ತುಮಕೂರು:
ಚಾಕ್ಲೆಟ್ ಕೊಡುತ್ತೇನೆಂದು ನಂಬಿಸಿ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರವಾನ್ವಿತ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯ ಪೋಕ್ಸೋ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ಮತ್ತು ರೂ 75 ಸಾವಿರ ರೂಪಾಯಿ ದಂಡ ವಿಧಿಸಿದೆ.
ಕುಣಿಗಲ್ ತಾಲ್ಲೂಕು ಹತ್ರಿದುರ್ಗ ಹೋಬಳಿಯ ಗುಳ್ಳಳ್ಳಿಪುರ ಗ್ರಾಮದ ವ್ಯಾಪ್ತಿಗೆ ಸೇರಿದ ಠಾಣೆಯಲ್ಲಿ ನೊಂದ ಬಾಲಕಿಯ ಅಜ್ಜಿ ದೂರು ನೀಡಿದ್ದು, ದಿನಾಂಕ 28/07/2022ರಂದು ರಾತ್ರಿ ನೊಂದ ಬಾಲಕಿ ರಾತ್ರಿ ಮಲಗಿದ್ದಾಗ ಬೆಚ್ಚಿಬಿದ್ದು ಕೂಗಿದ್ದು, ಈ ವೇಳೆ ಬಾಲಕಿಯನ್ನು ಅಜ್ಜಿ ಸಂತೈಸಿಸಿ ಏನಾಯ್ತು ಎಂದು ವಿಚಾರಿಸಿದ್ದಾರೆ.
ಈ ಬಗ್ಗೆ ದಾಖಲಾದ ದೂರಿನ ತನಿಖೆಯ ಬಳಿಕ ಕುಣಿಗಲ್ ಪೊಲೀಸ್ ಅಧಿಕಾರಿ ಜಮಾಲ್ ಅಹಮದ್ ಅವರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯಲ್ಲಿ ಆರೋಪ ಸಾಬೀತಾದ ಕಾರಣ, ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 75 ಸಾವಿರ ರೂ. ದಂಡವನ್ನು ನ್ಯಾಯಾಲಯ ವಿಧಿಸಿದೆ.
