ಆಟೋಗಾಗಿ ಕಾಯುತ್ತಿದ್ದ ಮಹಿಳೆ ಶವವಾಗಿ ಪತ್ತೆ…….!

ಬೆಂಗಳೂರು 

    ಬೆಳ್ಳಂಬೆಳಿಗ್ಗೆ ಆಟೋಗಾಗಿ ಕಾಯುತ್ತಿದ್ದ ಮಹಿಳೆ ಶವವಾಗಿ ಪತ್ತೆಯಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದ್ದು ಬೆಂಗಳೂರು ಅದೆಷ್ಟು ಸೇಫ್ ಅನ್ನೋ ಪ್ರಶ್ನೆಯನ್ನು ಹುಟ್ಟುಹಾಕಿದೆ. ಈ ಘಟನೆ ಬಳಿಕ ನಗರದಲ್ಲಿ ಒಬ್ಬೊಂಟಿಯಾಗಿ ಮಹಿಳೆಯರು ಓಡಾಡಲು ನೂರಾರುಬಾರಿ ಯೋಚಿಸುವಂತಾಗಿದೆ.

    ಕೆಆರ್ ಮಾರ್ಕೇಟ್ ಬಳಿ ಫೆಬ್ರವರಿ 20ರ ಬೆಳಗಿನ ಜಾವ ಆಟೋಗಾಗಿ ಕಾಯುತ್ತಿದ್ದ ಅಪರಿಚಿತ ಮಹಿಳೆಯನ್ನು ಚಾಲಕನೊಬ್ಬ ತನ್ನ ಆಟೋದಲ್ಲಿ ಹತ್ತಿಸಿಕೊಂಡಿದ್ದನು. ಬಳಿಕ ಆಕೆಯನ್ನು ಪಾಳುಬಿದ್ದ ಕಟ್ಟಡಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.  

   ಫೆಬ್ರವರಿ 20 ರಂದು ಸಂಪಂಗಿ ರಾಮನಗರದ ಜನತಾ ಸಹಕಾರಿ ಕಟ್ಟಡದ ಬಳಿಯ ಪಾಳುಬಿದ್ದ ಕಟ್ಟಡದಲ್ಲಿ ಇಪ್ಪತ್ತರ ಹರೆಯದ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ಕಟ್ಟಡಕ್ಕೆ ಭೇಟಿ ನೀಡಿ ಮೃತ ದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.ಪ್ರಾಥಮಿಕ ತನಿಖೆಯ ವೇಳೆ ಕಟ್ಟಡದಿಂದ ಬಿದ್ದು ಮಹಿಳೆ ಸಾವನ್ನಪ್ಪಿದ್ದಾಳೆ ಎಂದು ಶಂಕಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮಹಿಳೆಯನ್ನು ಕೊಲ್ಲುವ ಮೊದಲು ಅತ್ಯಾಚಾರವೆಸಗಲಾಗಿದೆ ಎಂದು ತಿಳಿದುಬಂದಿದೆ.

    ನಿರ್ಮಾಣ ಹಂತದ ಕಟ್ಟದಲ್ಲಿ ಯಾರೂ ಕೂಡ ಇರಲಿಲ್ಲ. ಕಳೆದ ಐದು ವರ್ಷಗಳಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ. ಹೀಗಾಗಿ ಆ ಭಾಗದಲ್ಲಿ ಸಾರ್ವಜನಿಕ ಸಂಚಾರ ಕಡಿಮೆ ಇದೆ. ಆದರೂ ಬೆಳಗ್ಗೆ ದಾರಿಹೋಕರು ಕಟ್ಟಡದ ಕೆಳಗೆ ಮಹಿಳೆಯ ಮೃತದೇಹ ಬಿದ್ದಿರುವುದನ್ನು ಗಮಿನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿ ಅಸಹಜ ಸಾವು ಪ್ರಕರಣ ದಾಖಲಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಮಹಿಳೆಯ ಮೇಲೆ ಅತ್ಯಾಚಾರದವಾಗಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅತ್ಯಾಚಾಋ ಮತ್ತು ಕೊಲೆ ಪ್ರಕರಣ ದಾಖಲಿಸಿ ತನಿಖೆ ಮಾಡಿದೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

   ಆತನನ್ನು 38 ವರ್ಷದ ಮುಬಾರಕ್ ಎಂದು ಗುರುತಿಸಲಾಗಿದೆ. ಈ ಆರೋಪಿಯನ್ನು ಸಂಪಂಗಿ ರಾಮನಗರ ಪೊಲೀಸರು ಬಂಧಿಸಿದ್ದಾರೆ. ಈತ ಬೆಂಗಳೂರಿನಲ್ಲಿ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪೊಲೀಸರ ಪ್ರಕಾರ, ಆರೋಪಿಯು ಮುಂಜಾನೆ ಕ್ಯಾಬ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಎತ್ತಿಕೊಂಡು ಅತ್ಯಾಚಾರವೆಸಗಿದ್ದ ಕಟ್ಟಡದ ಮೊದಲ ಮಹಡಿಗೆ ಕರೆದೊಯ್ದು ಕೊಲೆ ಮಾಡಲು ಕಟ್ಟಡದಿಂದ ತಳ್ಳಿದ್ದಾನೆ.

    ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಸಂಪಂಗಿ ರಾಮನಗರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೋ ಚಾಲಕ ಮುಬಾರಕ್ ನನ್ನು ಬಂಧಿಸಿದ್ದಾರೆ. ಮಹಿಳೆಯನ್ನು ಅತ್ಯಾಚಾರದ ಬಳಿಕ ಕಟ್ಟಡದಿಂದ ತಳ್ಳಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಮುಬಾರಕ್ ಒಪ್ಪಿಕೊಂಡಿದ್ದಾನೆ. ಆದರೆ ಈವರೆಗೂ ಮಹಿಳೆಯ ಹಿನ್ನೆಲೆ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಈ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 

    ಈ ಘಟನೆಯ ಬಳಿಕ ಬೆಂಗಳೂರು ಮಹಿಳೆಯರಿಗೆ ಒಬ್ಬೊಂಟಿಯಾಗಿ ಓಡಾಡಲು ಎಷ್ಟು ಸೇಫ್ ಎಂಬ ಪ್ರಶ್ನೆ ಮೂಡಿದೆ. ಅದೆಷ್ಟೋ ಮಹಿಳೆಯರು ತಮ್ಮ ಕೆಲಸದ ಸ್ಥಳದಿಂದ ರಾತ್ರಿ ಪಾಳೆಯನ್ನು ಮುಗಿಸಿ ಬೆಳಗಿನ ಜಾವ ಮನೆಗೆ ಮರಳುತ್ತಾರೆ. ಇನ್ನೂ ಕೆಲ ಜನ ಬೆಳಗಿನ ಜಾವ ಕೆಲಸಕ್ಕೆ ತೆರಳುತ್ತಾರೆ. ಇಂಥಹ ಸಂದರ್ಭದಲ್ಲಿ ಬಹುತೇಕ ಜನ ಮಹಿಳೆಯರು ಆಟೋ ಅಥವಾ ಕ್ಯಾಬ್‌ಗಳನ್ನು ಅವಲಂಬಿಸುತ್ತಾರೆ. ಹೀಗಿರುವಾಗ ಆಟೋ ಚಾಲಕ ಅಥವಾ ಕ್ಯಾಬ್ ಚಾಲಕರನ್ನು ಹೇಗೆ ನಂಬುವುದು ಅನ್ನೋ ಪ್ರಶ್ನೆ ಹುಟ್ಟುಹಾಕಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap