ನಾಳೆ ಮತದಾನ; ಬೆಳಗ್ಗೆ 7 ಗಂಟೆಯಿಂದ ವೋಟಿಂಗ್ ಶುರು

ಬೆಂಗಳೂರು:

    ಇಂದು ಮನೆ ಮನೆ ತೆರಳಿ  ಮತಬೇಟೆ ರಾಜ್ಯದಲ್ಲಿ ನಡೆಯಲಿರೋ ಮೊದಲ ಹಂತದ 14 ಕ್ಷೇತ್ರಗಳ  ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬಿದ್ದಿದೆ. ನಿನ್ನೆ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು, ಸದ್ಯ ಮನೆ ಮನೆ ಪ್ರಚಾರ ಶುರುವಾಗಿದೆ.

    ನೀತಿ ಸಂಹಿತೆ ಉಲ್ಲಂಘನೆಯಾಗದಂತೆ  ಚುನವಣಾ ಆಯೋಗ  ಹದ್ದಿನ ಕಣ್ಣಿಟ್ಟಿದೆ. 14 ಕ್ಷೇತ್ರಗಳ ಅಭ್ಯರ್ಥಿಗಳು ಇಂದು ಮನೆ ಮನೆಗೆ ತೆರಳಿ ಪ್ರಚಾರ ನಡೆಸಲಿದ್ದಾರೆ.

   ಮನೆ ಮನೆ ಪ್ರಚಾರದ ವೇಳೆ ಅಭ್ಯರ್ಥಿ ಜೊತೆ 5 ಜನಕ್ಕಿಂತ ಹೆಚ್ಚು ಜನರು ಇರುವಂತಿಲ್ಲ. ಧ್ವನಿ ವರ್ಧಕ ಬಳಸದೇ ಮತಯಾಚನೆ ಮಾಡಬಹುದಾಗಿದೆ. ಇನ್ನು ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ಬಿಟ್ಟು ಕ್ಷೇತ್ರಕ್ಕೆ ಸಂಬಂಧಪಡದ ವ್ಯಕ್ತಿಗಳು ಕಾಣಿಸಿಕೊಳ್ಳುವಂತಿಲ್ಲ. ಮತದಾನಕ್ಕೂ 48 ಗಂಟೆ ಮೊದಲು ಶೂನ್ಯ ಅವಧಿ ಹಿನ್ನೆಲೆ ಯಾವುದೇ ರೀತಿ ಅಬ್ಬರದ ಪ್ರಚಾರ ನಡೆಸುವಂತಿಲ್ಲ.
    ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯ ಮತದಾನ ನಾಳೆ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಲಿದೆ. 14 ಕ್ಷೇತ್ರಗಳಲ್ಲಿ ಮತದಾನಕ್ಕೆ ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ ಹಾಗೂ ಕೋಲಾರದಲ್ಲಿ ಮತದಾನ ನಡೆಯಲಿದೆ.

 

•             14 ಕ್ಷೇತ್ರಗಳಲ್ಲಿ ಒಟ್ಟು 2,88,19,342 ಮತದಾರರು

•             1,44,28,099 ಪುರುಷ, 1,43,88,176 ಮಹಿಳೆಯರು

•             3,067 ತೃತೀಯ ಲಿಂಗಿಗಳು ಮತದಾರರು

•             30,602 ಮತಗಟ್ಟೆ, 4 ಲಕ್ಷ ಮತಗಟ್ಟೆ ಅಧಿಕಾರಿಗಳು ರೆಡಿ

•             5,000 ಮೈಕ್ರೋ ಅಬ್ಸರ್ವರ್ಗಳ ನೇಮಕ

•             50,000 ಸಿವಿಲ್ ಪೊಲೀಸ್ ಸಿಬ್ಬಂದಿ ನಿಯೋಜನೆ

•             65 ಅರೆಸೇನಾ ಪಡೆ ತುಕಡಿ, ಸಶಸ್ತ್ರ ಪೊಲೀಸ್ ಪಡೆ ಕಾವಲು

   ನಾಳೆ ಮೊದಲ ಹಂತದ ಲೋಕಸಭೆ ಚುನಾವಣೆ ಹಿನ್ನೆಲೆ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ನಾಳೆ ಮೊದಲ ಹಂತದ ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನದಲ್ಲಿ ಪುರಷರಿಗಿಂತ ಮಹಿಳೆಯರು ಹೆಚ್ಚು ಮತದಾರರಿದ್ದಾರೆ. ಮತಗಟ್ಟೆಯಿಂದ 200 ಮೀಟರ್ ದೂರದಲ್ಲಿ ಏಜೆಂಟ್ಗಳು ಕೂರಬಹುದು. ಮಾಧ್ಯಮದಲ್ಲಿ ಯಾವುದೇ ಸರ್ವೆಗೆ ಅವಕಾಶವಿಲ್ಲ ಎಂದಿದ್ದಾರೆ. 

    ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಗ್ಯಾರಂಟಿ ಕಾರ್ಡ್ ಗಳ ವಿತರಣೆ ಆರೋಪ ಸದ್ದು ಮಾಡಿತ್ತು. ಹೀಗಾಗಿ ಕ್ಷೇತ್ರದಲ್ಲಿ ಭದ್ರತೆಗೆ ಪ್ಯಾರಾ ಮಿಲಿಟರಿ ಕರೆಸುವಂತೆ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಏಳು ಪ್ಯಾರಾ ಮಿಲಿಟರಿ ಫೋರ್ಸ್ ಕೊಟ್ಟಿದ್ದು, ಚುನಾವಣಾ ಅಕ್ರಮದ ಮೇಲೆ ಕಣ್ಣಿಟ್ಟಿದೆ.

Recent Articles

spot_img

Related Stories

Share via
Copy link
Powered by Social Snap