ಬೆಂಗಳೂರು :
ಬಿಗ್ ಬಾಸ್ ಮನೆಯಲ್ಲಿ ಪ್ರೀತಿ ಹುಟ್ಟುವುದು ಕಾಮನ್. ಆದರೆ ಅದನ್ನು ಮುಂದುವರೆಸಿಕೊಂಡು ಹೋಗುವವರು ಕೆಲವೇ ಮಂದಿ. ಹೀಗೆ ಲವ್ ಮಾಡಿ ಯಶಸ್ವಿಯಾದವರ ಸಂಖ್ಯೆ ತೀರಾ ಕಡಿಮೆ. ಒಳಗಿರುವಾಗ ಸದಾ ಜೊತೆಗಿದ್ದ ಜೋಡಿ ಬಿಗ್ ಬಾಸ್ ಶೋ ಮುಗಿದ್ಮೇಲೆ ಮಾತುಕತೆ ಇಲ್ಲದೇ, ದೂರ ಆಗಿರುವ ಸಾಕಷ್ಟು ಉದಾಹರಣೆಗಳಿವೆ. ಆದರೆ, ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಗಳಾದ ಅರವಿಂದ್ ಕೆಪಿ ಹಾಗೂ ದಿವ್ಯಾ ಉರುಡುಗ ಹಾಗಿಲ್ಲ, ಇವರ ಸ್ಟೋರಿ ಎಲ್ಲದಕ್ಕಿಂತ ಭಿನ್ನವಾಗಿದೆ. ಇವರ ಲವ್ಗೆ ಈಗ ಸುಮಾರು ಐದು ವರ್ಷಗಳು ತುಂಬಿವೆ. ಆದರೆ, ಮದುವೆ ಬಗ್ಗೆ ಮಾತ್ರ ಸುದ್ದಿಯಿಲ್ಲ.
ಬಿಗ್ ಬಾಸ್ ಮುಗಿದ ಬಳಿಕ ಕಿರುತೆರೆಯ ಯಾವುದೇ ಕಾರ್ಯಕ್ರಮ ಇರಲಿ, ಮದುವೆ ಇರಲಿ, ಕ್ರಿಕೆಟ್ ಇರಲಿ, ಸಿನಿಮಾ ಸಂಬಂಧ ಯಾವುದೇ ಕಾರ್ಯಕ್ರಮ ಇರಲಿ, ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆ. ಪಿ ಇಬ್ಬರು ಜೊತೆಯಾಗಿ ಭಾಗಿಯಾಗುತ್ತಿದ್ದರು. ಅಲ್ಲದೇ ಇಬ್ಬರು ಜೊತೆಯಾಗಿ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಇನ್ನು ಇಬ್ಬರ ಹುಟ್ಟುಹಬ್ಬ ಆಚರಣೆ ಹಾಗೂ ಸೋಶಿಯಲ್ ಮೀಡಿಯಾದ ಪೋಸ್ಟ್ನಲ್ಲಿ ದಿವ್ಯಾ ಜೊತೆ ಅರವಿಂದ್ ಇದ್ದೇ ಇರುತ್ತಾರೆ.
ಪ್ರತಿಬಾರಿ ಇವರ ಸಿಕ್ಕಾಗೆಲ್ಲ ಕೇಳುವ ಒಂದೇ ಪ್ರಶ್ನೆ ಮದುವೆ ಯಾವಾಗೆಂದು. ಇದೀಗ ಮತ್ತೊಮ್ಮೆ ಇದೇ ಪ್ರಶ್ನೆಯನ್ನು ದಿವ್ಯಾ ಮುಂದೆ ಕೇಳಲಾಗಿದೆ. ಇದಕ್ಕೆ ಅವರು ಉತ್ತರ ‘ಮದುವೆ ಬಗ್ಗೆ ಕೇಳಬೇಡಿ.’ ಇತ್ತೀಚೆಗೆ ಸಂದರ್ಶನವೊಂದರಲ್ಲಿ ದಿವ್ಯಾ ಬಳಿ ಮದುವೆ ಯಾವಾಗ? ಅನ್ನೋ ಪ್ರಶ್ನೆ ಎದುರಾಗಿದೆ. ಇದಕ್ಕೆ, ‘‘ನನಗೂ ಗೊತ್ತಿಲ್ಲ. ದಯವಿಟ್ಟು ನನ್ನ ಬಳಿ ಇದೊಂದು ಪ್ರಶ್ನೆ ಮಾತ್ರ ಕೇಳಬೇಡಿ. ಆದಾಗ ನಿಮಗೆ ಗೊತ್ತಾಗುತ್ತದೆ. ನಿಮ್ಮ ಕಣ್ಣು ತಪ್ಪಿಸಿ ಏನೂ ಮಾಡೋದಕ್ಕೆ ಆಗಲ್ಲ’’ ಎಂದು ಹೇಳಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಾಗಲಿ, ಯಾವುದೇ ಕಾರ್ಯಕ್ರಮದಲ್ಲಾಗಲಿ ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಅರವಿಂದ್ ಕೆಪಿ ಬೈಕ್ ರ್ಯಾಲಿಗಳಲ್ಲೂ ದಿವ್ಯಾ ಹಾಜರಿರುತ್ತಾರೆ. ಇಬ್ಬರು ಜೊತೆಯಾಗಿ ಅರ್ಧಂಬರ್ಧ ಪ್ರೇಮ ಕಥೆ ಎನ್ನುವ ಸಿನಿಮಾ ಕೂಡ ಮಾಡಿದ್ದರು. ದಿವ್ಯಾ ಉರುಡುಗ ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಿನಗಾಗಿ ಧಾರಾವಾಹಿಯಲ್ಲಿ ರಚನಾ ಆಗಿ ಅಭಿನಯಿಸುತ್ತಿದ್ದಾರೆ.








