ಬೆಂಗಳೂರು :
ಅಹಿತವಾದದ್ದು, ಅಶುಭವಾದದ್ದು ನಡೆಯುವ ಮುನ್ಸೂಚನೆ ಸಿಕ್ಕಿದ್ದರೆ ಎಚ್ಚರಿಕೆ ವಹಿಸಬಹುದಿತ್ತು ಎನಿಸುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಜ್ಯೋತಿಷಿ ಗಾಯತ್ರಿ ದೇವಿ ವಾಸುದೇವ್ ಅವರು ತಮ್ಮ ಮಾಡರ್ನ್ ಅಸ್ಟ್ರಾಲಜಿ ಇಂಗ್ಲಿಷ್ ಮಾಸಪತ್ರಿಕೆಯ ಜನವರಿ ಸಂಚಿಕೆಯಲ್ಲಿಯೇ ಮುಂದಿನ ಯುಗಾದಿ, ಅಂದರೆ 2026ನೇ ಇಸವಿಯ ತನಕ ಏನೇನು ಒಳ್ಳೆಯದು ಹಾಗೂ ಕೆಟ್ಟದ್ದು ಸಂಭವಿಸಬಹುದು ಎಂಬ ಬಗ್ಗೆ ಲೇಖನ ಬರೆದಿದ್ದಾರೆ ಹಾಗೂ ಅದು ಪ್ರಕಟವಾಗಿದೆ. ಅದರಲ್ಲಿ ಎಚ್ಚರಿಕೆ ಎನಿಸುವಂಥದ್ದು ಹಾಗೂ ಪ್ರಮುಖ ಎನಿಸುವಂಥದ್ದು ಆಯ್ದು ಇಲ್ಲಿ ಪ್ರಕಟಿಸಲಾಗಿದೆ.








