ಮೂಲೆಗುಂಪಾದ ಈಜು ಕೊಳ : ಇದಕ್ಕೆ ಜವಾಬ್ದಾರಿ ಯಾರು….?

ಮಧುಗಿರಿ:

   ಈಜುಕೊಳಕ್ಕೆ ನೀರು ಸರಬರಾಜು ಮಾಡುವ ಫಿಲ್ಟರ್ ಘಟಕದ ಯಂತ್ರಗಳು ಕೆಟ್ಟು ನಿಂತಿದ್ದರು ಇದೂವರೆವಿಗೂ ಸಂಬಂಧಪಟ್ಟವರು ರಿಪೇರಿ ಮಾಡಿಸುವ ಘೋಜಿಗೆ ಹೋಗಿಲ್ಲ.ಪಟ್ಟಣದ ಪುರಸಭೆಯ ಆವರಣದಲ್ಲಿರುವ ಈಜುಕೊಳವನ್ನು ಮಾನ್ಯ ಮುಖ್ಯಮಂತ್ರಿಗಳು ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಕಾಮಗಾರಿಯನ್ನು 2010 ರಲ್ಲಿ ನಿರ್ಮಿಸಲಾಗಿತ್ತು.

   ಆದರೆ ಈಜುಕೊಳಕ್ಕೆ ನೀರನ್ನು ಶುದ್ದೀಕರಿಸುವ ಫಿಲ್ಟರ್ ಯಂತ್ರವು ಕಳೆದ 10 ವರ್ಷಗಳಿಂದ ಕೆಟ್ಟು ಹೋಗಿದ್ದರು ಸಹ ಇದೂವರೆವಿಗೂ ಸಂಬಂಧಪಟ್ಡವರು ಮುಂದಾಗಿಲ್ಲ.

   ಫಿಲ್ಟರ್ ಕೆಟ್ಟು ಹೋಗಿರುವುದರಿಂದ ಪ್ರತಿ 2 ದಿನಗಳಿಗೊಮ್ಮೆ ನೀರನ್ನು ಈಜು ಕೊಳಕ್ಕೆ ನೀರನ್ನು ಬಿಟ್ಟು ತದ ನಂತರ ಬದಲಾಯಿಸಲಾಗುತ್ತಿದ್ದರೂ ಮುಂದಿನ ದಿನಗಳಲ್ಲಿ ಈ ಬೇಸಿಗೆಯಲ್ಲಿ ನೀರಿನ ಅಭಾವ ತಲೆ ತೋರಬಹುದಾಗಿದ್ದೂ ಕೊಡಲೆ ನೀರಿನ ಫಿಲ್ಟರ್ ಸರಿಪಡಿಸಿದರೆ 10 ದಿನಗಳ ಕಾಲ ನೀರನ್ನು ಬಳಸಬಹುದಾಗಿದೆ ಎಂಬುದು ಕೆಲವರು ಮಾತುಗಳಾಗಿದ್ದು ಪುರಸಭೆಯವರು ಫಿಲ್ಟರ್ ಸರಿಪಡಿಸಿ ಚಿಣ್ಣರ ಈಜು ಕಲಿಕೆ ಪ್ರೋತ್ಸಾಹ ನೀಡುತ್ತಾರಾ ಎಂಬುದನ್ನು ಕಾದು ನೋಡ ಬೇಕಾಗಿದೆ.

Recent Articles

spot_img

Related Stories

Share via
Copy link