ನ್ಯಾಯ ಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧ- ಕೃಷ್ಣ ಬಾಜಪೇಯಿ

ಹಾವೇರಿ

      ಸುಗಮ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ತಿಳಿಸಿದರು.

      ಮತದಾನ ಸಿದ್ಧತೆ ಕುರಿತಂತೆ ಭಾನುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಅವರು ಭಾನುವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿಳಲಿದೆ. ಮನೆ ಮನೆ ಭೇಟಿ ಪ್ರಚಾರಕ್ಕೆ ಯಾವುದೇ ತೊಂದರೆ ಇಲ್ಲ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದವರು ಪ್ರಚಾರದಲ್ಲಿ ತೊಡಗಬಾರದು. ಇಂದೇ ಕ್ಷೇತ್ರ ತೊರೆಯಬೇಕು ಎಂದು ತಿಳಿಸಿದರು.

         1972 ಮತಗಟ್ಟೆ: ಹಾವೇರಿ ಲೋಕಸಭೆಯ (ಹಾವೇರಿ ಮತ್ತು ಗದಗ ಜಿಲ್ಲೆ) ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳು ಒಳಗೊಂಡಿವೆ. ಈ ವ್ಯಾಪ್ತಿಯಲ್ಲಿ 1972 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇದೇ ಎಪ್ರಿಲ್ 23ರ ಮಂಗಳವಾರ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಅಂದು ಬೆಳಿಗ್ಗೆ 6 ರಿಂದ 7ರವರೆಗೆ ಪ್ರತಿ ಮತಗಟ್ಟೆಗಳಲ್ಲಿ ಅಣುಕು ಮತದಾನ ನಡೆಯಲಿದೆ. ಸುಗಮ ಮತದಾನ ಪ್ರಕ್ರಿಯೆ ಕೈಗೊಳ್ಳಲು 7,888 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

       ಸಿಬ್ಬಂದಿಗಳಿಗೆ ಎರಡು ಹಂತದಲ್ಲಿ ತರಬೇತಿ ನೀಡಿ ಸಜ್ಜುಗೊಳಿಸಲಾಗಿದೆ. ಮತದಾನ ಪ್ರಕ್ರಿಯೆ ಸಿಬ್ಬಂದಿಗಳಿಗೆ ಹಾಗೂ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳಿಗೆ ಅಕ್ಷರದಾಸೋಹ ಸಿಬ್ಬಂದಿಗಳನ್ನು ಬಳಸಿಕೊಂಡು ಆಯಾ ಮತಗಟ್ಟೆಗಳಲ್ಲಿ ಉಪಹಾರ-ಊಟದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.

ವಿಶೇಷ ಮತಗಟ್ಟೆಗಳು:

         ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 19 ಸಖಿ, ಎಂಟು ಮಾದರಿ ಮತಗಟ್ಟೆಗಳು, ಮೂರು ವಿಕಲಚೇತನರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಿಕಲಚೇತನ ಸ್ನೇಹಿ ವಾತಾವರಣ ನಿರ್ಮಿಸಲು ಬ್ರೈನಲ್‍ಲಿಪಿ, ಗಾಲಿ ಕುರ್ಚಿ, ಭೂತಗನ್ನಡಿ ವ್ಯವಸ್ಥೆ, ನೆರವಿಗಾಗಿ ಸ್ಕೌಟ್ ಆ್ಯಂಡ್ ಗೈಡ್ಸ್ ಹಾಗೂ ಶಾಲಾ ಮಕ್ಕಳನ್ನು ಸ್ವಯಂ ಸೇವಕರನ್ನಾಗಿ ನೇಮಕ ಮಾಡಲಾಗಿದೆ. ಮಾಡಲಾಗಿದೆ. ಸಖಿ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿಗಳ ನಿಯೋಜನೆ ಮಾಡಲಾಗಿದೆ.

         ಮೇಲುಸ್ತುವಾರಿ ಅಧಿಕಾರಿ, ನೋಡಲ್ ಅಧಿಕಾರಿ, ಆರೋಗ್ಯ ತಪಾಸಣೆ ವ್ಯವಸ್ಥೆ, ಸೆಲ್ಫಿ ಪಾಯಿಂಟ್, ಮಕ್ಕಳಿಗೆ ಆಟದ ಸಾಮಗ್ರಿಗಳ ವ್ಯವಸ್ಥೆ, ಸ್ವಯಂ ಸೇವಕರ ನಿಯೋಜನೆ ಮಾಡಲಾಗಿದೆ.ಎಲ್ಲ ಮತಗಟ್ಟೆಗಳಲ್ಲಿ ಕನಿಷ್ಠ ಸೌಲಭ್ಯಗಳಾದ ಶೌಚಾಲಯ, ರ್ಯಾಂಪ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಅಗತ್ಯ ಕಂಡುಬಂದರೆ ನೆರಳಿನ ವ್ಯವಸ್ಥೆ, ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ಸರತಿ ಸಾಲಿನಲ್ಲಿ ನಿಲ್ಲಿಸದೇ ನೇರವಾಗಿ ಮತದಾನ ಮಾಡುವ ವ್ಯವಸ್ಥೆ ಮಾಡಲಾಗಿದೆ. ಯಾವುದೇ ಮತದಾರ ನಿರ್ಭಿತಿಯಿಂದ ಮತ ಚಲಾಯಿಸಲು ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

      ಮತದಾರರ ವಿವರ: ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಅವಳಿ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 21,584 ವಿಕಲಚೇತನ ಮತದಾರರು ಸೇರಿದಂತೆ 17,06,909 ಮತದಾರರು ಇದ್ದಾರೆ. ಈ ಪೈಕಿ 8,71,256 ಪುರುಷರು, 8,35,693 ಮಹಿಳೆಯರು ಹಾಗೂ 80 ಜನ ಇತರ ಮತದಾರರು ಇದ್ದಾರೆ. ಈಗಾಗಲೇ ಶೇ.100 ರಷ್ಟು ಎಪಿಕ್ ಕಾರ್ಡ್ ವಿತರಣೆಯಾಗಿದೆ. ಶೇ.82 ರಷ್ಟು ವೋಟರ್ ಸ್ಲೀಪ್ ವಿತರಣೆಯಾಗಿದೆ ಎಂದು ತಿಳಿಸಿದರು.ಟಿಕಲ್ ಮತಗಟ್ಟೆ: 1972 ಮತಗಟ್ಟೆಗಳ ಪೈಕಿ 387 ಕ್ರಿಟಿಕಲ್ ಮತಗಟ್ಟೆಗಳಿಗೆ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ. ಹೆಚ್ಚುವರಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 95 ವಲ್ನೆರೆಬಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. 104 ವೆಬ್ ಕಾಸ್ಟಿಂಗ್ ಅಳವಡಿಸಿ ನಿಗಾವಹಿಸಲಾಗುವುದು. 60 ಮತಗಟ್ಟೆಗಳ ಚಟುವಟಿಕೆಗಳನ್ನು ವಿಡಿಯೋ ಚಿತ್ರಿಕರೀಣಗೊಳಿಸಲಾಗುವುದು, 330 ಮತಗಟ್ಟೆಗಳಲ್ಲಿ ಸೂಕ್ಷ್ಮ ವೀಕ್ಷಕರನ್ನು ನೇಮಿಸಿ ನಿಗಾವಹಿಸಲಾಗುವುದು ಎಂದು ತಿಳಿಸಿದರು.

           ಮತದಾನದ ದಿನ ವಿಶೇಷ ಕಟ್ಟೆಚ್ಚರ ವಹಿಸಲಾಗಿದೆ. ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 187 ಸೆಕ್ಟರ್ ಅಧಿಕಾರಿಗಳ ತಂಡ ರಚಿಸಲಾಗಿದೆ. 46 ಫ್ಲೈಯಿಂಗ್ ಸ್ಕ್ವಾಡ್, 81 ಸ್ಥಿರಕಣ್ಗಾವಲು ತಂಡ, 24 ವಿಡಿಯೋ ಸರ್ವಲೆನ್ಸ್ ತಂಡ, 29 ವಿಡಿಯೋ ವಿವಿಂಗ್ ತಂಡ ಹಾಗೂ ಪೊಲೀಸ್ ಪಡೆಗಳು ಚುನಾವಣಾ ಚಟುವಟಿಕೆಗಳ ಮೇಲೆ ನಿಗಾವಹಿಸಲಿದ್ದಾರೆ ಎಂದು ತಿಳಿಸಿದರು.

ವಾಹನ ಬಳಕೆ:

        1972 ಮತಗಟ್ಟೆಗಳಿಗೆ ಮತದಾನ ಪರಿಕರಗಳು ಹಾಗೂ ಸಿಬ್ಬಂದಿಗಳು ತೆರಳು ಅನುಕೂಲವಾಗುವಂತೆ 381 ಮಾರ್ಗಗಳನ್ನು ರಚಿಸಲಾಗಿದೆ. ಹಾವೇರಿ ಜಿಲ್ಲೆಗೆ ಸಂಬಂಧಿಸಿದಂತೆ 286 ಮಾರ್ಗಗಳನ್ನು ರಚಿಸಿ 224 ಕೆ.ಎಸ್.ಆರ್.ಟಿ.ಸಿ ಬಸ್, ಏಳು ಮಿನಿಬಸ್, 33 ಮ್ಯಾಕ್ಸಿಕ್ಯಾಬ್, 29 ಕ್ರೂಜರ್ ಒಳಗೊಂಡಂತೆ 293 ವಾಹನಗಳ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಮೊಬೈಲ್ ಫೋನ್ ನಿರ್ಭಂಧ:

         ಮತಗಟ್ಟೆಯೊಳಗೆ ಮೊಬೈಲ್, ಕ್ಯಾಮರಾ, ಬೆಂಕಿಪೊಟ್ಟಣ ಸೇರಿದಂತೆ ಅಪಾಯಕಾರಿ ವಾಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಿದೆ. ನೀರಿನ ಬಾಟಲ್, ಆಹಾರ ಪೊಟ್ಟಣ, ಎಲೆಕ್ಟ್ರಾನಿಕ್ ಗೆಜೆಟ್ ಹಾಗೂ ಯಾವುದೇ ತರದ ವಸ್ತುಗಳನ್ನು ಮತದಾನ ಕೊಠಡಿಯೊಳಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ಆಯೋಗದ ಮಾರ್ಗಸೂಚಿಯಂತೆ ಯಾರಿಗೆ ಮತದಾನ ಮಾಡಿದೆ ಎಂದು ಹೇಳುವಹಾಗಿಲ್ಲ. ವಿಡಿಯೋ, ಫೋಟೋ ತೆಗೆದು ಪ್ರಕಟಿಸುವ ಹಾಗಿಲ್ಲ. ಒಂದೊಮ್ಮೆ ಬಹಿರಂಗಪಪಡಿಸಿದರೆ ಪ್ರಜಾಪ್ರಾತಿನಿಧಿಕ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

        ಮತಗಟ್ಟೆಯೊಳಗೆ ಚುನಾವಣಾ ಆಯೋಗದ ಅನುಮತಿಪತ್ರ ಹೊಂದಿದ ಅಭ್ಯರ್ಥಿ, ಚುನಾವಣಾಏಜೆಂಟ್, ಚುನಾವಣಾ ವೀಕ್ಷಕರು, ಚುನಾವಣಾ ಕರ್ತವ್ಯದಲ್ಲಿರುವ ಸಂಬಂಧಿಸಿದ ಅಧಿಕಾರಿಗಳು, ಮತಗಟ್ಟೆ ಅಧಿಕಾರಿಗಳು, ಸೂಕ್ಷ್ಮ ವೀಕ್ಷಕರು, ಮತದಾರನ ಜೊತೆಗಿರುವ ಸಣ್ಣ ಮಗು, ಸುರ್ಬಲ ಮತದಾರರ ಸಹಾಯಕ ವ್ಯಕ್ತಿಗೆ ಮಾತ್ರ ಪ್ರವೇಶ.

          ಅಂಚೆ ಮತಪತ್ರ: ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಸಿಬ್ಬಂದಿಗಳಿಗೆ ಅಂಚೆಮಪತ್ರ ಹಾಗೂ ಇ.ಡಿ.ಸಿ. ವ್ಯವಸ್ಥೆಯನ್ನು ಎನ್.ಐ.ಸಿ. ತಂತ್ರಾಂಶದ ಮೂಲಕ ಮಾಡಲಾಗಿದೆ. 3890 ಅಂಚೆ ಮತಪತ್ರ ಹಾಗೂ 6708 ಇಡಿಸಿ ವಿತರಿಸಲಾಗಿದೆ ಎಂದು ತಿಳಿಸಿದರು.

           ಎರಡು ಗಂಟೆಗೊಮ್ಮೆ: ಎರಡುಗಂಟೆಗೊಮ್ಮೆ ಮತದಾನ ವಿವರವನ್ನು ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಲಾಗುವುದು. ಇದಕ್ಕಾಗಿ ವಿಧಾನಸಭಾವಾರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಗಣಕಯಂತ್ರ ಚಾಲಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

            ಮದ್ಯಮಾರಾಟ ನಿಷೇಧ: ಎಪ್ರಿಲ್ 21ರ ಭಾನುವಾರ ಸಂಜೆ 6 ಗಂಟೆಯಿಂದ ಎಪ್ರಿಲ್ 24ರ ಸಂಜೆ 6 ಗಂಟೆವರೆಗೆ ಜಿಲ್ಲೆಯಾದ್ಯಂತ ಮದ್ಯಮಾರಾಟ ನಿಷೇಧಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸೆಕ್ಸನ್ 144ನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಮಾತನಾಡಿ, ಪಿ.ಡಬ್ಲ್ಯೂಡಿ ವೋಟರ್‍ಗಳ ಮತದಾನ ಮಾಹಿತಿ ಹಾಗೂ ಮತದಾನ ಸೌಲಭ್ಯಗಳ ಕುರಿತಂತೆ ಉಸ್ತುವಾರಿ ಅಧಿಕಾರಿಗಳನ್ನು ಹಾಗೂ ಸ್ವಯಂ ಸೇವಕರನ್ನು ನೇಮಕ ಮಾಡಲಾಗಿದೆ.

           560 ಜನ ಸ್ಕೌಟ್ ಆಂಡ್ ಗೈಡ್ಸ್ ಸ್ವಯಂ ಸೇವಕರು, ಒಂಭತ್ತನೇ ತರಗತಿಯಿಂದ ಪಿ.ಯು.ಸಿ. ವ್ಯಾಸಂಗ ಮಾಡುವ ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಆಯೋಗದ ಮಾರ್ಗಸೂಚಿಯಂತೆ ಈ ವಿದ್ಯಾರ್ಥಿಗಳಿಗೆ ಚುನಾವಣಾ ಕರ್ತವ್ಯ ನಿರ್ವಹಿಸಿದ ಕುರಿತಂತೆ ಪ್ರಮಾಣಪತ್ರ ನೀಡಲಾಗುವುದು ಎಂದು ತಿಳಿಸಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಅವರು ಪೊಲೀಸ್ ಬಂದೋಬಸ್ತ್ ಕುರಿತಂತೆ ವಿವರಿಸಿದರು. ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಗೋವಿಂದರೆಡ್ಡಿ ಅವರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link