ಮುಂಬೈ:
ನಮ್ಮ ಪಕ್ಷದ ಸಿದ್ದಾಂತದ ಅಸ್ಮಿತೆಯಾಗಿದ್ದ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಕದ್ದಿದ್ದಾರೆ. ಕದ್ದ ಕಳ್ಳನಿಗೆ ನಾವು ಪಾಠ ಕಲಿಸಬೇಕಾಗಿದೆ ಎಂದು ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ತಮ್ಮ ಬಣದ ನಾಯಕರ ಸಭೆಯ ಅಧ್ಯಕ್ಷತೆ ವಹಿಸುವ ಮೊದಲು ಇಲ್ಲಿನ ಬಾಂದ್ರಾದಲ್ಲಿರುವ ತಮ್ಮ ನಿವಾಸ ‘ಮಾತೋಶ್ರೀ’ ಹೊರಗೆ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, “ನಮ್ಮ ಬಿಲ್ಲು ಮತ್ತು ಬಾಣವನ್ನು ಕದ್ದಿದ್ದಾರೆ. ಆ ಕಳ್ಳನಿಗೆ ಪಾಠ ಕಲಿಸಬೇಕಾಗಿದೆ. ಆ ಕಳ್ಳ ಸಿಕ್ಕಿಬಿದ್ದಿದ್ದಾನೆ. ನಾನು ಕಳ್ಳನಿಗೆ ಬಿಲ್ಲು ಮತ್ತು ಬಾಣದೊಂದಿಗೆ ಮೈದಾನಕ್ಕೆ ಬರುವಂತೆ ಸವಾಲು ಹಾಕುತ್ತೇನೆ ಮತ್ತು ನಾವು ಕಳ್ಳನನ್ನು ಉರಿಯುತ್ತಿರುವ ಟಾರ್ಚ್‌ನಿಂದ ಎದುರಿಸುತ್ತೇವೆ” ಎಂದು ಠಾಕ್ರೆ ಹೇಳಿದರು.
ಚುನಾವಣಾ ಆಯೋಗ ಶುಕ್ರವಾರ ಶಿವಸೇನೆಯ ಮೂಲ ಚಿಹ್ನೆಯಾದ ‘ಬಿಲ್ಲು ಬಾಣ’ವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ನೀಡುವ ಮೂಲಕ ಉದ್ಧವ್ ಠಾಕ್ರೆ ಬಣಕ್ಕೆ ಶಾಕ್ ನೀಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
