ಬೆಲೆ ಏರಿಸಲ್ಲ ಎಂದ ಹೋಟೆಲ್‌ ಮಾಲೀಕರು : ಇವರು ಮಾಡಿರುವ ಐಡಿಯಾ ಎಂತಹದ್ದು ಗೊತ್ತಾ…?

ಬೆಂಗಳೂರು:

   ಕಾಫಿ-ಟೀ ಬೆಲೆ ಏರಿಕೆ ಮಾಡುವುದಿಲ್ಲ. ಹಾಲನ್ನೇ ಕಡಿಮೆ ಖರೀದಿ ಮಾಡುತ್ತೇವೆಂದು ಬೆಂಗಳೂರು ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘದ ಸದಸ್ಯರು ಹೇಳಿದ್ದಾರೆ.

     ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘದ ಅಧ್ಯಕ್ಷ ಪಿಸಿ.ರಾವ್ ಅವರು ಮಾತಾಡಿ, ಕೆಎಂಎಫ್ ಹಾಲಿನ ದರವನ್ನು ಹೆಚ್ಚಿಸಿಲ್ಲ ಎಂದು ಹೇಳಿದೆ. ಅರ್ಧ/ಒಂದು ಲೀಟರ್ ಪ್ಯಾಕೆಟ್‌ಗೆ 50ಎಂಎಲ್ ಹಾಲನ್ನು ಹೆಚ್ಚು ಸೇರಿಸಿದ್ದು, ಹೆಚ್ಚಿನ ಹಾಲು ಹಿನ್ನೆಲೆಯಲ್ಲಿ ಅದಕ್ಕೆ ಶುಲ್ಕ ವಿಧಿಸಿದೆ. ಇದರಿಂದ ಹೆಚ್ಚಿನ ವ್ಯತ್ಯಾಸವಾಗುದಿಲ್ಲ. ವಾಸ್ತವವಾಗಿ, ನಾವು ಕಡಿಮೆ ಹಾಲು ಖರೀದಿಸುತ್ತೇವೆ. ಉದಾಹರಣೆಗೆ, ಒಂದು ಹೋಟೆಲ್ 100 ಲೀಟರ್ ಖರೀದಿಸುತ್ತಿದ್ದ ಹೋಟೆಲ್ ಇದೀಗ ಕೇವಲ 95 ಲೀಟರ್ ಖರೀದಿಸಲಿದೆ. ಹೀಗಾಗಿ ಬೆಲೆ ಏರಿಕೆ ಮಾಡುವುದಿಲ್ಲ ಎಂದು ಹೇಳಿದರು.

    ಈ ನಡುವೆ 500 ಎಂಎಲ್ ಮತ್ತು 1000 ಎಂಎಲ್ ಪ್ಯಾಕೆಟ್‌ಗಳಿಗೆ ಇನ್ನೂ 2 ರೂಪಾಯಿ ನೀಡುವಂತೆ ಹಲವು ಕೇಳಿದ ಹಾಲು ಮಾರಾಟಗಾರರೊಂದಿಗೆ ಗ್ರಾಹಕರು ವಾಗ್ವಾದಕ್ಕಿಳಿದ ಘಟನೆಗಳು ಕೂಡ ಹಲವೆಡೆ ಕಂಡು ಬಂದಿತ್ತು.

     ಕೆಎಂಎಫ್ ಪ್ರತಿ ಪ್ಯಾಕೆಟ್‌ನಲ್ಲಿ ಹೆಚ್ಚುವರಿ 50 ಎಂಎಲ್ ಘೋಷಿಸಿದೆ. ಆದರೆ, ಪ್ಯಾಕೆಟ್‌ನಲ್ಲಿ ಅದರ ಉಲ್ಲೇಖವಿಲ್ಲ. ಪ್ಯಾಕೆಟ್ ಗಳ ಮೇಲೆ 500ml ಅಥವಾ 1000ml ಅನ್ನೇ ಮುದ್ರಿಸಲಾಗಿದೆ. ಹಾಗಿರುವಾಗ ಹೆಚ್ಚುವರಿ ಹಾಲಿದೆ ಎಂದು ನಂಬುವುದು ಹೇಗೆ? ಬದಲಾವಣೆ ಮಾಡಿರುವುದಾದರೆ, ಪ್ಯಾಕೆಟ್ ಮೇಲೆ ಹೊಸ ಬೆಲೆ ಮತ್ತು ಪ್ರಮಾಣವನ್ನು ಮುದ್ರಿಸಬೇಕು ಎಂದು ಹೇಳಿದ್ದಾರೆ. 

     ‘ಹೆಚ್ಚು ಶುಲ್ಕ ವಿಧಿಸಿ ಹೆಚ್ಚುವರಿ ಹಾಲು ಖರೀದಿಸುವಂತೆ ಸರಕಾರ ಒತ್ತಾಯಿಸುತ್ತಿದೆ. ನಮ್ಮಲ್ಲಿ ಹಲವರು ಹೆಚ್ಚುವರಿ ಹಾಲು ಬಯಸುವುದಿಲ್ಲ. ಸರ್ಕಾರ ತನ್ನ ನಿರ್ಧಾರಗಳನ್ನು ನಮ್ಮ ಮೇಲೆ ಹೇರುವಂತಿಲ್ಲ. ಇದೀಗ ಅಪಾರ್ಟ್ಮೆಂಟ್ ಸಮುಚ್ಚಯದ ಜನರು ಹಾಲಿನ ಬ್ರಾಂಡ್ ಅನ್ನು ಬದಲಾಯಿಸಲು ನಿರ್ಧರಿಸಿದ್ದಾರೆಂದು ಹೇಳಿದ್ದಾರೆ.

     ಹೆಚ್ಚುವರಿ ಹಾಲು ಸಂಗ್ರಹಣೆ ಸಮಸ್ಯೆ ನಿವಾರಣೆಗೆ ಕೆಎಂಎಫ್ ಮತ್ತು ಸರಕಾರ ಪರ್ಯಾಯ ಪರಿಹಾರಕ್ಕೆ ಮುಂದಾಗಬೇಕಿತ್ತು. ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ಹಣ ಬೇಕಾಗಿರುವುದಾದರೆ ನೇರವಾಗಿ ಮಾತನಾಡಬೇಕು. ಇದರಿಂದ ಜನರು ಪರದಾಡುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಏತನ್ಮಧ್ಯೆ, ಬುಧವಾರ ಬೆಳಿಗ್ಗೆಯಿಂದ ಅರ್ಧ / ಒಂದು ಲೀಟರ್ ಪ್ಯಾಕೆಟ್‌ಗಳಿಗೆ 50 ಮಿಲಿ ಹೆಚ್ಚು ಹಾಲನ್ನು ಸೇರಿಸಲಾಗಿದೆ ಎಂದು ಕೆಎಂಎಫ್ ಅಧ್ಯಕ್ಷರು ತಿಳಿಸಿದ್ದಾರೆ.

    ಬೆಳಗ್ಗೆ 10 ಗಂಟೆಯವರೆಗೆ ಬಳಸುತ್ತಿದ್ದ ಪ್ಯಾಕಿಂಗ್ ರೋಲ್‌ಗಳು ಹಳೆಯವು. ಪ್ಯಾಕೆಟ್‌ಗಳ ಮೇಲೆ 500ml ಮತ್ತು 1000ml ಎಂದು ಮುದ್ರಿಸಲಾಗಿತ್ತು. ಆದರೆ, ಅವುಗಳಲ್ಲಿನ ಹಾಲಿನ ಪ್ರಮಾಣವು 550 ಮಿಲಿ ಮತ್ತು 1050 ಮಿಲಿ ಹೊಂದಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap