ತುಮಕೂರು :
ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಆರಂಭವಾಗಿದ್ದು, ಇಂದು ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥಿಸಲು ಜನ ಮುಂದಾಗಿದ್ದಾರೆ. ಇಂದು ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಆರ್ ಮಾರ್ಕೆಟ್‌ನಲ್ಲಿ ಖರೀದಿ ಭರಾಟೆ ಜೋರಾಗಿದೆ. ಹಣ್ಣು, ಹೂವು ಖರೀದಿಗೆಂದು ಜನರು ಮುಗಿಬಿದ್ದಿದ್ದಾರೆ. ಬೆಲೆಗಳು ಗಗನಕ್ಕೇರಿವೆ.
ಹಬ್ಬದ ಖರೀದಿಗಾಗಿ ಜನರು ಮುಗಿಬಿದ್ದಿದ್ದಾರೆ. ನಗರದ ಕೆ ಆರ್ ಮಾರ್ಕೆಟ್‌ನಲ್ಲಿ ಜನಸಾಗರ ಉಂಟಾಗಿದ್ದು, ಹಣ್ಣು, ಹೂವು ಖರೀದಿಯಲ್ಲಿ ಜನರು ಬ್ಯುಸಿ ಆಗಿದ್ದಾರೆ. ಹಬ್ಬದ ದಿನವೂ ಮಾರ್ಕೆಟ್‌ನಲ್ಲಿ ಸಾವಿರಾರು ಜನರು ಸೇರಿದ್ದಾರೆ. ಮೈಸೂರು ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಹಬ್ಬದ ಕಾರಣ ಹೂವು, ಹಣ್ಣುಗಳ ಬೆಲೆಯಲ್ಲಿ ಏರಿಕೆ ಆಗಿದೆ. ಬೆಳಗಿನ ಜಾವ ಎರಡು ಗಂಟೆಯಿಂದಲೂ ವ್ಯಾಪಾರ ವಹಿವಾಟು ನಡೆಯುತ್ತಿದೆ. ಹಬ್ಬಕ್ಕೆ ಬೇಕಾದ ಬಗೆ ಬಗೆಯ ಹೂವುಗಳ ಖರೀದಿಯಲ್ಲಿ ಸಿಲಿಕಾನ್ ಸಿಟಿ ಜನ ತೊಡಗಿದ್ದಾರೆ.
ವರಮಹಾಲಕ್ಷ್ಮಿ ಪೂಜೆಗೆ ಯಾವ ಸಮಯ ಸೂಕ್ತ….!?
ಸಿಂಹ ಲಗ್ನ ಪೂಜೆ ಮುಹೂರ್ತ: ಮುಂಜಾನೆ 06:29 ರಿಂದ ಬೆಳಗ್ಗೆ 08:46ರವರೆಗೆ. ಮುಂಜಾನೆ ಲಕ್ಷ್ಮಿ ಪೂಜೆಗೆ ಶುಭ ಅವಧಿ: 2 ಗಂಟೆ 17 ನಿಮಿಷಗಳು. ಮಧ್ಯಾಹ್ನ ಪೂಜೆಗೆ ಶುಭ ಮುಹೂರ್ತ: ಮಧ್ಯಾಹ್ನ 1:22 ರಿಂದ 3:41. ಮಧ್ಯಾಹ್ನ ಲಕ್ಷ್ಮಿ ಪೂಜೆಗೆ ಶುಭ ಅವಧಿ: 2 ಗಂಟೆ 19 ನಿಮಿಷ. ಸಂಜೆ ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತ: ಸಂಜೆ 7:27 ರಿಂದ ರಾತ್ರಿ 8:54 ರವರೆಗೆ. ಸಂಜೆ ಲಕ್ಷ್ಮಿ ಪೂಜೆಗೆ ಶುಭ ಅವಧಿ: 1 ಗಂಟೆ 27 ನಿಮಿಷ. ಮಧ್ಯರಾತ್ರಿ ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತ: ಆಗಸ್ಟ್ 8ರಂದು ರಾತ್ರಿ 11:55 ರಿಂದ ಆಗಸ್ಟ್ 9ರಂದು ಮುಂಜಾನೆ 01:50 ರವರೆಗೆ. ಮಧ್ಯರಾತ್ರಿ ಲಕ್ಷ್ಮಿ ಪೂಜೆಗೆ ಶುಭ ಅವಧಿ: ಗಂಟೆ 56 ನಿಮಿಷ.