ರಾಯ್‌ಪುರ:
ಸಂಸದೆ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷರೂ ಆದ ಶ್ರೀಮತಿ. ಸೋನಿಯಾ ಗಾಂಧಿ ಅವರು ರಾಜಕೀಯ ನಿವೃತ್ತಿ ಬಗ್ಗೆ ನಿರ್ಧರಿಸಿದ್ದಾರೆಯೇ? ಎಂಬ ಅನುಮಾನ ಶುರುವಾಗಿದೆ.
ಅವರು ಇಂದು ರಾಯ್ ಪುರದಲ್ಲಿ ಕಾಂಗ್ರೆಸ್ ಸರ್ವಸದಸ್ಯರ ಅಧಿವೇಶನದಲ್ಲಿ ಆಡಿರುವ ಮಾತುಗಳು ಅವರ ರಾಜಕೀಯ ನಿವೃತ್ತಿ ಬಗ್ಗೆ ಸದ್ದು ಮಾಡುತ್ತಿದೆ.
ಇತ್ತೀಚೆಗೆ ಕಾಂಗ್ರೆಸ್ ಮುಕ್ತಾಯಗೊಳಿಸಿದ ಭಾರತ್ ಜೋಡೋ ಯಾತ್ರೆಯನ್ನು ಅವರು ಪಕ್ಷಕ್ಕೆ ಮತ್ತು ತಮಗೆ ತಿರುವು ಎಂದು ಬಣ್ಣಿಸಿದ್ದಾರೆ. ಭಾರತ್ ಜೋಡೋ ಯಾತ್ರೆಯೊಂದಿಗೆ ತಮ್ಮ ರಾಜಕೀಯ ಇನ್ನಿಂಗ್ಸ್ ಮುಕ್ತಾಯಗೊಳ್ಳಬಹುದೆಂದು ಸಂತೋಷವಾಗಿದೆ ಎಂದು ಹೇಳಿದ್ದಾರೆ.
ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ಪಕ್ಷದ ಮೂರು ದಿನಗಳ ಕಾಂಗ್ರೆಸ್ ಸಮಗ್ರ ಅಧಿವೇಶನದ ಎರಡನೇ ದಿನವಾದ ಇಂದು 15,000 ಪ್ರತಿನಿಧಿಗಳನ್ನು ಉದ್ದೇಶಿಸಿ ಸೋನಿಯಾ ಗಾಂಧಿ ಮಾತನಾಡಿದರು. “ನನಗೆ ಅತ್ಯಂತ ಸಂತೋಷಕರ ಸಂಗತಿಯೆಂದರೆ, ನನ್ನ ಇನ್ನಿಂಗ್ಸ್ ಭಾರತ್ ಜೋಡೋ ಯಾತ್ರೆಯೊಂದಿಗೆ ಮುಕ್ತಾಯವಾಗಬಹುದು. ಯಾತ್ರೆಯು ಒಂದು ಮಹತ್ವದ ತಿರುವು ನೀಡಿದೆ. ಭಾರತದ ಜನರು ಅಗಾಧವಾಗಿ ಸಾಮರಸ್ಯ, ಸಹಿಷ್ಣುತೆ ಮತ್ತು ಸಮಾನತೆಯನ್ನು ಬಯಸುತ್ತಾರೆ ಎಂಬುದು ಭಾರತ್ ಜೋಡೋ ಯಾತ್ರೆಯಿಂದ ಸಾಬೀತಾಗಿದೆ ಎಂದರು.
ಜನಸಂಪರ್ಕ ಕಾರ್ಯಕ್ರಮಗಳ ಮೂಲಕ ನಮ್ಮ ಪಕ್ಷ ಮತ್ತು ಜನರ ನಡುವಿನ ಸಂವಾದದ ಶ್ರೀಮಂತ ಪರಂಪರೆಯನ್ನು ಭಾರತ್ ಜೋಡೋ ನವೀಕರಿಸಿದೆ. ಕಾಂಗ್ರೆಸ್ ಜನರೊಂದಿಗೆ ನಿಂತಿದೆ ಮತ್ತು ಅವರಿಗಾಗಿ ಹೋರಾಡಲು ಸಿದ್ಧವಾಗಿದೆ ಎಂಬುದನ್ನು ಇದು ನಮಗೆ ತೋರಿಸಿದೆ ಎಂದು ಅವರು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ