ಅ.10 ರಿಂದ ಅ.19.ರ ವರಗೆ ಗ್ರಾಮ ದೇವತೆಗೆ ಶರನ್ನವರಾತ್ರಿ ಮಹೋತ್ಸವನ್ನು ಕಾರ್ಯಕ್ರಮ

0
29

ಹರಿಹರ:

        ಅ.10 ರಿಂದ ಅ.19.ರ ವರಗೆ ನಗರದ ಕಸಬಾ ದೇವಸ್ಥಾನದಲ್ಲಿ ಗ್ರಾಮ ದೇವತೆಯಾದ ಊರಮ್ಮನಿಗೆ 25ನೇ ರಜತ ವರ್ಷದ ಶರನ್ನವರಾತ್ರಿ ಮಹೋತ್ಸವನ್ನು ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು.

       ನಗರದ ದೇವಸ್ಥಾನ ಆವರಣದಲ್ಲಿ ದೇವಿಗೆ ವಿವಿಧ ಆಭರಣಗಳಿಂದ ಅಲಂಕಾರಗೊಳ್ಳಿಸಿ ಅ:10 ರ ಬುಧವಾರದಂದು ಶ್ರೀ ಊರಮ್ಮ ದೇವಿಗೆ ವಿಶೇಷ ಪೂಜೆ ನೇರವೆರಿಸುವುದರ ಮೂಲಕ ಶ್ರೀ ಹೊರನಾಡು ಅನ್ನಪೂರ್ಣೇಶ್ವರಿ ದೇವಿಯ ಅಲಂಕಾರವನ್ನು ಮಾಡಲಾಗುವುದು.

        ಅ 11 ರ ಗುರುವಾರದಂದು ದೇವಿಗೆ ಶ್ರೀ ರಾಜರಾಜೇಶ್ವರಿ ದೇವಿ ಅಲಂಕಾರವನ್ನು, ಅ.12 ರ ಶುಕ್ರವಾರದಂದು ದೇವಿಗೆ ಶ್ರೀ ಗಾಣಗಟ್ಟಿ ಮಾಯಮ್ಮ ದೇವಿ ಅಲಂಕಾರವನ್ನು, ಅ 13 ರ ಶನಿವಾರದಂದು ದೇವಿಗೆ ಶ್ರೀ ಕೊಲ್ಲಾಪುರ ಮಹಾಲಕ್ಷ್ಮೀ ದೇವಿಯ ಅಲಂಕಾರವನ್ನು, 14 ರ ಭಾನುವಾರದಂದು ದೇವಿಗೆ ಶ್ರೀ ಸರಸ್ವತಿ ದೇವಿಯ ಅಲಂಕಾರವನ್ನು, ಅ.15 ರ ಸೋಮವಾರದಂದು ದೇವಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿಯ ಅಲಂಕಾರವನ್ನು, ಅ16 ರ ಮಂಗಳವಾರದಂದು ದೇವಿಗೆ ಶ್ರೀ ಸವದತ್ತಿ ಯಲ್ಲಮ್ಮ ದೇವಿಯ ಅಲಂಕಾರವನ್ನು, ಅ.17 ರ ಬುಧವಾರದಂದು ದೇವಿಗೆ ಶ್ರೀ ಬಾದಾಮಿಯ ಬನಶಂಕರಿ ದೇವಿಯ ಅಲಂಕಾರವನ್ನು, ಅ.18 ರ ಗುರುವಾರದಂದು ದೇವಿಗೆ ಶ್ರೀ ಮಹಿಷಾಸುರ ಮರ್ದಿನಿ ಅಲಂಕಾರವನ್ನು, ಅ.19 ರ ಶುಕ್ರವಾರದಂದು ದೇವಿಗೆ ಶ್ರೀ ಬನ್ನಿಮಹಾಂಕಾಳಿ ದೇವಿಯ ಅಲಂಕಾರವನ್ನು ಮಾಡಲಾಗುವುದು.

          ಅ,19 ರ ಸಂಜೆ 4.00 ಗಂಟೆಯಿಂದ ನಗರದ ಕಸಬಾ ದೇವಸ್ಥಾನದಿಂದ ಹೂವಿನಿಂದ ಅಲಂಕರಿಸಲ್ಪಟ್ಟ ಪಲ್ಲಕ್ಕಿಯಲ್ಲಿ ಊರಮ್ಮ ದೇವಿಯ ಬೆಳ್ಳಿಯ ಮೂರ್ತಿಯೊಂದಿಗೆ, ಕ್ಷೇತ್ರ ಪಾಲಕ ಶ್ರೀ ಹರಿಹರೇಶ್ವರ ದೇವಸ್ಥಾನಕ್ಕೆ ತೆರಳಿ, ಅಲ್ಲಿಂದ ಶ್ರೀ ಜೋಡು ಬಸವೇಶ್ವರ ದೇವಸ್ಥಾನದ ಬನ್ನಿಮಂಟಪದಲ್ಲಿ ಬನ್ನಿ ಮುಡಿಯಲಾಗುವುದು.

        ದಸರಾ ನಿಮಿತ್ತ ಹತ್ತು ದಿನಗಳಲ್ಲಿ ಮಾಡಲಾಗುವ ವಿಶೇಷ ಪೂಜೆ ಮಾಡಬಯಸುವರು ಒಂದು ದಿನದ ಪೂಜೆ ಸಲ್ಲಿಸ ಬಯಸುವವರು ದೇವಸ್ಥಾನದ ಕಚೇರಿಯಲ್ಲಿ ರೂ, 251/- ನೀಡಿ ರಸೀದಿ ಪಡೆಯಲು ವಿನಂತಿಸಲಾಗಿದೆ ಎಂದು ಕಸಬಾ ಶ್ರೀ ಗ್ರಾಮದೇವತೆ ಟ್ರಸ್ಟ್ ಹರಿಹರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here