ಹಾಗನಲ್ಲ ಪಟ್ಟಣದಲ್ಲಿ ಚತುಷ್ಪತ ರಸ್ತೆಯ ನಿರ್ಮಾಣಕ್ಕಾಗಿ ಮನವಿ

0
8

ಹಾನಗಲ್ಲ :

        ಹಾನಗಲ್ಲ ಪಟ್ಟಣದಲ್ಲಿ ಹಾದು ಹೋಗಿರುವ ತಡಸ-ಶಿವಮೊಗ್ಗಾ ಹೆದ್ದಾರಿ ಕಾಮಗಾರಿ ವಿಳಂಬವಾಗುತ್ತಿದ್ದು, ಹಾಗನಲ್ಲ ಪಟ್ಟಣದಲ್ಲಿ ಈ ರಸ್ತೆಯನ್ನು ಚತುಷ್ಪತ ರಸ್ತೆಯನ್ನಾಗಿ ನಿರ್ಮಾಣ ಮಾಡುಬೇಕು ಎಂದು ಹಾನಗಲ್ಲ ನಾಗರೀಕರು ಸವಣೂರು ಉಪವಿಭಾಗಾಧಿಕರಿಗಳೂ ಆಗಿರುವ ಹಾನಗಲ್ಲ ಪುರಸಭೆ ಆಡಳಿತಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ.

        ಹಾನಗಲ್ಲ ಪುರಸಭೆ ಆಡಳಿತಾಧಿಕಾರಿ ರಾಮಚಂದ್ರ ಗಡೇದ ಅವರಿಗೆ ಮನವಿ ಸಲ್ಲಿಸಿರುವ ಅವರು, ಹಾನಗಲ್ಲ ಪಟ್ಟಣದಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಈ ರಸ್ತೆ ಕಾಮಗಾರಿ ಬೇಗ ಪೂರ್ಣಗೊಳ್ಳಬೇಕು. ಎಲ್ಲದಕ್ಕೂ ಮುಖ್ಯವಾಗಿ ಹಾನಗಲ್ಲ ಪಟ್ಟಾಣದಲ್ಲಿರುವ ಈ ರಸ್ತೆ ಚಟುಸ್ಪತವಾಗಬೇಕು. ವಾಹನ ದಟ್ಟಣೆ ಹೆಚ್ಚಾಗಿರುವುದರಿಂದ ಇದು ಚತುಷ್ಪತವಾಗಲೇಬೇಕಾಗಿದೆ. ಹಾನಗಲ್ಲ ಬಸ್ ಡಪೋದಿಂದ ಆನೆಕರೆವರೆಗೆ ಈ ರಸ್ತೆ ಚತುಷ್ಪತವಾಗಬೇಕು. ಈ ಮೂಲಕ ಸುಗಮ ಸಂಚಾರಕ್ಕೆ ಅವಕಾಶವಾಗಬೇಕು ಎಂದು ಅಗ್ರಹಿಸಿದ್ದಾರೆ.

        ಪಟ್ಟಣದ ನಾಗರಿಕರಾದ ಪ್ರಶಾಂತ ಮುಚ್ಚಂಡಿ, ರಾಮು ಯಳ್ಳೂರು, ಆದರ್ಶ ಶೆಟ್ಟಿ, ರಾಜು ಗುಡಿ, ಬಸವರಾಜ ಹಾದಿಮನಿ ಮನವಿ ಅರ್ಪಿಸಿ ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

LEAVE A REPLY

Please enter your comment!
Please enter your name here