ಎಲೆಕ್ಟ್ರಿಕ್‌ ಕುಕ್ಕರ್‌ ಅನ್ನು ಮದುವೆಯಾದ ಯುವಕ : ಕಾರಣ ಏನು ಗೊತ್ತಾ….?

ಇಂಡೋನೇಷ್ಯಾ:

   ಎಷ್ಟೇ ಹುಡುಕಿದರೂ ವಧು ಸಿಗದ ಹಿನ್ನೆಲೆ, ವಿಧಿ ಇಲ್ಲದೇ ಯುವಕ ಕುಕ್ಕರ್ ಮದುವೆಯಾಗಿದ್ದಾರೆ. ಇಂಡೋನೇಷ್ಯಾದ ಯುವಕನೊಬ್ಬನ ವಿಶಿಷ್ಟ ವಿವಾಹವೊಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.ಯುವಕನ ಮದುವೆಯ ಫೋಟೊಗಳು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಮಧುಮಗ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದು, ಕುಕ್ಕರ್​ನ ಮೇಲ್ಭಾಗಕ್ಕೆ ಹುಡುಗಿಯಂತೆ ಶಾಲು ಹೊಂದಿಸಿ,ಮುತ್ತಿಡುತ್ತಿರುವುದು ಫೋಟೋದಲ್ಲಿ ಸೆರೆಯಾಗಿದೆ.

   ಈ ಯುವಕ ಖೋಯಿರುಲ್ ಅನಮ್ ಎಂದು ಗುರುತಿಸಲಾಗಿದ್ದು, ಸಾಕಷ್ಟು ವರ್ಷಗಳಿಂದ ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿದ್ದ. ಹುಡುಗಿ ಸಿಗದೇ ಬೇಸತ್ತು ಈಗ ಕುಕ್ಕರನ್ನೇ ತನ್ನ ಪತ್ನಿಯನ್ನಾಗಿ ಸ್ವೀಕರಿಸಿದ್ದಾನೆ.ಕುಕ್ಕರ್​ ತನಗೆ ಯಾವತ್ತೂ ಮೋಸ ಮಾಡಲ್ಲ. ಜೊತೆಗೆ ಅಡುಗೆಯಲ್ಲಿ ಪರಿಣಿತಳು’ ಹಾಗಾಗಿ ಒಡನಾಡಿಯಾಗಿ ಆರಿಸಿಕೊಳ್ಳುತ್ತಿದ್ದೇನೆ ಎಂದು ಕುಕ್ಕರ್​ ಜೊತೆ ಮದುವೆಯ ಬಗ್ಗೆ ಈತ ಹೇಳಿಕೊಂಡಿರುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

   ಆದರೆ ಮದುವೆಯಾಗಿ ನಾಲ್ಕೇ ದಿನದಲ್ಲಿ ಪತ್ನಿ ಅಂದರೆ ಕುಕ್ಕರ್​ಗೆ ವಿಚ್ಛೇದನ ನೀಡಿರುವುದು ವರದಿಯಾಗಿದೆ. ನನ್ನ ಪತ್ನಿಗೆ ಅನ್ನ ಬೇಯಿಸುವುದು ಮಾತ್ರ ಸಾಧ್ಯ, ಬೇರೇನೂ ಗೊತ್ತಿಲ್ಲ, ಹೀಗಾಗಿ ವಿಚ್ಛೇದನ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.

Recent Articles

spot_img

Related Stories

Share via
Copy link
Powered by Social Snap