ಲೋಕಸಭಾ ಸೋಲಿನ ಕಾರಣ ತಿಳಿಸಿದ ಯೋಗಿ …!

ಲಕ್ನೊ: 

    ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶ ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಹೀನಾಯವಾಗಿ ಸೋತಿತ್ತು. ಸೋಲಿನ ನಂತರ ಉತ್ತರ ಪ್ರದೇಶ ಭಾರತೀಯ ಜನತಾ ಪಕ್ಷದ ಘಟಕದ ಮೊದಲ ಪ್ರಮುಖ ಸಭೆಯಲ್ಲಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅತಿಯಾದ ಆತ್ಮವಿಶ್ವಾಸ ಈ ವರ್ಷದ ಚುನಾವಣೆಯಲ್ಲಿ ಬಿಜೆಪಿಯ ಭರವಸೆಯನ್ನು ಹುಸಿಗೊಳಿಸಿತು ಎಂದು ಹೇಳಿದ್ದಾರೆ.

     ಲಕ್ನೋದಲ್ಲಿ ಬಿಜೆಪಿಯ ಯುಪಿ ಕಾರ್ಯಕಾರಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಆದಿತ್ಯನಾಥ್, ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ತನ್ನ ಮತಗಳ ಪಾಲನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ, ಈ ಬಾರಿ ಮತಗಳ ಪಲ್ಲಟ ಕಂಡುಬಂದಿದೆ. ಆದರೆ ನಾವು ಮತ್ತೆ ಪುಟಿದೆದ್ದು ಬರುತ್ತೇವೆ ಎಂದಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap