ಸ್ಯಾಮ್‌ ಸಂಗ್‌ ಬಳಕೆದಾರರೇ ಎಚ್ಚರ ನಿಮ್ಮ ಸುರಕ್ಷತೆ ನಿಮ್ಮ ಕೈಯಲ್ಲಿ….?

ಬೆಂಗಳೂರು 

   ದೇಶದ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್‌ ಕಂಪನಿಯು ಎಲ್ಲಿರಿಗೂ ಗೊತ್ತಿರುವ ವಿಚಾರ. ಇದೀಗ ಸ್ಯಾಮ್ಸಂಗ್‌ ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಸರ್ಕಾರ ಭದ್ರತಾ ಎಚ್ಚರಿಕೆಯನ್ನು ನೀಡಿದೆ. ನಿರ್ದಿಷ್ಟವಾಗಿ ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಫೋನ್‌ಗಳ ಬಳಕೆದಾರರನ್ನು ಗುರಿಯಾಗಿಸಿಕೊಂಡು ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಭದ್ರತಾ ಸಲಹೆ ನೀಡಿದ್ದು,

   ಸೈಬರ್‌ ದಾಳಿಗಳ ಸಾಧ್ಯತೆಯ ಬಗ್ಗೆ ಎಚ್ಚರಿಸಿದೆ. ಸ್ಯಾಮ್ಸಂಗ್‌ ಗ್ಯಾಲಾಕ್ಸಿ ಫೋನ್‌ಗಳ ಹಳೆಯ ಮತ್ತು ಹೊಸ ಮಾದರಿಗಳೆರಡರಲ್ಲೂ ಬಹು ಭದ್ರತಾ ದೋಷಗಳಿವೆ. Samsung ಫೋನ್‌ ಬಳಕೆದಾರರು ತಮ್ಮ ಫೋನ್‌ನ ಆಪರೇಟಿಂಗ್ ಸಿಸ್ಟಮ್ ಅಥವಾ ಫರ್ಮ್‌ವೇರ್ ನ್ನು ತ್ವರಿತವಾಗಿ ನವೀಕರಿಸಬೇಕು ಎಂದು ಸರ್ಟ್-ಇನ್‌ ಎಚ್ಚರಿಸಿದೆ.

   ಸ್ಯಾಮ್ಸಂಗ್‌ ಉತ್ಪನ್ನಗಳಲ್ಲಿ ಹಲವಾರು ದುರ್ಬಲತೆಗಳು ವರದಿಯಾಗಿವೆ. ಇದು ಸೈಬರ್‌ ಆಕ್ರಮಣಕಾರರಿಗೆ ಬೈಪಾಸ್ ಮಾಡಲು, ಸೂಕ್ಷ್ಮ ಡೇಟಾಗಳನ್ನು ಕದಿಯಲು ಮತ್ತು ಆಪರೇಟಿಂಗ್‌ ವ್ಯವಸ್ಥೆಯಲ್ಲಿ ಮಾಲ್‌ವೇರ್‌ ಕೋಡ್ ಅನ್ನು ಕಾರ್ಯಗತಗೊಳಿಸಲು ಅನುವು ಮಾಡಿಕೊಡುತ್ತದೆ” ಎಂದು CERT ತನ್ನ ಸೂಚನೆಯಲ್ಲಿ ತಿಳಿಸಿದೆ.

   ವರದಿಯ ಪ್ರಕಾರ, ಸ್ಯಾಮ್‌ಸಂಗ್ ಮೊಬೈಲ್ ಆಂಡ್ರಾಯ್ಡ್ 11, 12, 13 ಮತ್ತು 14 ಆವೃತ್ತಿಗಳು ಅಪಾಯದಲ್ಲಿವೆ. ಸೈಬರ್ ದಾಳಿಕೋರರು ಇದನ್ನು ಬ್ರೇಕ್‌ ಮಾಡಿದರೆ ಈ ಕೆಳಗಿನ ಅಪಾಯಗಳು ಉಂಟಾಗಬಹುದು:

   ಸ್ಯಾಮ್ಸಂಗ್ ಸ್ಮಾರ್ಟ್‌ಪೋನ್‌ ಬಳಕೆದಾರರಿಗೆ ಸರ್ಟ್‌ ಕೆಲವು ಸೂಚನೆಗಳನ್ನು ನೀಡಿದೆ. ಮುಖ್ಯವಾಗಿ Samsung Galaxy ಫೋನ್‌ಗಳ ಬಳಕೆದಾರರು ತಮ್ಮ ಸಾಧನದ ಆಪರೇಟಿಂಗ್ ಸಿಸ್ಟಮ್   ಮತ್ತು ಫರ್ಮ್‌ವೇರ್ ಅನ್ನು ತ್ವರಿತವಾಗಿ ನವೀಕರಿಸಬೇಕು. ಸಿಸ್ಟಮ್ ಅಪ್‌ಡೇಟ್‌ ನಿರ್ಲಕ್ಷಿಸುವುದರಿಂದ ಹ್ಯಾಕರ್‌ಗಳಿಗೆ ಸಾಧನದ ಸೆಕ್ಯುರಿಟಿ ಮುರಿಯಲು   ಮತ್ತು ಸೂಕ್ಷ್ಮ ಡೇಟಾಗೆ ಅನಧಿಕೃತ ಪ್ರವೇಶವನ್ನು ಪಡೆಯಲು ಅವಕಾಶ ಕೊಟ್ಟಂತಾಗುತ್ತದೆ.

Recent Articles

spot_img

Related Stories

Share via
Copy link