ಕ್ರಿಕೆಟ್‌ ಅಭಿಮಾನಿಗಳಿಗೆ ದೊಡ್ಡ ಷಾಕ್‌ ನೀಡಿದ ಭಾರತದ ವಿಕೆಟ್‌ ಕೀಪರ್‌….!

ಕೋಲ್ಕತ್ತಾ:

    ಭಾರತ ಟೆಸ್ಟ್ ತಂಡದ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಅವರು ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಈ ಮೂಲಕ 17 ವರ್ಷಗಳ ಸುದೀರ್ಘ ಕ್ರಿಕೆಟ್‌ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ಬಂಗಾಳ ಪರ ಆಡುತ್ತಿರುವ ಸಾಹ ಸೋಮವಾರ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

   2010 ರಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದ ವೃದ್ಧಿಮಾನ್ ಸಾಹ ಭಾರತ ಪರ 40 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ 56 ಇನಿಂಗ್ಸ್ ಆಡಿ ಅವರು 3 ಶತಕ ಹಾಗೂ 6 ಅರ್ಧಶತಕಗಳೊಂದಿಗೆ ಒಟ್ಟು 1353 ರನ್ ಕಲೆಹಾಕಿದ್ದಾರೆ. ಮಹೇಂದ್ರ ಸಿಂಗ್‌ ಧೋನಿ ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಕೀಪರ್‌ ಆಗಿದ್ದ ಕಾರಣ ವೃದ್ಧಿಮಾನ್ ಸಾಹಗೆ ಭಾರತ ಪರ ಹೆಚ್ಚಿನ ಪಂದ್ಯವನ್ನಾಡುವ ಅವಕಾಶ ಲಭಿಸಲಿಲ್ಲ.

  2014ರಲ್ಲಿ ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿಯಾದ ನಂತರ ಸಾಹಗೆ ಭಾರತ ತಂಡದ ಬಾಗಿಲು ತೆರೆಯಿತು. ಹಿಂದೊಮ್ಮೆ ಸಂದರ್ಶನದಲ್ಲಿ ಸಾಹ ಅವರು ತಂಡದಲ್ಲಿ ಧೋನಿ ಇರುವವರೆಗೆ ನನಗೆ ಸ್ಥಾನ ದೊರೆಯುತ್ತಿರಲಿಲ್ಲ ಎಂದು ಹೇಳಿದ್ದರು. ರಿಷಭ್‌ ಪಂತ್‌ ಕೂಡ ಭಾರತ ತಂಡದ ಕೀಪರ್‌ ಆಗಿ ಆಗಮನವಾದರು. ಹೀಗಾಗಿ ಮತ್ತೆ ಸಾಹಗೆ ಸರಿಯಾದ ಅವಕಾಶ ಲಭಿಸದೇ ಹೋಯಿತು. ಸಿಕ್ಕ ಅವಕಾಶದಲ್ಲೇ ಸಾಹ ಉತ್ತಮ ಪ್ರದರ್ಶನ ತೋರುವ ಮೂಲಕ ಮಿಂಚಿದ್ದರು. ಅವಕಾಶ ನೀಡದೆ ಇದ್ದ ಕಾರಣ ಈ ಹಿಂದೆ ಕೋಚ್‌ ಆಗಿದ್ದ ರಾಹುಲ್‌ ದ್ರಾವಿಡ್‌ ಮತ್ತು ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್‌ ಗಂಗೂಲಿ ವಿರುದ್ಧವೀ ಸಾಹ ಹಲವು ಬಾರಿ ಆಕ್ರೋಶ ಹೊರಹಾಕಿದ್ದರು. 

  ದೇಶೀಯ ಕ್ರಿಕೆಟ್‌ ಟೂರ್ನಿಯಲ್ಲಿ ಸಾಹ 15 ವರ್ಷಗಳ ಕಾಲ ಬಂಗಾಳ ಪರವಾಗಿ ಮತ್ತು 2 ವರ್ಷಗಳ ಕಾಲ ತ್ರಿಪುರಾ ಪರ ಆಡಿದ್ದಾರೆ. ಭಾರತ ಪರ ಒಟ್ಟು 9 ಏಕದಿನ ಪಂದ್ಯವನ್ನಾಡಿ 41 ರನ್‌ ಬಾರಿಸಿದ್ದಾರೆ. 2014 ರಲ್ಲಿ ಭಾರತ ಪರ ಕೊನೆಯ ಏಕದಿನ ಪಂದ್ಯವನ್ನಾಡಿದ್ದರು. 2021 ರಲ್ಲಿ ಕೊನೆಯ ಬಾರಿಗೆ ಟೆಸ್ಟ್‌ ಆಡಿದ್ದರು. ಟೆಸ್ಟ್‌ ಆಟಗಾರನಾಗಿದ್ದರೂ ಕೂಡ ಐಪಿಎಲ್‌ನಲ್ಲಿ ಸಹಾ ಸ್ಫೋಟಕ ಬ್ಯಾಟಿಂಗ್‌ ಮೂಲಕ ಗಮನಸೆಳೆದಿದ್ದಾರೆ. 170 ಐಪಿಎಲ್‌ ಪಂದ್ಯವನ್ನಾಡಿ 2934 ರನ್‌ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 13 ಅರ್ಥಶತಕ ಒಳಗೊಂಡಿದೆ.

Recent Articles

spot_img

Related Stories

Share via
Copy link