ಹಾವೇರಿ
ಶಿಗ್ಗಾವಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಯಾಸೀರ್ ಖಾನ್ ಪಠಾನ್ ಅವರ ಹೋಟೆಲ್ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ. ಇದರೊಂದಿಗೆ ಪಠಾನ್ ಆಪ್ತ ಎನ್ನಲಾಗುತ್ತಿರುವ ಮಹಮ್ಮದ್ ಹುಸೇನ್ ಮಳಗಿ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಯಾಸೀರ್ ಖಾನ್ ಪಠಾನ್ ಅವರ ಹೋಟೆಲ್ NH4 ಗ್ರ್ಯಾಂಡ್ ಮೇಲೆ ಸೋಮವಾರ ರಾತ್ರಿ ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈ ದಾಳಿ ವೇಳೆ ಹೋಟೆಲ್ ನಲ್ಲಿದ್ದ 6 ಲಕ್ಷ 10 ಸಾವಿರ ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಬಂಕಾಪುರದ ಮುಂಡಗೋಡ್ ಕ್ರಾಸ್ ಬಳಿಯ ಪಠಾನ್ ಅವರ ಮನೆಯ ಮೇಲೂ ಅಧಿಕಾರಿಗಳಿಂದ ದಾಳಿ ನಡೆದಿದೆ.
ಸೂಕ್ತ ಮಾಹಿತಿ ಆಧರಿಸಿದ ದಾಳಿ ನಡೆಸಿದ್ದು, ಹೊಟೆಲ್ ಮತ್ತು ಮನೆಯನ್ನು ಪರಿಶೀಲಿಸಿದ್ದಾರೆ. ಅಷ್ಟೇ ಅಲ್ಲದೇ ಅವರ ಆಪ್ತ ಎನ್ನಲಾಗುತ್ತಿರುವ ಮಹ್ಮದ್ ಹುಸೇನ್ ಮಳಗಿ ಮನೆ ಮೇಲೂ ಚುನಾವಣೆ ಆಯೋಗದಿಂದ ದಾಳಿ ನಡೆದಿದೆ. ಈ ವೇಳೆ ಮಹಮ್ಮದ್ ಹುಸೇನ್ ಮಳಗಿ ಮನೆಯಲ್ಲಿ 1 ಲಕ್ಷ 71 ಸಾವಿರ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ