ರಸ್ತೆ ಬದಿ ಮೊಮೊಸ್​ ತಿಂದ ಮಹಿಳೆ ಸಾವು……!

ಹೈದರಾಬಾದ್: 

    ಮಕ್ಕಳಿಂದ ಹಿಡಿದು ವಯಸ್ಕರ ವರೆಗೆ ಎಲ್ಲರೂ ಮೊಮೊಸ್ ಪ್ರೀಯರಾಗಿದ್ದು ಅದರ ರುಚಿಯನ್ನು ಇಷ್ಟಪಡುತ್ತಾರೆ. ಇದೀಗ ಬಾಯಿ ಚಪ್ಪರಿಸಿ ಕೊಂಡು ತಿನ್ನುವ ಮೊಮೊಸ್ ಮಹಿಳೆಯ ಜೀವವನ್ನೇ ತೆಗೆದಿದೆ. ಇದಲ್ಲದೇ ಮೊಮೊಸ್​ ಸವಿದ 20 ಅಧಿಕ ಜನರು ಆಸ್ವಸ್ಥಗೊಂಡಿದ್ದಾರೆ. ಈ ಘಟನೆ ಹೈದರಾಬಾದ್‌ನ ಬಂಜಾರ ಹಿಲ್ಸ್ ಬಳಿ ಫುಡ್ ಸ್ಟಾಲ್‌ನಲ್ಲಿ ನಡೆದಿದೆ.

   ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (GHMC) ಮಾರಾಟಗಾರರ ಕಾರ್ಯಾಚರಣೆಗಳ ಬಗ್ಗೆ ತನಿಖೆ ಆರಂಭಿಸಿದ್ದು, ಈ ವೇಳೆ ಮಾನ್ಯ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ತಿಳಿದುಬಂದಿದೆ. ಅಲ್ಲಿಂದ ಆಹಾರದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ವ್ಯಾಪಾರ ಚಟುವಟಿಕೆಗಳನ್ನು ನಿಲ್ಲಿಸಲು ಮಾರಾಟಗಾರರಿಗೆ ನೋಟೀಸು ನೀಡಲಾಗಿದೆ. ಬೀದಿ ಬದಿ ಆಹಾರವನ್ನು ಸೇವಿಸುವಾಗ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಸೂಚಿಸಿದ್ದಾರೆ.

Recent Articles

spot_img

Related Stories

Share via
Copy link