೆಸಿರುವವರನ್ನು ಗಡಿಪಾರು ಮಾಡಲಾಗುವುದು ಎಂದು ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಹೇಳಿದ್ದ ಟ್ರಂಪ್, ವಲಸಿಗರಿಗೆ ಕೆಲಸದ ಅರ್ಹತೆಯನ್ನು ನೀಡುವ ಮೂಲಕ ಅಮೆರಿಕಕ್ಕೆ ಕಾನೂನುಬದ್ಧ ಪ್ರವೇಶವನ್ನು ಒದಗಿಸುವ CBP ಆ್ಯಪ್ ನ್ನು ಟ್ರಂಪ್ ಸ್ಥಗಿತಗೊಳಿಸಿದರು.

   ಅಲ್ಲದೇ ಜನ್ಮಸಿದ್ಧ ಪೌರತ್ವವನ್ನು ರದ್ದುಗೊಳಿಸಿದರು. ಅವರು US-ಮೆಕ್ಸಿಕೋ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು ಮತ್ತು ಅಕ್ರಮ ವಲಸಿಗರ ಪ್ರವೇಶವನ್ನು ನಿರ್ಬಂಧಿಸಲು ಸೈನ್ಯವನ್ನು ಸಜ್ಜುಗೊಳಿಸಿದ್ದಾರೆ.

   US ನಲ್ಲಿ ಭಾರತೀಯ ವಲಸಿಗರು: ಅಮೆರಿಕದಲ್ಲಿರುವ ಅತಿದೊಡ್ಡ ವಲಸಿಗರಲ್ಲಿ ಭಾರತೀಯರು ಹೆಚ್ಚಾಗಿದ್ದಾರೆ. ಉದ್ಯೋಗದಾತರು ವಿಶೇಷ ಉದ್ಯೋಗಗಳಿಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುಮತಿಸುವ H1-b ವೀಸಾಕ್ಕೆ ಬಂದಾಗ ಭಾರತೀಯರ ಶೇಕಡಾವಾರು ಪ್ರಮಾಣ ಹೆಚ್ಚಾಗಿದೆ.

   ಅಧಿಕೃತ ಅಂಕಿಅಂಶಗಳ ಪ್ರಕಾರ, 2023 ರಲ್ಲಿ ನೀಡಲಾದ ಒಟ್ಟು 386,000 H-1B ವೀಸಾಗಳಲ್ಲಿ ನಾಲ್ಕನೇ ಮೂರು ಭಾಗದಷ್ಟು ಭಾರತೀಯರು ಪಡೆದಿದ್ದಾರೆ. ಆದಾಗ್ಯೂ, ಅಕ್ರಮ ವಲಸೆಯ ವಿಷಯದಲ್ಲಿ ಭಾರತ ಮೆಕ್ಸಿಕೊ, ವೆನೆಜುವೆಲಾ ನಂತರದ ಸ್ಥಾನ ಪಡೆಯುತ್ತದೆ.ನವೆಂಬರ್ 2024 ರಲ್ಲಿ ICE (ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಅಮೆರಿಕದಿಂದ ಗಡಿಪಾರು ಮಾಡಲು ಉದ್ದೇಶಿಸಲಾದ 1.45 ಮಿಲಿಯನ್ ಜನರಲ್ಲಿ ಸುಮಾರು 17,940 ಭಾರತೀಯರು ಸೇರಿದ್ದಾರೆ.

   ದಾಖಲೆರಹಿತ ವಲಸಿಗರ ಸಂಖ್ಯೆಯಲ್ಲಿ ಚೀನಾ 37,908 ಜನರೊಂದಿಗೆ ಅಗ್ರಸ್ಥಾನದಲ್ಲಿದೆ. ಏಷ್ಯಾದ ದೇಶಗಳಲ್ಲಿ ಭಾರತ 13 ನೇ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ

Recent Articles

spot_img

Related Stories

Share via
Copy link