ಸಿರುಗುಪ್ಪ
ತಾಲ್ಲೂಕಿನಲ್ಲಿ ಜರುಗುವ ಎಲ್ಲ ರಾಷ್ಟ್ರೀಯ ಹಬ್ಬಗಳು ವಿವಿಧ ಎಲ್ಲಾ ಸಮಾರಂಭಗಳಲ್ಲಿ ಗಣ್ಯ ಮಾನ್ಯರಿಗೆಹೂ ಮಾಲೆ ಹಾಗೂ ಸನ್ಮಾನವನ್ನು ಮಾಡುವ ವೆಚ್ಚವನ್ನು ಯೋಧರ ಶುಶ್ರೂಷೆಗೆ ಬಳಕೆ ಮಾಡೋಣ ಅದಕ್ಕೆ ನೆರವಾಗುತ್ತಿರುವ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಗೆ ಈ ಹಣವನ್ನು ದೇಣಿಗೆ ನೀಡುವ ಮೂಲಕ ಸಾರ್ಥಕತೆ ಕಾಣಬೇಕೆಂದು ತಹಸೀಲ್ದಾರ್ ದಯಾನಂದ ಪಾಟೀಲ್ ಅವರು ಪ್ರತಿಜ್ಞೆ ಬೋಧಿಸಿದರು.
ನಗರದ ತಾಲ್ಲೂಕು ಪಂಚಾಯತ್ ಸಭಾಭವನದಲ್ಲಿ ಕರ್ನಾಟಕ ಸರ್ಕಾರ ತಾಲ್ಲೂಕು ಆಡಳಿತ ತಾಲ್ಲೂಕು ಪಂಚಾಯತ್ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವದ ಸರಳ ಸಮಾರಂಭದಲ್ಲಿ ಅವರು ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನೆನಪಿಸಿ ಮಾತನಾಡಿ ಜ್ಞಾನವು ಯಾವುದೇ ಜಾತಿಗೆ ಸೀಮಿತವಾಗಿಲ್ಲ ವಾಲ್ಮೀಕಿ ಮಹರ್ಷಿಗಳ ಕವನ ವಾಚಿಸಿದ ಅವರು ಮಹರ್ಷಿ ವಾಲ್ಮೀಕಿ ಅವರ ಚರಿತ್ರೆಯ ಪುಸ್ತಕಗಳನ್ನು ಗಣ್ಯರಿಗೆ ವಿತರಿಸಿದರು.
ಸರಕಾರಿ ಪದವಿ ಕಾಲೇಜು ಪ್ರಾಚಾರ್ಯ ಡಾ.ಬಿ.ಬಸವರಾಜ ಅವರು ಮಾತನಾಡಿ ವಿಶ್ವಕ್ಕೆ ರಾಮಾಯಣದಂತಹ ಮಹಾಕಾವ್ಯ ಏಕೈಕ ಗ್ರಂಥವಾಗಿದೆ ಎಂದು ಉಪನ್ಯಾಸ ನೀಡಿದರು.ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ಪ ಸುಬೇದಾರ ಅವರು ಮಾತನಾಡಿ ರಾಮಾಯಣ ಜ್ಞಾನ ಭಂಡಾರ ಮಾನವ ಕುಲದ ದಾರಿ ದೀಪ ಸಂದೇಶದ ಆದರ್ಶ ತತ್ವ ಜೀವನದಲ್ಲಿ ಎಲ್ಲರೂ ಅಳವಡಿಸಿಕೊಂಡು ಪಾಲಿಸಬೇಕೆಂದರು.
ಲೋಕಶಿಕ್ಷಣ ಸಾಕ್ಷರತಾ ಸೆನಾನಿ ಸಾಮಾಜಿಕ ಕಾರ್ಯಕರ್ತ ಎ ಅಬ್ದುಲ್ ನಬಿ ಅವರು ಸ್ವರಚಿತ ಹಾಡು ಜಗತ್ತಿಗೆ ಮಾನವೀಯ ಮೌಲ್ಯಗಳ ಧಾರೆಯ ಮಹಾಚೇತನ ಎಂದು ಹಾಡಿದ ಹಾಡು ಸಭೆಗೆ ಶೋಭೆ ತಂದಿತು.
ಸಿಪಿಐ ಮೌನೇಶ್ವರ ಮಾಲಿ ಪಾಟೀಲ್, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಾಷು? ಮೊದಿನ್ ಸಾಬ್ ಸರ್ವರನ್ನು ಸ್ವಾಗತಿಸಿದರು.ಪರಿಶಿಷ್ಟ ಪಂಗಡ ಅಭಿವೃದ್ಧಿ ತಾಲ್ಲೂಕು ಅಧಿಕಾರಿ ರಾಘವೇಂದ್ರ ವರ್ಮಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ಎಸ್. ಉಷಾ,ಗ್ರೇಡ್-2 ತಹಸೀಲ್ದಾರ್ ಮಲ್ಲೇಶಪ್ಪ, ತೋಟಗಾರಿಕೆ ಸಹಾಯಕ ನಿರ್ದೇಶಕ ವಿಶ್ವನಾಥ್,ಕ್ಷೇತ್ರ ಸಾಕ್ಷರತಾ ಸಂಯೋಜಕರಾದ ಜೆ.ನಾಗೇಂದ್ರ ಗೌಡ,ದೈಹಿಕ ಶಿಕ್ಷಣಾಧಿಕಾರಿ ವಿಜಯರಂಗಾರೆಡ್ಡಿ,ಬಿಸಿಎಂ ಅಧಿಕಾರಿ ಶಾಮಪ್ಪ, ತಾಲ್ಲೂಕು ಪಂಚಾಯತ್ ಸಹಾಯ ನಿರ್ದೇಶಕಿ ನಿರ್ಮಲಾ ದೇವಿ,ನಗರಸಭೆ ಆಯುಕ್ತರಾದ ಮರಿಲಿಂಗಪ್ಪ,ವಾಲ್ಮೀಕಿ ತಾಲ್ಲೂಕು ಅಧ್ಯಕ್ಷ ಹೊನ್ನಪ್ಪ,ತಾಲ್ಲೂಕು ಪರಿಶಿಷ್ಟ ಪಂಗಡ ನೌಕರರ ಸಂಘದ ಅಧ್ಯಕ್ಷ ಎನ್.ವೀರೇಶಪ್ಪ, ವಾಲ್ಮಿಕಿ ಸಮುದಾಯದವರು,ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು,ಪಾಲ್ಗೊಂಡಿದ್ದರು.
ಶುದ್ಧವಾದ ಕುಡಿಯುವ ನೀರು ಪ್ಲಾಸ್ಟಿಕ್ ಬಾಟಲ್ ಗಳನ್ನು ಬಿಟ್ಟು ಈ ಸಂದರ್ಭದಲ್ಲಿ ಗಣ್ಯರಿಗೆ ಸ್ಟೀಲ್ ಗ್ಲಾಸ್ ಗಳಲ್ಲಿ ನೀರು ಪ್ಲೇಟ್ಗಳಲ್ಲಿ ಉಪಾಹಾರ ಅರ್ಥಪೂರ್ಣವಾಗಿ ವ್ಯವಸ್ಥೆಗೊಳಿಸಿ ವಿತರಿಸಿ ಜಯಂತ್ಯುತ್ಸವ ಸರಳವಾಗಿ ಆಚರಿಸಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
