ಈಶಾನ್ಯದಲ್ಲಿ ಮತ್ತೆ ಅರಳುವುದೇ ಕಮಲ..?

ನವದೆಹಲಿ : 

    ಅಧಿಕಾರದಲ್ಲಿರುವ ಬಿಜೆಪಿ ತ್ರಿಪುರಾದಲ್ಲಿ ಎರಡನೇ ಬಾರಿ ಸರ್ಕಾರ ರಚಿಸುವ ಸಾಧ್ಯತೆ ದಟ್ಟವಾಗಿದೆ. 60 ವಿಧಾನಸಭಾ ಕ್ಷೇತ್ರಗಳಲ್ಲಿ

ಈಗಾಗಲೇ ನಾಲ್ಕು ಸ್ಥಾನಗಳನ್ನು ಗೆದ್ದಿದ್ದು, ಇತರ 29 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಈಶಾನ್ಯ ರಾಜ್ಯದ 21 ಸ್ಥಳಗಳಲ್ಲಿ 60 ಕೇಂದ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿದೆ.

   ಇತ್ತೀಚಿನ ಲಭ್ಯವಾಗಿರುವ ಟ್ರೆಂಡ್‌ ಮತ್ತು ಫಲಿತಾಂಶಗಳ ಪ್ರಕಟಣೆ ಪ್ರಕಾರ, ಇದೇ ಮೊದಲ ಬಾರಿಗೆ 42 ಸ್ಥಾನಗಳಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಬುಡಕಟ್ಟು ಮೂಲದ ತಿಪ್ರಾ ಮೋತಾ ಪಕ್ಷ (ಟಿಎಂಪಿ) 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ ಮತ್ತು ಸಿಪಿಐ(ಎಂ) 11 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಕೇವಲ ಮೂರು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

    ದಕ್ಷಿಣ ತ್ರಿಪುರಾದ ಜೋಲೈಬರಿ ಕ್ಷೇತ್ರದಲ್ಲಿ ಬಿಜೆಪಿ ಮಿತ್ರಪಕ್ಷ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ (ಐಪಿಎಫ್‌ಟಿ) ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ. ಅಮರಪುರ, ಕಮಲಸಾಗರ, ಮೋಹನಪುರ ಮತ್ತು ಸಂತೀರ್ ಬಜಾರ್‌ನಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap