ಚೀನಾದಲ್ಲೊಬ್ಬಳು ಯಂಗ್‌ ಅಜ್ಜಿ; ವಯಸ್ಸು ಕೇಳಿದ್ರೆ ಶಾಕ್‌ ಆಗ್ತೀರಿ!

ಬೀಜಿಂಗ್:

     ನಮ್ಮಲ್ಲಿ ಹೆಚ್ಚಿನವರಿಗೆ 30ನೇ ವಯಸ್ಸಿನಲ್ಲಿ ಮದುವೆಯೇ ಆಗಿರುವುದಿಲ್ಲ! ಅಂತಹದರಲ್ಲಿ ಚೀನಾದ ಮಹಿಳೆಯೊಬ್ಬಳು ಈ ವಯಸ್ಸಿಗೆ ಅಜ್ಜಿಯಾಗಿದ್ದಾಳೆ. ಈ ಚೀನಾದ ಅಜ್ಜಿ ತನ್ನ ವಯಸ್ಸನ್ನು ಬಹಿರಂಗಪಡಿಸಿದ ನಂತರ ನೆಟ್ಟಿಗರು ಫುಲ್‌ ಶಾಕ್‌ ಆಗಿದ್ದಾರೆ. ಇದು ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈಕೆಯ ಯಂಗ್‍ ಆ್ಯಂಡ್ ಎನೆರ್ಜೆಟಿಕ್‌ ಲುಕ್‌ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಸೋಶಿಯಲ್ ಮೀಡಿಯಾ ನೆಟ್ಟಿಗರು ಈಕೆಯನ್ನು “ಸ್ಲಿಮ್ ಆ್ಯಂಡ್ ಯಂಗ್” ಎಂದು ಕರೆದಿದ್ದಾರೆ. ಇನ್ನು ಈಕೆಯ ಸ್ಟೈಲ್‌ ಕೂಡ ನೆಟ್ಟಿಗರನ್ನು ಸೆಳೆದಿದೆಯಂತೆ.

    ಅನ್ಹುಯಿ ಪ್ರಾಂತ್ಯದ ಸುಝೌ ಮೂಲದ ಈ ಮಹಿಳೆ ಇತ್ತೀಚೆಗೆ ಅಜ್ಜಿಯ ಪಟ್ಟ ಪಡೆದುಕೊಂಡಿದ್ದಾಳಂತೆ. ಆಕೆ ಸುಮಾರು ಒಂದು ತಿಂಗಳ ಮಗುವನ್ನು ಎತ್ತಿಕೊಂಡಿರುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡಿತ್ತು. ಈ ವಿಡಿಯೊದಲ್ಲಿ ಅವಳು ಪುಟ್ಟ ಮಗುವಿನೊಂದಿಗೆ ಸಮಯ ಕಳೆಯುವುದನ್ನು ಸೆರೆಹಿಡಿಯಲಾಗಿದೆ. ಮಗುವಿನ ತಂದೆ-ತಾಯಿ ವಿಶ್ರಾಂತಿ ಪಡೆಯುವಾಗ ಈ ಅಜ್ಜಿ ಮಗುವಿಗೆ ಬಾಟಲಿಯಲ್ಲಿ ಹಾಲುಣಿಸಿದ್ದಾಳೆ. ಈ ಅಜ್ಜಿ ಉದ್ದನೆಯ ಪೋನಿಟೆಲ್, ಲೈಟ್ ಮೇಕಪ್ ಮತ್ತು ಆಕರ್ಷಕ ನಗು ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ.

   ಈ ಯಂಗ್‌ ಅಜ್ಜಿಯ ವಯಸ್ಸು ಕೇವಲ 39 ಅಂತೆ.ಈಕೆ 1985 ರಲ್ಲಿ ಹುಟ್ಟಿದ್ದಳಂತೆ. ಹಾಗಾಗಿ ಅವಳು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ‘1985ರ ಅಜ್ಜಿ’ ಎಂಬ ಹೆಸರಿನಿಂದ ಕರೆಯಲ್ಪಡುತ್ತಾಳೆ. ಇನ್ನು ಈಕೆ ತನ್ನ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ತನ್ನ ನವಜಾತ ಮೊಮ್ಮಗನಿಗೆ ಆಹಾರವನ್ನು ನೀಡುವುದರಿಂದ ಹಿಡಿದು ತನ್ನ ಪ್ರೀತಿಪಾತ್ರರಿಗೆ ಅಡುಗೆ ಮಾಡುವವರೆಗೆ ಅವಳು ತನ್ನ ದೈನಂದಿನ ಜೀವನದ ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿರುತ್ತಾಳಂತೆ.

   ಈ ವಿಡಿಯೊಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು ಅನೇಕರು ಕಾಮೆಂಟ್‌ ಮಾಡಿದ್ದಾರೆ. “ನಾನು ಅವಳಷ್ಟೇ ವಯಸ್ಸಿನವಳು, ಆದರೆ ನಾನು ಇನ್ನೂ ಮದುವೆಯಾಗಿಲ್ಲ” ಎಂದು ಒಬ್ಬರು ಕಾಮೆಂಟ್‍ನಲ್ಲಿ ಬರೆದಿದ್ದಾರೆ. ಇನ್ನೊಬ್ಬರು, “ನಾನು 1970ರ ದಶಕದಲ್ಲಿ ಹುಟ್ಟಿದ್ದೆ ಮತ್ತು ನನ್ನ ಮಗು ಇನ್ನೂ ಶಿಶುವಿಹಾರಕ್ಕೆ ಹೋಗುತ್ತಿದೆ. ಅಜ್ಜಿಯಾಗಲು ನೀನೇಕೆ ಇಷ್ಟು ಆತುರಪಡುತ್ತಿರುವೆ?” ಎಂದು ಕೇಳಿದ್ದಾರೆ.

   ಚೀನಾದ ಮಹಿಳೆಯರು ಚಿಕ್ಕ ವಯಸ್ಸಿಗೆ ಅಜ್ಜಿಯಾಗಿದ್ದು ಇದೇ ಮೊದಲಲ್ಲ. ಈ ಹಿಂದೆ ಚೀನಾದ ಮಹಿಳೆಯೊಬ್ಬಳು ತಮ್ಮ ಚಿಕ್ಕ ಮೊಮ್ಮಗಳೊಂದಿಗಿನ ಸಣ್ಣ ವಿಡಿಯೊವನ್ನು ಅಪ್ಲೋಡ್ ಮಾಡಿದ ನಂತರ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದಳು. ವಿಡಿಯೊದಲ್ಲಿ ಮಹಿಳೆ ತನ್ನ ಪ್ರೀತಿಯ ಮೊಮ್ಮಗಳನ್ನು ತೋರಿಸಲು ಹೋಗಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದ್ದಳು. 

   ಇತ್ತೀಚೆಗೆ ಚೀನಾದ ಶತಾಯುಷಿ ಅಜ್ಜಿಯ ಸುದ್ದಿಯೊಂದು ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಈಕೆಗೆ 124 ವರ್ಷವಂತೆ. ಅಜ್ಜಿ 1901ರಲ್ಲಿ ಚೀನಾದಲ್ಲಿ ಕ್ವಿಂಗ್ ರಾಜವಂಶ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ತಾನು ಜನಿಸಿದ್ದೇನೆ ಎಂದು ಹೇಳಿಕೊಂಡಿದ್ದಾಳೆ. ದಕ್ಷಿಣ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಆರು ತಲೆಮಾರು ಕಂಡ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ. ಇಲ್ಲಿನ ನಾನ್ ಶಾಂಗ್ ಪಟ್ಟಣದಲ್ಲಿ ವಾಸಾಗಿರುವ ಈಕೆಗೆ 60 ವರ್ಷದ ಮೊಮ್ಮಗಳಿದ್ದಾಳೆ!