ಕೊಟ್ಟೂರು
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಜೆಸಿಐ ಕೊಟ್ಟೂರು ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ವಿಶ್ವ ತಂಬಾಕು ರಹಿತ ದಿನಾಚರಣೆ ಅಚರಿಸಿತು.ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಜಾಥ ನಡೆಸಿದರು.
ಶಾಲಾ ಕಾಲೇಜ್ ಆವರಣದಿಂದ ಸುಮಾರು 100 ಮೀಟರ್ ದೂರದಲ್ಲಿ ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಿ ತಂಬಾಕು ಮುಕ್ತ ಪ್ರದೇಶವನ್ನಾಗಿ ಮಾಡುವ ಕುರಿತು ಜಾಥಾದಲ್ಲಿ ಜನ ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ.ಟಿ. ಕೊತ್ಲಮ್ಮ, ಎನ್.ಎಸ್.ಎಸ್. ಅಧಿಕಾರಿ ಜಿ. ಶಿವಕುಮಾರ್, ಉಪನ್ಯಾಸಕರಾದ ಎಸ್. ಮುನೇಗೌಡ, ಜಿ, ಚಿತ್ತರಂಜನ್, ಗುರುಬಸವರಾಜ್, ಶೆಟ್ಟಿ ವಿಜಯಲಕ್ಷ್ಮಿ, ಶಂಕರ್ ಪೂಜಾರ್, ಸಿದ್ದಲಿಂಗನಗೌಡ್ರು ಹಾಗೂ ಸಿಬ್ಬಂದಿ ಭಾಗವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
