ಕೊರಟಗೆರೆ
ನಮ್ಮ ಕರುನಾಡಿನ ಪ್ರವಾಸಿ ತಾಣಗಳಾದ ಕೊಡಗು ಮತ್ತು ಮಡಿಕೇರಿಯ ನೆರೆ ಸಂತ್ರಸ್ತರಿಗೆ ನೆರವು ನೀಡುವುದು ನಮ್ಮೇಲ್ಲರ ಪ್ರಮುಖ ಕರ್ತವ್ಯವಾಗಿದೆ ಎಂದು ಎಲೆರಾಂಪುರ ಗ್ರಾಪಂ ಅಧ್ಯಕ್ಷ ಸೀತರಾಂ ತಿಳಿಸಿದರು.
ತಾಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾಪಂ ವ್ಯಾಪ್ತಿಯ 14ಗ್ರಾಮಗಳಲ್ಲಿ ಎರಡು ದಿನಗಳಿಂದ ಕೊಡಗು ಮತ್ತು ಮಡಿಕೇರಿಯ ಜನರಿಗೆ ನೆರೆ ಮಂಗಳವಾರ ಪುನರ್ವಸತಿ ನಿಧಿ ಸಂಗ್ರಹಿಸಿದ ನಂತರಮಾತನಾಡಿದರು.
ಕಳೆದ 15ದಿನಗಳಿಂದ ಸುರಿಯುತ್ತೀರುವ ಮರಣಮೃದಂಗ ಮಳೆಗೆ ಕೊಡಗು ಮತ್ತು ಮಡಿಕೇರಿಯ ಜನರು ನಿರ್ಮಿಸಿಕೊಂಡಿದ್ದ ಮನೆ, ಗುಡಿಸಲು, ಜಾನುವಾರು, ಜಮೀನು ಸೇರಿದಂತೆ ಬೆಳೆಗಳು ಪ್ರಕೃತಿ ವಿಕೋಪಕ್ಕೆ ಬಲಿಯಾಗಿದೆ. ನಮ್ಮ ಗ್ರಾಪಂ ವ್ಯಾಪ್ತಿಯ 14ಗ್ರಾಮಗಳ ಮನೆಮನೆಗೆ ಬೇಟಿ ನೀಡಿ ಎರಡು ದಿನ ಕೆಲಸ ಮಾಡಿ ಹಣವನ್ನು ಸಂಗ್ರಹಣೆ ಮಾಡಿದ್ದೇವೆ ಎಂದು ಹೇಳಿದರು.
ಎಲೆರಾಂಪುರ ಪಿಡಿಓ ಶಿವಕುಮಾರ್ ಮಾತನಾಡಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಸೇರಿದಂತೆ ಗ್ರಾಪಂ ಸಿಬ್ಬಂಧಿವರ್ಗ ಮನೆಮನೆಗೆ ತೆರಳಿ ದೇಣಿಗೆ ರೂಪದಲ್ಲಿ ಹಣ ಸಂಗ್ರಹಣೆ ಮಾಡಿದ್ದೇವೆ. ಶೇಖರಣೆ ಮಾಡಿರುವ 42064ರೂ ನಗದು ಹಣವನ್ನು ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಡಿಡಿ ತೆಗೆಯುವ ಮೂಲಕ ಕಳುಹಿಸಲು ಏರ್ಪಾಡು ಮಾಡಲಾಗಿದೆ ಎಂದು ತಿಳಿಸಿದರು.ದೇಣಿಗೆ ಸಂಗ್ರಹಣೆ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ರಾಕೇಶ್, ಜಯರಾಂ, ರಾಜಣ್ಣ, ಹನುಮಂತರಾಯಪ್ಪ, ರಮೇಶ್, ಅಶ್ವತ್ಥ, ನರಸಿಂಹಮೂರ್ತಿ, ಲೆಕ್ಕಾಧಿಕಾರಿ ಮುನಿರಾಜು, ಸಿಬ್ಬಂಧಿಗಳಾದ ವೇದ, ಶ್ವೇತಾ, ಚಿತ್ರಶೇಖರ್, ಲಕ್ಷ್ಮೀಕಾಂತ, ಲಕ್ಷ್ಮೀ, ಕುಮಾರ್, ನಾಗೇಶ್, ಪುಟ್ಟನಾಗಯ್ಯ, ರಾಮಸಂಜೀವಯ್ಯ, ನಾಗೇಶ್, ವಿಜಯಕುಮಾರ್, ವೆಂಕಟೇಶ್, ಲಕ್ಷ್ಮೀಶ್ ಸೇರಿದಂತೆ ಇತರರು ಇದ್ದರು.
