ಹುಬ್ಬಳ್ಳಿ : 45 ಅಪರಾಧಿಗಳಿಗೆ 6 ತಿಂಗಳು ಗಡಿಪಾರು : ಎನ್.ಶಶಿಕುಮಾರ

ಹುಬ್ಬಳ್ಳಿ:

    ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿರಂತರ ಅಪರಾಧ ಕೃತ್ಯಗಳಲ್ಲಿ ಭಾಗವಹಿಸುತ್ತಿದ್ದ ೪೫ ಅಪರಾಧಿಗಳನ್ನು ೬ ತಿಂಗಳು ಗಡಿಪಾರು ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ ತಿಳಿಸಿದರು‌.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಗಡಿಪಾರು ಅಪರಾಧಿಗಳು ಕೊಲೆ, ಕೊಲೆ ಯತ್ನ, ದರೋಡೆ, ಹಲ್ಲೆಗಳಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದರು.

   ಸಾಮಾನ್ಯವಾಗಿ ಚುನಾವಣೆ, ಗಲಭೆಗಳಂತಹ ಪ್ರಕರಣ ನಡೆದಾಗ ಗಡಿಪಾರು ಮಾಡಲಾಗುತ್ತಿತ್ತು. ‌ಈಗ ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ತಡೆಯುವ ಉದ್ದೇಶದಿಂದ ಮಾಡಲಾಗುತ್ತಿದೆ. ಆದ್ದರಿಂದ ಗಡಿಪಾರು ಮಾಡುವ ಮೂಲಕ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು

Recent Articles

spot_img

Related Stories

Share via
Copy link