ವಿಶ್ವಕಪ್: ಬಾಂಗ್ಲಾ ವಿರುದ್ಧ ಗೆದ್ದ ಟೀಂ ಇಂಡಿಯಾದ ಸೆಮಿ ಆಸೆ ಜೀವಂತ

ಹ್ಯಾಮಿಲ್ಟನ್:

ವನಿತಾ ಏಕದಿನ ವಿಶ್ವಕಪ್ ನ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಮಿಥಾಲಿ ರಾಜ್ ಪಡೆ 110 ರನ್ ಅಂತರದಿಂದ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಏಳು ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿದರೆ, ಬಂಗ್ಲಾ ವನಿತೆಯರ ತಂಡ ಕೇವಲ 119 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.ಭಾರತದ ಈ ಗೆಲುವಿನೊಂದಿಗೆ ಸೆಮಿ ಫೈನಲ್ ಕನಸು ಜೀವಂತವಾಗಿದೆ.

ಭಾರತದಲ್ಲಿ ಮೊದಲ ಬಾರಿಗೆ ಐಷಾರಾಮಿ ಹೆಲಿಕಾಪ್ಟರ್​ ಖರೀದಿಸಿದ ಆರ್​ಪಿ ಸಮೂಹ ಸಂಸ್ಥೆ ಅಧ್ಯಕ್ಷ: ಇದರ ಮೌಲ್ಯ ಎಷ್ಟು ಗೊತ್ತಾ?

ಯಾಸ್ತಿಕಾ ಅರ್ಧಶತಕ: ಭಾರತಕ್ಕೆ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮಾ ಉತ್ತಮ ಆರಂಭ ಒದಗಿಸಿದರು. ಮಂಧನಾ 32 ರನ್ ಗಳಿಸಿದರೆ, ಶಫಾಲಿ 42 ರನ್ ಬಾರಿಸಿದರು. ಉತ್ತಮ ಫಾರ್ಮ್ ಮುಂದುವರಿಸಿದ ಯಾಸ್ತಿಕಾ ಭಾಟಿಯಾ ಪಂದ್ಯದ ಏಕೈಕ ಅರ್ಧಶತಕ ಬಾರಿಸಿದರು. ಕೊನೆಯಲ್ಲಿ ಪೂಜಾ ವಸ್ತ್ರಾಕರ್ 30, ಸ್ನೇಹ್ ರಾಣ 27 ಮತ್ತು ರಿಚಾ ಘೋಷ್ 26 ರನ್ ಗಳಿಸಿದರು.

ಗುರಿ ಬೆನ್ನತ್ತಿದ ಬಾಂಗ್ಲಾಕ್ಕೆ ಸ್ನೇಹ್ ರಾಣ ಬೌಲಿಂಗ್ ನಲ್ಲಿ ಕಾಡಿದರು. ಸತತ ವಿಕೆಟ್ ಕಳೆದುಕೊಂಡ ಬಾಂಗ್ಲಾ ರನ್ ಗಳಿಸಲು ಪರದಾಡಿತು. 32 ರನ್ ಗಳಿಸಿದ ಸಲ್ಮಾ ಖತುನ್ ರದ್ದೇ ಹೆಚ್ಚಿನ ಗಳಿಕೆ. ಸ್ನೇಹ್ ರಾಣ ನಾಲ್ಕು ವಿಕೆಟ್ ಕಿತ್ತರೆ, ಜೂಲನ್ ಗೋಸ್ವಾಮಿ ಮತ್ತು ಪೂಜಾ ವಸ್ತ್ರಾಕರ್ ತಲಾ ಎರಡು ವಿಕೆಟ್ ಪಡೆದರು.ಬಾಂಗ್ಲಾದೇಶ ಪಂದ್ಯದ ವಿರುದ್ಧದ ಪಂದ್ಯ ಗೆದ್ದ ಭಾರತ ಅಂಕಪಟ್ಟಿಯಲ್ಲಿ ಆರು ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿದೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link