ನವದೆಹಲಿ:
ಲೋಕಸಭೆ ಚುನಾವಣೆ 2024ರ ಚುನಾವಣಾ ದಿನಾಂಕ ಘೋಷಣೆ ಆಗಿದೆ. ಜಗತ್ತಿಗೆ ಜಗತ್ತೇ ಭಾರತದ ಲೋಕಸಭೆ ಚುನಾವಣೆಗೆ ಕಾಯುತ್ತಿದೆ. ಯಾಕಂದ್ರೆ ಭಾರತ ಈಗ ಜಾಗತಿಕ ಶಕ್ತಿ & ಪ್ರಬಲ ಆರ್ಥಿಕ ರಾಷ್ಟ್ರವಾಗಿ ಬೆಳೆಯುತ್ತಿದೆ. ಹೀಗಾಗಿ ಇಡೀ ಪ್ರಪಂಚ ಭಾರತದ ಲೋಕಸಭೆ ಚುನಾವಣೆ ಮೇಲೆ ಗಮನ ಇಟ್ಟು ಕೂತಿರುವ ಸಮಯದಲ್ಲೇ ಭಾರತೀಯ ಚುನಾವಣೆ ಆಯೋಗ ಮಹತ್ವದ ಘೋಷಣೆ ಹೊರಡಿಸಿದೆ. ಹಾಗಾದರೆ ಎಷ್ಟು ಕೋಟಿ ಭಾರತೀಯರು ವೋಟಿಂಗ್ ಮಾಡುತ್ತಿದ್ದಾರೆ ಗೊತ್ತಾ? ಯಾವಾಗ ಭಾರತದ ಲೋಕಸಭೆ ಚುನಾವಣೆ ನಡೆಯಲಿದೆ?
ಜಾಗತಿಕವಾಗಿ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ ಹೆಗ್ಗಳಿಕೆ ನಮ್ಮ ಭಾರತಕ್ಕೆ ಇದ್ದು, ಪ್ರಪಂಚದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭಾರತ ಮಾದರಿ ಆಗಿದೆ. ಹೀಗಿದ್ದಾಗ ಲೋಕಸಭೆಗೂ ದಿನಾಂಕ ಘೋಷಣೆ ಆಗಿದೆ. ಈ ಸಮಯದಲ್ಲಿ ಈಗ ಭಾರತದಲ್ಲಿ ಇರುವ ಒಟ್ಟು ಮತದಾರರ ಸಂಖ್ಯೆಯನ್ನು ಚುನಾವಣಾ ಆಯೋಗವು ತಿಳಿಸಿದ್ದು, ಹಾಗಾದರೆ 2024ರ ಲೋಕಸಭೆಯಲ್ಲಿ ಎಷ್ಟು ಕೋಟಿ ಜನ ಮತ ಚಲಾವಣೆ ಮಾಡಲಿದ್ದಾರೆ.
ಇದೀಗ ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ. ಭಾರತದಲ್ಲಿ ಒಟ್ಟು 97 ಕೋಟಿ ಮತದಾರರು ಇದ್ದು, 49.7 ಕೋಟಿ ಪುರಷ ಮತದಾರರು & 47.1ಕೋಟಿ ಮಹಿಳಾ ಮತದಾರರು ಇದ್ದಾರೆ. ಹಾಗೇ 85 ವರ್ಷ ಮೇಲ್ಪಟ್ಟ, 82 ಲಕ್ಷ ಹಿರಿಯ ಮತದಾರರು ಇದ್ದಾರೆ ಎಂದು ಚುನಾವಣಾ ಆಯೋಗ ಈಗ ತಿಳಿಸಿದೆ. ಈ ನಡುವೆ 9.24 ಕೋಟಿ ಯುವ ಮತದಾರರು ಕೂಡ 2024ರ ಲೋಕಸಭೆ ಚುನಾವಣೆಯಲ್ಲಿ ಮತ ಚಲಾವಣೆ ಮಾಡಲಿದ್ದಾರೆ. ಹಾಗಾದರೆ ಒಟ್ಟು ಎಷ್ಟು ಮತ ಯಂತ್ರಗಳ ಬಳಕೆ ಆಗಲಿದೆ ಗೊತ್ತೆ? ಮುಂದೆ ಓದಿ.
ಈಗಿನ ಮಾಹಿತಿ ಪ್ರಕಾರ ಒಟ್ಟು 55 ಲಕ್ಷ ಮತಯಂತ್ರಗಳ ಬಳಸಲು, ಭಾರತ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಇದಕ್ಕೆ ಅಗತ್ಯ ಇರುವ ಕ್ರಮಗಳನ್ನು ಕೂಡ ಕೈಗೊಂಡು ಸಕಲ ಸಿದ್ಧತೆ ನಡೆಸಿದೆ. ಒಂದು ಕಡೆ ಮತಯಂತ್ರ ಬಳಕೆ ಬಗ್ಗೆ ಪರ & ವಿರೋಧದ ಮಾತು ಕೇಳಿಬರುತ್ತಿರುವ ಸಮಯದಲ್ಲೇ ಇಂತಹ ನಿರ್ಧಾರವನ್ನು ಕೈಗೊಂಡಿದೆ ಭಾರತದ ಚುನಾವಣಾ ಆಯೋಗ. ಈ ಮೂಲಕ ಅಚ್ಚುಕಟ್ಟಾಗಿ 2024ರ ಲೋಕಸಭೆ ಚುನಾವಣೆ ನಡೆಸಲು ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗಿದೆ.
ಈಗ ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ ಭಾರತದಲ್ಲಿ 2024ರ ಲೋಕಸಭೆ ಚುನಾವಣೆ ಏಪ್ರಿಲ್ 19 ರಿಂದ ಜೂನ್ 1 ರವರೆಗೆ ನಡೆಯಲಿದೆ. ಇದಕ್ಕೆ ಬೇಕಾಗಿರುವ ಎಲ್ಲಾ ತಯಾರಿ ಮಾಡಿಕೊಂಡು, ಚುನಾವಣಾ ಅಧಿಕಾರಿಗಳು ಭದ್ರತೆನ ಕೈಗೊಳ್ಳಲಿದ್ದಾರೆ. 2024ರ ಲೋಕಸಭೆ ಚುನಾವಣೆ ಫಲಿತಾಂಶವು ಜೂನ್ 4ರಂದು ಹೊರಬೀಳಲಿದೆ. ಹೀಗೆ ಶತಕೋಟಿ ಭಾರತೀಯರು ಇಷ್ಟು ದಿನಗಳ ಕಾಲ ಕಾಯ್ತಿದ್ದ ಸಮಯ ಬಂದಿದ್ದು, ರಾಜಕೀಯ ಪಕ್ಷಗಳ ಚುನಾವಣಾ ಯುದ್ಧಕ್ಕೆ ರಣಕಹಳೆ ಇದೀಗ ಮೊಳಗಿದೆ.
ಚುನಾವಣಾ ಅಧಿಕಾರಿಗಳು ತಿಳಿಸಿರುವ ಪ್ರಕಾರ, ಚುನಾವಣಾ ಆಯೋಗದ ನಿಯಮ ಮೀರುವ ಯಾರೇ ಆದರೂ ಕಠಿಣ ಕ್ರಮ ಗ್ಯಾರಂಟಿ. ಹೀಗಾಗಿ ಚುನಾವಣಾ ಅಕ್ರಮಗಳನ್ನ ತಡೆಯಲು ಖಡಕ್ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಚುನಾವಣಾ ಅಧಿಕಾರಿಗಳು ದೇಶದ ಮೂಲೆ ಮೂಲೆಯಲ್ಲೂ ಈ ಕುರಿತು ಹದ್ದಿನ ಕಣ್ಣು ಇಡಲಿದ್ದಾರೆ. ಭಾರತದ 543 ಲೋಕಸಭಾ ಕ್ಷೇತ್ರಗಳಿಗೆ ಈ ಮೂಲಕ ಚುನಾವಣೆ ನಡೆಯಲಿದೆ. ಹಾಗೇ ಇನ್ನೇನು ಕೆಲವೇ ದಿನಗಳಲ್ಲಿ ಭಾರತದಲ್ಲಿ ಯಾವ ಪಕ್ಷದ ಸರ್ಕಾರ ರಚನೆ ಆಗಲಿದೆ? ಎಂಬ ಪ್ರಶ್ನೆಗೆ ಉತ್ತರವು ಸಿಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ