ಸಚಿನ್‌ ತೆಂಡೂಲ್ಕರ್‌ರ 100 ಶತಕಗಳ ದಾಖಲೆ ಮುರಿಯುತ್ತಾರಾ ವಿರಾಟ್‌ ಕೊಹ್ಲಿ…….?

ಮುಂಬೈ: 

     ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧದ  ಏಕದಿನ ಸರಣಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನದಲ್ಲಿ 84 ಶತಕಗಳನ್ನು ಸಿಡಿಸಿದ್ದಾರೆ. ಸದ್ಯ ಟಿ20ಐ ಮತ್ತು ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿರುವ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಮುಂದುವರಿಯುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಲ್ಲಿ ಸತತ ಎರಡು ಶತಕ ಬಾರಿಸಿರುವ ಕೊಹ್ಲಿ, ಜಾಗತಿಕ ಕ್ರಿಕೆಟ್‌ ವೇದಿಕೆಯಲ್ಲಿ ಇನ್ನೊಂದು ಐತಿಹಾಸಿಕ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ. ಸಚಿನ್‌ ತೆಂಡೂಲ್ಕರ್‌   ಅವರ 100 ಶತಕಗಳ ದಾಖಲೆಯನ್ನು ವಿರಾಟ್‌ ಕೊಹ್ಲಿ ಮುರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

     ಸಚಿನ್‌ ತೆಂಡೂಲ್ಕರ್‌ ಅವರ 100 ಶತಕಗಳ ದಾಖಲೆಯನ್ನು ಮುರಿಯಲು ವಿರಾಟ್‌ ಕೊಹ್ಲಿಗೆ ಇನ್ನೂ 16 ಶತಕಗಳ ಅಗತ್ಯವಿದೆ. ಭಾರತದ ಮುಂದಿನ ಏಕದಿನ ವೇಳಾಪಟ್ಟಿ ನೋಡುವುದಾದರೆ, 2027ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯು 2027ರ ಅಕ್ಟೋಬರ್‌-ನವೆಂಬರ್‌ ಅವಧಿಯಲ್ಲಿ ನಡೆಯಲಿದ್ದು, ಭಾರತ ಪೈನಲ್‌ ತಲುಪಿದರೆ 10-11 ಪಂದ್ಯಗಳನ್ನು ಆಡಬಹುದು. 2016 ರಿಂದ 2018ರವರೆಗೆ ಕೊಹ್ಲಿ ಅವರು 50 ಪಂದ್ಯಗಳಲ್ಲಿ ಪ್ರತಿ ಇನಿಂಗ್ಸ್‌ಗೆ 3.33ರ ದರದಲ್ಲಿ 15 ಶತಕಗಳನ್ನು ಸಿಡಿಸಿದ್ದಾರೆ. ಇನ್ನು ಇವರು 2017-2019ರ ನಡುವೆ ಅವರು 65 ಇನಿಂಗ್ಸ್‌ಗಳಲ್ಲಿ 17 ಏಕದಿನ ಶತಕ ಬಾರಿಸಿದ್ದರು. ಕೊನೆಯ 19 ಏಕದಿನ ಪಂದ್ಯಗಳಲ್ಲಿ ರಾಂಚಿ ಮತ್ತು ರಾಯ್ಪುರ್‌ ಸೇರಿದಂತೆ ಐದು ಶತಕಗಳನ್ನು ಗಳಿಸಿದ್ದಾರೆ. 

    ಭಾರತ ತಂಡ ಮುಂಬರುವ ಏಷ್ಯಾಕಪ್‌ ಮತ್ತು ವಿಶ್ವಕಪ್‌ ಟೂರ್ನಿಯಲ್ಲಿ ಸುಮಾರು 38 ಏಕದಿನ ಪಂದ್ಯಗಳನ್ನು ಆಡಬಹುದು. 2027ರ ಐಪಿಎಲ್‌ ಬಳಿಕ ಟೀಮ್‌ ಇಂಡಿಯಾ ಕನಿಷ್ಠ ಎರಡು ಅಥವಾ ಮೂರು ಸರಣಿಗಳಲ್ಲಿ 6-9 ಪಂದ್ಯಗಳನ್ನಾಡಬಹುದು. ಆದ್ದರಿಂದ ಭಾರತ ಒಟ್ಟು 2027ರ ವಿಶ್ವಕಪ್‌ ಟೂರ್ನಿಯವರೆಗೆ 40 ರಿಂದ 45 ಏಕದಿನ ಪಂದ್ಯಗಳನ್ನಾಡಬಹುದು ಎನ್ನುವ ಲೆಕ್ಕಾಚಾರವಿದೆ. ಕೊಹ್ಲಿಯವರು ಈ ಎಲ್ಲಾ ಪಂದ್ಯಗಳನ್ನಾಡಿ 16 ಶತಕಗಳನ್ನು ಬಾರಿಸಿದರೆ ಸಚಿನ್‌ ದಾಖಲೆ ಮುರಿಯಬಹುದು ಎನ್ನಲಾಗುತ್ತಿದೆ.

Recent Articles

spot_img

Related Stories

Share via
Copy link