15 ಸ್ಥಳಗಳಲ್ಲಿ ಜಲ ಸಂಗ್ರಹ, ಮೇ 8ರಂದು ಸಮಾವೇಶ, ನೀರಾವರಿ ಯೋಜನೆಗಳ ಜಾರಿಗೆ ಜೆಡಿಎಸ್ ಸಂಕಲ್ಪ

ಬೆಂಗಳೂರು:

ಬೆಂಗಳೂರು, ಏ.13- ಜಲಶ್ಯಾಮಲದಿಂದ ಸಸ್ಯಶಾಮಲ ಎಂಬ ಧ್ಯೇಯದೊಂದಿಗೆ ಜೆಡಿಎಸ್ ಹಮ್ಮಿಕೊಂಡಿರುವ ಮಹತ್ವದ ಜನತಾ ಜಲಧಾರೆ ಕಾರ್ಯಕ್ರಮದ ಅಂಗವಾಗಿ ಏ.16ರಂದು 15 ಸ್ಥಳಗಳಲ್ಲಿ ಜಲಸಂಗ್ರಹವನ್ನು ಮಾಡಲಾಗುತ್ತದೆ.

  ಆಲಮಟ್ಟಿ ಜಲಾಶಯದ ಕೃಷ್ಣನದಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೆಆರ್‍ಎಸ್‍ನಲ್ಲಿ ಕಾವೇರಿ ನದಿಯಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ತಲಕಾವೇರಿಯಲ್ಲಿ ಯುವ ಜೆಡಿಎಸ್ ಘಟಕದ ಅಧ್ಯಕ್ಷ ನಿಖಿಲ್‍ಕುಮಾರಸ್ವಾಮಿ, ಶ್ರೀರಾಮದೇವರ ಕಟ್ಟೆಯ ಹೇಮಾವತಿ ನದಿಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ, ಎತ್ತಿನಹೊಳೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಮೇಕೆದಾಟು ಮತ್ತು ಹಾರೋಬೆಲೆಯಲ್ಲಿ ಶಾಸಕರಾದ ಅನಿತಾಕುಮಾರಸ್ವಾಮಿ, ಎ.ಮಂಜುನಾಥ್, ಕಣಕುಂಬಿಯ ಮಹದಾಯಿ ನದಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಂಜ್ರಾದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶ್ಯಂಪುರ್ ಜಲ ಸಂಗ್ರಹ ಮಾಡಲಿದ್ದಾರೆ.

ಕಿತ್ತೂಗೆಯಲು ಏನು ಕೊತ್ತಂಬರಿ ಸೊಪ್ಪಾ? ಸಿದ್ದರಾಮಯ್ಯಗೆ ಶ್ರೀರಾಮುಲು ಪ್ರಶ್ನೆ

ಉಳಿದಂತೆ ನಿಗದಿಪಡಿಸಲಾದ 15 ಸ್ಥಳಗಳಲ್ಲಿ ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಸಂಸದರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ರ್ಪಸಲು ಆಕಾಂಕ್ಷೆ ಹೊಂದಿರುವವರು ಸೇರಿದಂತೆ ಪಕ್ಷದ ಮುಖಂಡರು ಜಲಸಂಗ್ರಹದ ಜವಾಬ್ದಾರಿಯನ್ನು ಹೊತ್ತಿದ್ದಾರೆ.

15 ನದಿಗಳಿಂದ ಏಕಕಾಲದಲ್ಲಿ ಪವಿತ್ರ ಜಲವನ್ನು ಸಂಗ್ರಹ ಮಾಡಲಾಗುತ್ತದೆ. ನದಿನೀರಿನ ಸದ್ಬಳಕೆ, ನೀರಾವರಿ ಯೋಜನೆಗಳ ವೇಗ ಹೆಚ್ಚಿಸುವುದು, ಪ್ರತಿ ಜಿಲ್ಲೆಯಲ್ಲೂ ನೀರಿನ ಸಮಾನತೆ ಸೇರಿದಂತೆ ವಿವಿಧ ಆಶಯಗಳನ್ನು ಜನತಾ ಜಲಧಾರೆ ಹೊಂದಿದೆ.

ಜನತಾ ಜಲಧಾರೆ ರಥ ಪ್ರವಾಸ ಮಾಡುವ ಮಾರ್ಗದಲ್ಲಿ ರಾಜ್ಯದ ನೀರಾವರಿ ಯೋಜನೆಗಳ ವಿಚಾರದಲ್ಲಿ ಸರ್ಕಾರಗಳ ವೈಫಲ್ಯ ಹಾಗೂ ಜೆಡಿಎಸ್ ಅಕಾರಕ್ಕೆ ಬಂದರೆ ನೀರಾವರಿ ಯೋಜನೆಗಳ ಅನುಷ್ಠಾನ ಮಾಡುವ ಭರವಸೆಯೊಂದಿಗೆ ಪ್ರಚಾರ ಮಾಡಲಾಗುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಿರುವ 15 ಗಂಗಾರಥಗಳು 31 ಜಿಲ್ಲೆಗಳ 184 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ನೀರಾವರಿ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸಲಿವೆ.

ವೇಶ್ಯಾಗೃಹದ ದಾಳಿ ವೇಳೆ ಸಿಕ್ಕಿಬಿದ್ದ ಗ್ರಾಹಕನನ್ನು ಬಂಧಿಸುವಂತಿಲ್ಲ; ಕರ್ನಾಟಕ ಹೈಕೋರ್ಟ್​ ಆದೇಶ

15 ನದಿಗಳಿಂದ ಕಳಶಗಳ ಮೂಲಕ ಜಲವನ್ನು ಸಂಗ್ರಹಿಸಿ ಮೆರವಣಿಗೆ ಮೂಲಕ ಮೇ ಮೊದಲವಾರ ಬೆಂಗಳೂರಿಗೆ ತರಲಾಗುತ್ತದೆ. ಈ ರೀತಿ ತಂದ ಜಲವನ್ನು ಬ್ರಹ್ಮಕಳಶದಲ್ಲಿ ಸಂಗ್ರಹಿಸಿ ಜೆಡಿಎಸ್ ಕಚೇರಿಯಲ್ಲಿ ಪ್ರತಿಷ್ಠಾಪನೆ ಮಾಡಿ ಒಂದು ವರ್ಷ ಕಾಲ ಬೆಳಗ್ಗೆ, ಸಂಜೆ ಗಂಗಾಪೂಜೆ ಮಾಡಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಮೇ 8ರಂದು ಅರಮನೆ ಮೈದಾನದಲ್ಲಿ ದೊಡ್ಡ ಸಮಾವೇಶ ಮಾಡಿ ನೀರಾವರಿ ಯೋಜನೆಗಳ ಜಾರಿ ಬಗ್ಗೆ ಸಂಕಲ್ಪ ಮಾಡಲಾಗುತ್ತದೆ.
ಕಳೆದ 75 ವರ್ಷಗಳಿಂದ ನೀರಾವರಿ ಯೋಜನೆ ವಿಚಾರದಲ್ಲಿ ಆಗಿರುವ ಅನ್ಯಾಯವನ್ನು ಜೆಡಿಎಸ್‍ಗೆ ಅಕಾರ ಕೊಟ್ಟ ಐದೇ ವರ್ಷದಲ್ಲಿ ಸರಿಪಡಿಸಲಾಗುವುದು ಎಂಬ ಭರವಸೆಯನ್ನು ಈಗಾಗಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ್ದಾರೆ.

ನಿನ್ನೆ ಮೈಸೂರಿನ ಹಾಗೂ ರಾಮನಗರದ ಚಾಮುಂಡೇಶ್ವರಿ ದೇವಾಲಯಗಳÀಲ್ಲಿ ವಿಶೇಷ ಪೂಜೆ ನಡೆಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಚಾಮುಂಡೇಶ್ವರಿ ಬೆಟ್ಟದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗಂಗಾರಥಕ್ಕೆ ಚಾಲನೆ ನೀಡಿದ್ದರು. ರಾಮನಗರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜನತಾ ಜಲಧಾರೆ ಯಾತ್ರಾರಥಗಳಿಗೆ ಚಾಲನೆ ಕೊಟ್ಟಿದ್ದರು.

ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಸಚಿವ ಈಶ್ವರಪ್ಪ ವಿರುದ್ಧ FIR ದಾಖಲು

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap