ವೈಫೈ ಐಡಿ ಹೆಸರಿನಲ್ಲಿ ಕಾಣಿಸಿಕೊಂಡ ದೇಶದ್ರೋಹಿ ಹೆಸರು, ಜನ ಶಾಕ್‌

ಬೆಂಗಳೂರು

    ವೈಫೈ ಐಡಿ ನೇಮ್​ನಲ್ಲಿ  ಪಾಕಿಸ್ತಾನ ಜಿಂದಾಬಾದ್  ಎನ್ನುವ ಹೆಸರು ಕಾಣಿಸಿಕೊಂಡಿದ್ದು, ನೆಟ್​ವರ್ಕ್ ​ ಐಡಿ ನೋಡಿ ಸ್ಥಳೀಯರು ಶಾಕ್ ಆಗಿದ್ದಾರೆ. ಬೆಂಗಳೂರು  ಹೊರವಲಯ ಜಿಗಣಿ  ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಬಾಳು ಗ್ರಾಮದಲ್ಲಿ ಈ ಐಡಿ ಕಾಣಿಸಿಕೊಂಡಿದ್ದು, ಜನರು ಆತಂಕ ಹೊರಹಾಕಿದ್ದಾರೆ. ದೇಶದ್ರೋಹಿ ಯೂಸರ್ ಐಡಿ ನೇಮ್ ಬಳಸುತ್ತಿರುವವರನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

    ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಲುಬಾಳು ಗ್ರಾಮದಲ್ಲಿ ಕೆಲವರು ಮೊಬೈಲ್ ವೈಫೈ ಕನೆಕ್ಷನ್​ ಸರ್ಚಿಂಗ್​ ವೇಳೆ ಪಾಕಿಸ್ತಾನ ಜಿಂದಾಬಾದ್ ಯೂಸರ್ ಐಡಿ ನೇಮ್ ತೋರಿಸಿದೆ. ಇದನ್ನು ಕಂಡವರು ಶಾಕ್‌ ಆಗಿದ್ದು, ಆತಂಕ ಹೊರಹಾಕಿದ್ದಾರೆ. ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಭಜರಂಗದಳ ಕಾರ್ಯಕರ್ತರು ಈ ಬಗ್ಗೆ ದೂರು ಕೊಟ್ಟಿದ್ದು, ಎನ್‌ಸಿಆರ್ ದಾಖಲು ಮಾಡಿ ತನಿಖೆಗೆ ಮುಂದಾಗಿದ್ದಾರೆ. 

Recent Articles

spot_img

Related Stories

Share via
Copy link