ರಾಂಚಿ:
ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಬುಧವಾರ ಬಜರಂಗದಳದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಮತ್ತು ಅಗತ್ಯವಿದ್ದರೆ ರಾಜ್ಯದಲ್ಲಿ ಬಜರಂಗದಳವನ್ನು ನಿಷೇಧಿಸಲು ರಾಜ್ಯ ಸರ್ಕಾರ ಪರಿಗಣಿಸಬಹುದು ಎಂದು ಹೇಳಿದ್ದಾರೆ.
ಎರಡೂ ರಾಜ್ಯಗಳಲ್ಲಿನ ಪರಿಸ್ಥಿತಿಗಳು ವಿಭಿನ್ನವಾಗಿರುವುದರಿಂದ ಕರ್ನಾಟಕದಲ್ಲಿ ತೆಗೆದುಕೊಂಡ ನಿರ್ಧಾರಗಳು ಛತ್ತೀಸ್ಗಢಕ್ಕೆ ಅನ್ವಯಿಸುವುದಿಲ್ಲ ಎಂದು ಬಾಘೇಲ್ ಹೇಳಿದರು.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ಬಜರಂಗದಳದಂತಹ ಸಂಘಟನೆಗಳನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಈ ವಾರದ ಆರಂಭದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಹಿನ್ನೆಲೆಯಲ್ಲಿ ಅವರು ಹೇಳಿರುವುದು ಈಗ ಕೂತುಹಲ ಮೂಡಿಸಿದೆ.
‘ಭಜರಂಗಿಗಳು ಇಲ್ಲಿ (ಛತ್ತೀಸ್ಗಢದಲ್ಲಿ) ಕೆಲವು ತೊಂದರೆಗಳನ್ನು ಉಂಟುಮಾಡಿದರು, ಆದರೆ ನಾವು ಅವುಗಳನ್ನು ಸರಿಪಡಿಸಿದ್ದೇವೆ … ಕರ್ನಾಟಕ ಕಾಂಗ್ರೆಸ್ ನ ನಿರ್ಧಾರಗಳು ಛತ್ತೀಸ್ ಗಢಕ್ಕೂ ಅನ್ವಯವಾಗಬೇಕೆಂದೇನಿಲ್ಲ. ಅಗತ್ಯವಿದ್ದರೆ, ನಾವು ಅದರ ಬಗ್ಗೆ ಯೋಚಿಸುತ್ತೇವೆ … ನಮ್ಮ ನಾಯಕರು ಮತ್ತು ಪಕ್ಷದ ಪದಾಧಿಕಾರಿಗಳು ಕರ್ನಾಟಕದಲ್ಲಿ ಇರುವ ಸಮಸ್ಯೆಗಳ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ’ ಎಂದು ಸಿಎಂ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
