ರಾಮನಗರ:
ಕನಕಪುರ ತಾಲ್ಲೂಕು ಕಚೇರಿಗೆ ಗುರುವಾರ ನಾಲ್ವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ದಾಖಲೆಗಳ ಪರಿಶೀಲನೆ ನಡೆಸಿದೆ.
ಸಚಿವ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಅವರ ಕುಟುಂಬಕ್ಕೆ ಸೇರಿದ ಜಮೀನುಗಳ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೂ ಐ.ಟಿ. ಅಧಿಕಾರಿಗಳ ತಂಡವು ಕನಕಪುರ ತಾಲ್ಲೂಕು ಕಚೇರಿ ಮೇಲೆ ದಾಳಿ ನಡೆಸಿ ಡಿಕೆಶಿ ಕುಟುಂಬದ ಆಸ್ತಿಗಳ ವಿವರ ಕಲೆ ಹಾಕಿತ್ತು. ಈಗ ಮತ್ತೆ ಲೋಕಸಭಾ ಚುನಾವಣೆಗೂ ಮುನ್ನವೇ ಮತ್ತೆ ಐಟಿ ಅಧಿಕಾರಿಗಳು ಡಿಕೆ ಸಹೋದರರಿಗೆ ಶಾಕ್ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ