ಜೆಡಿಎಸ್ ಸೋಲಿಸುವಲ್ಲಿ ಸಿದ್ದರಾಮಯ್ಯ ಸಕ್ಸಸ್ : ಕಾಂಗ್ರೆಸ್ ತೆಕ್ಕೆಗೆ ಕೆಲ ಶಾಸಕರು

 

 

ಬೆಂಗಳೂರು : ರಾಜ್ಯಸಭೆ ಚುನಾವಣೆ ಆರಂಭದಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಎರಡು ಪಕ್ಷಗಳು ಜಿದ್ದಿಗೆ ಬಿದ್ದಿದ್ದವು, ಆದರೆ ಸಿದ್ದರಾಮಯ್ಯ ಆತ್ಮಸಾಕ್ಷಿ ಮತಗಳ ಬೇಡಿಕೆ ಇಟ್ಟು ಜೆಡಿಎಸ್ ಶಾಸಕರಿಗೆ ಪತ್ರ ಬರೆದಿದ್ದರು, ಈ ಬೆನ್ನಲ್ಲೆ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ರವರಿಂದ ಅಡ್ಡಮತದಾನ ಮಾಡಿಸುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.

ಶುಕ್ರವಾರ ವಿಧಾನಸೌಧದಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಅಡ್ಡಮತದಾನ ಮಾಡಿದ್ದಾರೆ,  ನಾನು ಕಾಂಗ್ರೆಸ್ ಗೆ ಮತ ಹಾಕಿದ್ದೇನೆ ಎಂದು ವಿಧಾನಸೌಧದಲ್ಲಿ ಹೇಳಿಕೆ ನೀಡದ್ದಾರೆ. ನಾನು ಈ ಹಿಂದೆ ಕಾಂಗ್ರೆಸ್ ನಿಂದಲೇ ಸಚಿವನಾಗಿದ್ದೆ, ಕುಮಾರಸ್ವಾಮಿ ಅವರು ಸಿಟ್ಟಾದರೂ  ಪರವಾಗಿಲ್ಲ, ರಾಜಕೀಯದಲ್ಲಿ ಇದೆಲ್ಲ ಕಾಮನ್ ಎಂದು ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಹೇಳಿದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಮೇಶ್ ಕುಮಾರ್ ಅವರು ಶ್ರೀನಿವಾಸಗೌಡ ಅವರನ್ನು ಮತ ಹಾಕುವಂತೆ ಮನವಿ ಮಾಡಿದ್ದರು ಎನ್ನಲಾಗಿದ್ದು, ಈ ನಾಯಕರ ಮನವಿಗೆ ಸ್ಪಂದಿಸಿ ಶ್ರೀನಿವಾಸಗೌಡ ಅವರು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಪಕ್ಷ ಕೊನೇ ಘಳಿಗೆ ವರೆಗೂ ಶ್ರೀನಿವಾಸಗೌಡ ಅವರನ್ನು ಅಡ್ಡಮತದಾನ ಮಾಡದಂತೆ ಮನ ವೊಲಿಸುವ ಪ್ರಯತ್ನ ನಡೆಸಿತ್ತಾದರೂ ಆ ಪ್ರಯತ್ನಗಳು ಫಲ ಕೊಟ್ಟಿಲ್ಲ. ಮತದಾನಕ್ಕೂ ಮೊದಲು ನಾನು ಯಾರಿಗೆ ಮತ ಹಾಕುತ್ತೇನೆ ಎನ್ನುವುದನ್ನು ಈಗ ತಿಳಿಸುವುದಿಲ್ಲ ಎಂದಿದ್ದ ಶ್ರೀನಿವಾಸ ಗೌಡ ಮತ ಹಾಕಿದ ಬಳಿಕ ನೇರವಾಗಿ ಕಾಂಗ್ರೆಸ್ ಶಾಸಕರಿದ್ದ ಕಚೇರಿಗೆ ತೆರಳಿದರು.

ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಗೆ : ರಾಜ್ಯಸಭೆ ಚುನಾವಣೆ ವೇಳೆ ಹಲವು ಕುತೂಹಲಕಾರಿ ರಾಜಕೀಯ ಬೆಳವಣಿಗೆಗಳು ನಡೆದಿದೆ ರಾಜಕೀಯ ಸಂದೇಶಗಳು ಜನರಿಗೆ ತಲುವ ಪ್ರಯತ್ನಗಳು ನಡೆದಿದೆ, ಸಿದ್ದರಾಮಯ್ಯ ರವರು ಮುಂದೆ ಬರುವ ರ್ಸಾವತ್ರಿಕ ಚುನಾವಣೆ ಗಮನದಲ್ಲಿಟ್ಟುಕೊಂಡು ಜೆಡಿಎಸ್ ಶಾಸಕರಿಗೆ ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ಜೆಡಿಎಸ್ ನ ಬಿಜೆಪಿಯ ಬಿ ಟೀಂ ಎಂಬುದು ಸಾಬಿತು ಪಡಿಸಲು ರಾಜಕೀಯ ಅಜೆಂಡ ಇಟ್ಟುಕೊಂಡು ಸಿದ್ದು ಚುನಾವಣೆಯ ಕಣಕ್ಕಿಳಿದಿದ್ದರು, ಇದರ ಮೂಲಕ ಜೆಡಿಎಸ್ ತಮ್ಮ ಅಭ್ಯರ್ಥಿಯನ್ನು ಹಾಕುತ್ತಾರೆ, ಆದರೆ ಇಬ್ಬರ ಜನಗಳ ಮೂರನೆ ಅವರಿಗೆ ಲಾಭ ಎಂಬಂತೆ ಜೆಡಿಎಸ್ ಗೆ ಬೀಳಬೇಕಾದ ಮತಗಳು ಅಡ್ಡಮತದಾನವಾಗಿ ಕಾಂಗ್ರೆಸ್ ಮೇಲೆ ಪ್ರೀತಿ ತೋರಿಸಿದಂತಾಗಿದೆ.

ಶಾಸಕ ಶ್ರೀನಿವಾಸ್ ಗೌಡ ಮನೆ ಎದುರು ಪ್ರತಿಭಟನೆ : ಅಡ್ಡಮತದಾನ ಮಾಡಿದ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಮನೆ ಎದರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಡಿಸುತ್ತಿದ್ದಾರೆ, ಶಾಸಕರ ಮನೆ ಮುಂದೆ ಪೊಲೀಸರು ಸೂಕ್ತಬಂದೋಬಸ್ತ್ ನೀಡಿದ್ದಾರೆ.

ಅಡ್ಡ ಮತದಾನಕ್ಕೆ ಎಚ್‍ಡಿಕೆ ಅಸಮಾಧಾನ ವ್ಯಕ್ತಪಡಿಸಿದ್ದು ಕೋಲಾರದ ಶ್ರೀನಿವಾಸ ಗೌಡ ಅವರು ಅಡ್ಡ ಮತದಾನ ಮಾಡಿ ಕಾಂಗ್ರೆಸ್‍ನ ಮನ್ಸೂರ್ ಅಲಿ ಖಾನ್‍ಗೆ ಮತ ಹಾಕಿದ್ದಾರೆ. ಮಾನ ಮರ್ಯಾದೆ ಇದ್ದರೆ ಶ್ರೀನಿವಾಸ್ ಗೌಡ ರಾಜೀನಾಮೆ ನೀಡಬೇಕು  ಕೋಲಾರದ ಜನ ಜೆಡಿಎಸ್ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಿದ್ದಾರೆ, ಶ್ರೀನಿವಾಸ್ ಗೌಡ ಜೆಡಿಎಸ್ ವಿರುದ್ಧ ಹೋಗುವ ಮೂಲಕ ಜನತೆಗೆ ಅಪಮಾನ ಮಾಡಿದ್ದಾರೆ.

ಹೆಚ್.ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.

Recent Articles

spot_img

Related Stories

Share via
Copy link
Powered by Social Snap