ಹಾತ್ರೋನ್: 
ಎಲ್ಲರು ಚಂದ್ರನನ್ನು ಭೂಮಿಯಿಂದ ನೋಡಿ ಹತ್ತರದಿಂದ ಇನ್ನೆಷ್ಠು ಚೆಂದ ಎಂದು ಕನಸು ಕಾಣುತ್ತೇವೆ ಆದರೆ ಜಪಾನಿನ ಒಬ್ಬ ಉದ್ಯಮಿ ಮಾತ್ರ ಅದನ್ನು ನಿಜ ಮಾಡಲು ಮುಂದಾಗಿದ್ದಾರೆ ಕೆಲ ವರ್ಷಗಳ ಹಿಂದೆ ಘೋಷಣೆಯಾಗಿದ್ದ ಸ್ಪೇಸ್ ಎಕ್ಸ್ ನ ಚಂದ್ರಯಾನ ಯೋಜನೆಯ ರಾಕೆಟ್ ನಲ್ಲಿ ಚಂದ್ರನ ಸುತ್ತ 2023ರ ಆದಿಭಾಗದಲ್ಲಿ ಜಪಾನ್ ನ ಶತಕೋಟಿ ಒಡೆಯ ಮತ್ತು ಆನ್ ಲೈನ್ ಫ್ಯಾಶನ್ ಉದ್ಯಮಿ ಯುಸುಕು ಮೆಯೆಝಾವಾ ಪ್ರಯಾಣಿಸಲಿದ್ದಾರೆ. ಅವರ ಜೊತೆ 6ರಿಂದ 8 ಮಂದಿ ಕಲಾವಿದರನ್ನು ಕರೆದೊಯ್ಯಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ .ಯುಸುಕು ಮೆಯೆಝುವಾ 1972ರಲ್ಲಿ ಭೂಮಿಯ ಏಕೈಕ ಉಪಗ್ರಹವಾದ ಚಂದ್ರನಲ್ಲಿಗೆ ಪ್ರಯಾಣಿಸಿದ ಅಪೊಲೊ ಮಿಷನ್ ನಂತರ ಪ್ರಯಾಣಿಸುವ ಮೊದಲ ಗಗನಯಾತ್ರಿಯಾಗಿದ್ದಾರೆ.
ತಮ್ಮ ಪ್ರಯಾಣಕ್ಕೆ ಅವರು ಅನಿರ್ದಿಷ್ಟ ಮೊತ್ತವನ್ನು ಸ್ಪೇಸ್ ಎಕ್ಸ್ ಸಂಸ್ಥೆಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ . ಈ ಪಯಣದ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಕೊಟ್ಟ ಉತ್ತರವೇನೆಂದರೆ ನಾನು ಚಿಕ್ಕವನಿದ್ದಾಗಲೇ ನನಗೆ ಚಂದ್ರನೆಂದರೆ ಕುತೂಹಲವಿತ್ತು, ಇದು ನನ್ನ ಜೀವನದ ಕನಸು ಎಂದು ಮೆಯೆಝುವಾ ಹೇಳಿದ್ದಾರೆ . ಜಪಾನ್ ನ ಅತಿದೊಡ್ಡ ಆನ್ ಲೈನ್ ಫ್ಯಾಶನ್ ಮಾಲ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿರುವ ಮೆಯೆಝುವಾ ಸುಮಾರು 3 ಶತಕೋಟಿ ಡಾಲರ್ ನ ಒಡೆಯರಾಗಿದ್ದು ಜಪಾನ್ ನ 18ನೇ ಅತಿ ಶ್ರೀಮಂತ ವ್ಯಕ್ತಿ ಎಂದು ಫೋರ್ಬ್ಸ್ ಮ್ಯಾಗಜೀನ್ ತಿಳಿಸಿದೆ. ಇವರು ಚಿತ್ರಕಲೆಗಳನ್ನು ಕೂಡ ಬಹಳ ಇಷ್ಟಪಡುವವರಾಗಿದ್ದಾರೆ. ಕಲೆ ಮೇಲಿನ ಪ್ರೀತಿಯಿಂದಾಗಿ ಚಂದ್ರನಲ್ಲಿಗೆ ಪ್ರಯಾಣಿಸುವಾಗ ತಮ್ಮ ಜೊತೆ ಕೆಲ ಕಲಾವಿದರನ್ನು ಕೂಡ ಆಹ್ವಾನಿಸಿದ್ದಾರೆ.ಚಂದ್ರನಲ್ಲಿಗೆ ಪ್ರಯಾಣಿಸುವಾಗ ನನ್ನ ಜೊತೆ ವಿಶ್ವದಾದ್ಯಂತದಿಂದ 6ರಿಂದ 8 ಕಲಾವಿದರನ್ನು ಆಹ್ವಾನಿಸುತ್ತೇನೆ. ಅವರು ಭೂಮಿಗೆ ಹಿಂತಿರುಗಿದ ನಂತರ ಕಲಾವಿದರಾಗಿರುವುದರಿಂದ ಕಲೆಯ ಮೂಲಕ ಏನಾದರೊಂದು ಸೃಷ್ಟಿಸಬಹುದು, ಅದು ನಮ್ಮೊಳಗಿನ ಕನಸಿಗೆ ಪ್ರೇರಣೆಯಾಗಬಹುದು ಎಂದು ಮೆಯೆಝುವಾ ಹೇಳುತ್ತಾರೆ.
ಇದುವರೆಗೆ ಚಂದ್ರನಲ್ಲಿಗೆ ಅಮೆರಿಕಾದ ಖಗೋಳ ವಿಜ್ಞಾನಿಗಳು ಮಾತ್ರ ಪ್ರಯಾಣಿಸಿದ್ದರು. ಒಟ್ಟು 24 ನಾಸಾ ವಿಜ್ಞಾನಿಗಳು 1960ರಿಂದ 1970ರ ದಶಕದವರೆಗೆ ಪ್ರಯಾಣಿಸಿದ್ದವರು. 12 ಮಂದಿ ಚಂದ್ರನ ಮೇಲ್ಮೈಯಲ್ಲಿ ಪ್ರಯಾಣಿಸಿ ಬಂದಿದ್ದಾರೆ.ಮೊದಲ ಬಾರಿಗೆ ಅಂತರಿಕ್ಷಕ್ಕೆ ಪ್ರಯಾಣ ಬೆಳೆಸಿದ್ದು ಅಮೆರಿಕಾದ ಉದ್ಯಮಿ ಡೆನ್ನಿಸ್ ಟಿಟೊ 2001ರಲ್ಲಿ, ರಷ್ಯಾದ ಅಂತರಿಕ್ಷ ನೌಕೆಯಲ್ಲಿ ಪ್ರಯಾಣಿಸಲು ಸುಮಾರು 20 ದಶಲಕ್ಷ ಡಾಲರ್ ಖರ್ಚು ಮಾಡಿದ್ದರು ಎನ್ನಲಾಗಿದೆ.
