ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದ ಮಾರುತಿ ಸುಜುಕಿ…!!!

ನವದೆಹಲಿ:

     ಸಾಹಸಿ ಮಸ್ತತ್ವದ ಕಾರು ಚಾಲಕರಿಗೆ ಮತ್ತು ಕಾರು ಪ್ರೇಮಿಗಳಿಗೆ ಮಾರುತಿ ಕಂಪನಿ ದೊಡ್ಡ ಆಘಾತವೊಂದನ್ನು ನೀಡಿದೆ.   ಮಿಲಿಟರಿ, ಪೊಲೀಸ್ ಇಲಾಖೆ, ಮಣ್ಣಿನ ರೇಸ್ ಟ್ರ್ಯಾಕ್ ಗಳಲ್ಲಿ ಗುರುತಿಸಿಕೊಂಡಿದ್ದ ಜಿಪ್ಸಿ ಕಾರಿನ ಉತ್ಪಾದನೆಯನ್ನು ನಿಲ್ಲಿಸಲು ಮಾರುತಿ ಸುಜುಕಿ ಕಂಪನಿ ಮುಂದಾಗಿದೆ.

     ಪ್ರಸ್ತುತವಾಗಿ ಜಿಪ್ಸಿಯನ್ನು ಮುಂಗಡ ಬುಕ್ಕಿಂಗ್ ಮಾಡಿರುವ ಆಧಾರದ ಮೇಲೆ ಗ್ರಾಹಕರಿಗೆ ವಿತರಣೆ ಮಾಡಲಾಗುತಿತ್ತು ಇನ್ನುಮುಂದೆ ಮಾರುತಿ ಸುಜುಕಿ ಕಂಪನಿ ಶೋ ರೂಮ್ ಡೀಲರ್ ಗಳಿಗೆ ಮುಂಗಡ ಬುಕ್ಕಿಂಗ್ ಆರ್ಡರ್ ಸ್ವೀಕರಿಸಬೇಡಿ ಎಂದು ಸೂಚಿಸಿದೆ ಎಂದು ತಿಳಿಸಲಾಗಿದೆ.

     ಜಿಪ್ಸಿ ಮತ್ತು ಇನ್ನು ಕೆಲವು ವಾಹನಗಳಿಂದ ಆಗುವ ಅಪಘಾತಗಳಿಂದ ಪ್ರಾಣ ಹಾನಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲ ವಾಹನಗಳು ಕನಿಷ್ಠ ಸುರಕ್ಷತಾ ಮಾನದಂಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಕಾರು ಉತ್ಪಾದಕಾ ಕಂಪನಿಗಳಿಗೆ ಸೂಚಿಸಿದೆ. ಏಪ್ರಿಲ್ 2019 ರಿಂದ ರಸ್ತೆಗೆ ಇಳಿಯಲಿರುವ ಕಾರುಗಳು ಈ ಮಾನದಂಡವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಸರ್ಕಾರ ಆದೇಶಿಸಿದೆ. 

 

    ಕನಿಷ್ಠ ಸುರಕ್ಷತಾ ಮಾನದಂಡ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಜಿಪ್ಸಿ ಕಾರನ್ನು ಮಾರುತಿ ಕಂಪನಿ ಕೆಲವೊಂದು ಬದಲಾವಣೆ ಮಾಡಿ ರಸ್ತೆಗೆ ಇಳಿಸಲು ಪ್ರಯತ್ನ ನಡೆಸಿತ್ತು. ಆದರೆ ಹೊಸ ರಕ್ಷಣೆ ಮತ್ತು ಕ್ರ್ಯಾಶ್ ಟೆಸ್ಟ್ ತೇರ್ಗಡೆಯಾಗಲು ವಿಫಲವಾದ ಹಿನ್ನೆಲೆಯಲ್ಲಿ ಜಿಪ್ಸಿ ಕಾರಿನ ಉತ್ಪಾದನೆಯನ್ನೇ ನಿಲ್ಲಿಸಲು ಮುಂದಾಗಿದೆ.

 

ಜಿಪ್ಸಿಯ ಹಿನ್ನೆಲೆ:

       1985ರಲ್ಲಿ ಮೊದಲ ಜಿಪ್ಸಿ ಕಾರು ರಸ್ತೆಗೆ ಇಳಿದಿದ್ದು, ಅಲ್ಲಿಂದ ಇಲ್ಲಿಯವರೆಗೆ ಅದೇ ವಿನ್ಯಾಸದಲ್ಲೇ ಉತ್ಪಾದನೆಯಾಗುತಿತ್ತು. 1998ರಲ್ಲಿ ಮೂರನೇ ತಲೆಮಾರಿನ ಜಿಪ್ಸಿ ತಯಾರಾಗಿದ್ದರೆ ಕಳೆದ ವರ್ಷ ನಾಲ್ಕನೇ ತಲೆಮಾರಿನ ಕಾರನ್ನು ಮಾರುತಿ ಅಭಿವೃದ್ಧಿ ಪಡಿಸಿತ್ತು. 

       

ಆಫ್ ರೋಡ್ ನಲ್ಲಿ 4*4 ಜಿಪ್ಸಿ ಕಾರು ಬಹಳ ಚೆನ್ನಾಗಿ ಕಾರ್ಯನಿರ್ವಹಿಸುತಿತ್ತು. ಹೀಗಾಗಿ ಮಿಲಿಟರಿ ಮತ್ತು ಗ್ರಾಮೀಣ ಭಾಗದಲ್ಲಿ ಜಿಪ್ಸಿ ಜನಪ್ರಿಯತೆಯನ್ನು ಪಡೆದುಕೊಂಡಿತ್ತು. ವಿದೇಶದಲ್ಲೂ ಜಿಪ್ಸಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಭಾರತದಲ್ಲಿ ಜಿಪ್ಸಿ ಎಂದು ಕರೆಯುತ್ತಿದ್ದರೆ ವಿದೇಶದಲ್ಲಿ ಸಮರಾಯ್ ಅಥವಾ ಎಸ್‍ಜೆ410 ಹೆಸರಿನಲ್ಲಿ ಮಾರಾಟವಾಗುತಿತ್ತು. 

      ಆರಂಭದಲ್ಲಿ 1.0 ಲೀಟರ್ ಎಂಜಿನ್ ನಲ್ಲಿ ಬಿಡುಗಡೆಯಾಗಿದ್ದ ಜಿಪ್ಸಿ ನಂತರ 1.3 ಲೀಟರ್ ಎಂಜಿನ್, 5 ಗೇರ್ ಗಳಲ್ಲಿ ಬಿಡುಗಡೆಯಾಗುತಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link