ಬಿಎಲ್ ಸಂತೋಷ್ ಗೆ ಟಾಂಗ್ ನೀಡಿದ ಮಾಜಿ ಸಂಸದ..!

ಮೈಸೂರು

     ಮೋದಿಯವರು ಭಾರತವನ್ನು ಆತ್ಮ‌ನಿರ್ಭರವನ್ನಾಗಿ ಮಾಡುವ ಬದಲು ಆತ್ಮಹತ್ಯೆ ಭಾರತ ಮಾಡುವುದಕ್ಕೆ ಹೊರಟಿದ್ದಾರೆ. ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುತ್ತಿದ್ದೀರ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮೊನ್ನೆ ಏಕಪಾತ್ರಾಭಿನಯದ ರೀತಿ ಮಾತಾಡಿದ್ದಾರೆ. ಅದು ಜನರ ಜೊತೆ ಮಾಡಿರುವ ಸಂವಾದವಲ್ಲ” ಎಂದು ಟೀಕಿಸಿದ್ದಾರೆ ಮಾಜಿ ಸಂಸದ ಧ್ರುವನಾರಾಯಣ್.

     ಇಂದು ಮೈಸೂರಿನಲ್ಲಿ ಮಾತನಾಡಿದ ಧ್ರುವ ನಾರಾಯಣ್, “ಅನಂತಕುಮಾರ್ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಸಕಾರಾತ್ಮಕವಾಗಿ ಚಿಂತಿಸುತ್ತಿದ್ದರು. ನನಗೆ ಅನಂತಕುಮಾರ್ ಅವರ ಬಗ್ಗೆ ಅಪಾರ ಗೌರವವಿದೆ. ಬಿ.ಎಲ್. ಸಂತೋಷ್ ಕೂಡ ಅವರಂತೆಯೇ ಬೆಳೆಯುತ್ತಾರೆ ಎಂದುಕೊಂಡಿದ್ದೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಸಂತೋಷ್ ನಡೆದುಕೊಳ್ಳುತ್ತಿದ್ದಾರೆ” ಎಂದರು.

     ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಮ್ಮ ಭಾಷಣದಲ್ಲಿ ಕೊಟ್ಟ ಕುದುರೆ ಏರದವನು ವೀರನು ಅಲ್ಲ ಶೂರನು ಅಲ್ಲ ಎಂದಿದ್ದು, ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಧ್ರುವ ನಾರಾಯಣ್, “ಕೊಟ್ಟ ಕುದುರೆ ಏರದವರು ಕಾಂಗ್ರೆಸ್‌ನವರಲ್ಲ, ಬಿಜೆಪಿಯವರು. ಮೋದಿಗೆ ಈ ಮಾತು ಅನ್ವಯ ಆಗುತ್ತೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap