ಬೆಂಗಳೂರು:
ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ 9 ಕಡೆ ಬಿಡಿಎ ಮಧ್ಯವರ್ತಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಧಿಕಾರಿಗಳಿಗೆ ಲಂಚದ ಆಮಿಷವೊಡ್ಡಿ ಮತ್ತು ಪ್ರಭಾವ ಬೀರಿ ಸರ್ಕಾರಿ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಆರೋಪದ ಮೇಲೆ 9 ಮಧ್ಯವರ್ತಿಗಳ ಮೇಲೆ ಮಂಗಳವಾರ ಬೆಳಗ್ಗೆ ಎಸಿಬಿ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಏಕಕಾಲಕ್ಕೆ ದಾಳಿ ಮಾಡಲಾಗಿದೆ.
ದಾಳಿಯ ವೇಳೆ ದಲ್ಲಾಳಿಗಳ ಕರಾಳ ಮುಖವಾಡಗಳು ಒಂದೊಂದಾಗಿ ಕಳಚಿ ಬೀಳುತ್ತಿದೆ. ಆರ್ಆರರ ನಗರದ ಬಿಡಿಎ ಬ್ರೋಕರ್ ತೇಜಸ್ಚಿ ನಿವಾಸದಲ್ಲಿ ಭಾರಿ ಪ್ರಮಾಣ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳು ಪತ್ತೆಯಾಗಿದೆ.
‘ಆಟೋಮೊಬೈಲ್ ಅಂಗಡಿ’ ಇಟ್ಟವರ ಮನೆ, ಈಗ ‘ಗೋಲ್ಡ್ ಪ್ಯಾಲೆಸ್’: ‘ACB ದಾಳಿ’ಯಲ್ಲಿ ಸ್ಪೋಟಕ ರಹಸ್ಯ ಬಯಲು
ದ್ವಿತೀಯ ಪಿಯುಸಿ ಮುಗಿಸಿ ಬಿಡಿಎ ಬ್ರೋಕರ್ ತೇಜಸ್ಚಿ ಶುರು ಮಾಡಿದ್ದು ಜೆರಾಕ್ಸ್ ಅಂಗಡಿ. ಆದರೆ, ಈಗ ತೇಜಸ್ವಿ ಕೋಟಿ ಕೋಟಿ ಬೆಲೆಯ ಬಂಗಲೆ ಮಾಲೀಕ. ಆರ್ ಆರ್ ನಗರದ ತೇಜಸ್ವಿ ಬಂಗಲೆ ತಮಿಳುನಾಡಿನ ಮಾಜಿ ಮಂತ್ರಿಯದು. ತಮಿಳುನಾಡಿನ ಡಿಎಂಕೆಯ ಮಾಜಿ ಮಂತ್ರಿ ದಿವಂಗತ ವೀರಪಾಂಡಿಯನ್ ಆರುಮುಗಂ ಮಗಳಿಂದ 14 ಕೋಟಿ ರೂ.ಗೆ ಖರೀದಿಸಿದ್ದ ಬಂಗಲೆಯಾಗಿದೆ.
ಇಷ್ಟೆಲ್ಲಾ ಆಸ್ತಿಯೂ ಬಿಡಿಎ ಬ್ರೋಕರ್ ಆದ ಮೇಲೆಯೆ ಸಂಪಾದನೆ ಮಾಡಲಾಗಿದೆ. ಇಂದು ಎಸಿಬಿ ನಡೆಸಿದ ದಾಳಿಯಲ್ಲಿ ಈ ಸಂಗತಿ ಬಟಾಬಯಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
