ಜಮೀರ್​ ಅಹ್ಮದ್​ಗೆ ನ್ಯಾಯಾಂಗ ನಿಂದನೆ ಸಂಕಷ್ಟ…..!

ಬೆಂಗಳೂರು

    ಸಚಿವ ಜಮೀರ್ ಅಹ್ಮದ್   ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ  ಹೈಕೋರ್ಟ್​ನಲ್ಲಿ   ನ್ಯಾಯಾಂಗ ನಿಂದನೆ   ಅರ್ಜಿ ಸಲ್ಲಿಸಿದ್ದಾರೆ. ಈ ಮೂಲಕ ಸಚಿವ ಜಮೀರ್ ಅಹ್ಮದ್​ ಅವರಿಗೆ ನ್ಯಾಯಂಗ ನಿಂದನೆ ಸಂಕಷ್ಟ ಎದರಾಗಿದೆ.

   ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೈಕೋರ್ಟ್​ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯ ನೀಡಿರುವ ತೀರ್ಪಿನ ಬಗ್ಗೆ ಸಚಿವ ಜಮೀರ್​ ಅಹ್ಮದ್​ ಖಾನ್​ ಲಘುವಾಗಿ ಮಾತನಾಡಿದ್ದರು. ಸಿದ್ದರಾಮಯ್ಯ ಅವರ ವಿರುದ್ಧ ​ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನುಮತಿಯನ್ನು ಹೈಕೋರ್ಟ್ ಎತ್ತಿಹಿಡಿದಿತ್ತು. 

   ಹೈಕೋರ್ಟ್​ ತೀರ್ಪು ರಾಜಕೀಯ ಪ್ರೇರಿತ ಎಂಬ ಅರ್ಥದಲ್ಲಿ ನಾನು ಹೇಳಿಲ್ಲ. ಬಾಯಿ ತಪ್ಪಿ ಬಂದಿದೆ. ​ಹೈಕೋರ್ಟ್​ ತೀರ್ಪು ಬಂದ ನಂತರ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ನ್ಯಾಯಾಲಯದ ಬಗ್ಗೆ ಅಪಾರ ಗೌರವ ಇದೆ. ನ್ಯಾಯಾಲಯದ ತೀರ್ಪಿಗೆ ತಲೆ ಬಾಗುತ್ತೇನೆ ಎಂದು ಸಚಿವ ಜಮೀರ್ ಅಹ್ಮದ್​ ಸ್ಪಷ್ಟಪಡಿಸಿದ್ದರು.

Recent Articles

spot_img

Related Stories

Share via
Copy link