ಗುಬ್ಬಿ:
ಗಂಡ ಸತ್ತು ಹದಿನೈದು ದಿನಗಳಲ್ಲಿ ವಿದವಾವೇತನ ಕೊಡಿಸಿದ ಪಟ್ಟಣ ಪಂಚಾಯ್ತಿ ಸದಸ್ಯ,ಗುಬ್ಬಿ ಪಟ್ಟಣ ಪಂಚಾಯ್ತಿಯ ಸದಸ್ಯರಾದ ಜಿ ಆರ್ ಶಿವಕುಮಾರ್ ಮೊದಲಿನಿಂದಲೂ ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ಅದರಂತೆ ಇತ್ತಿಚೆಗೆ ನಿಧನರಾದ ಕೃಷ್ಣಾಚಾರ್ ರವರ ಧರ್ಮ ಪತ್ನಿಗೆ 15 ದಿನಗಳಲ್ಲಿ ವಿಧವಾವೇತನ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಡವರು ಕೂಲಿ ಕಾರ್ಮಿಕರು, ನಿರಾಶ್ರಿತರು ವಯೋವೃದ್ದರು ಅವಲಂಬಿತರಾಗಿರುವುದು ವಿಧವಾ ವೇತನ, ವೃದ್ಧಾಪ್ಯ ವೇತನ ದಂತಹ ಹಣವನ್ನು ಇಂತವರಿಗೆ ಸದಾ ಸಹಾಯ ಮಾಡುವ ಶಿವಕುಮಾರ್ ಗುಬ್ಬಿಯಲ್ಲೇ ಸದಸ್ಯರಾಗಿ ಇಲ್ಲಿಯವರೆಗೆ ಆಯ್ಕೆಯಾಗುತ್ತಾ ಬಂದಿದ್ದಾರೆ ಸದಾ ದುಡ್ಡು ಮಾಡುವುದು ಗುತ್ತಿಗೆದಾರರಾಗುವುದು ಪಟ್ಟಣ ಪಂಚಾಯಿತಿ ಯಲ್ಲಿ ಸಾರ್ವಜನಿಕರ ಹಣ ಲೂಟಿ ಮಾಡುವವರ ಮಧ್ಯೆ ಇವರು ಮಾದರಿಯಾಗಿದ್ದಾರೆ
