ತುಮಕೂರು :ವಿದ್ಯಾ ವಾಚಸ್ಪತಿ ಕವಿತಾ ಕೃಷ್ಣ ನಿಧನ

ತುಮಕೂರು:-

ಸಾಹಿತಿ, ಕವಿ, ನಾಟಕಕಾರ ಹಾಗೂ ಸಂಶೋಧಕ, ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ (79) ಭಾನುವಾರ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ನಿಧನರಾಗಿದ್ದು, ಪತ್ನಿ, ಮಕ್ಕಳು, ಮೊಮ್ಮಕ್ಕಳನ್ನು ಅಗಲಿದ್ದಾರೆ.

ಅರವತ್ತು ವರ್ಷಗಳಿಗಿಂತಲೂ ಹೆಚ್ಚಿನ ಕಾಲ ಸಾಹಿತ್ಯ ಬರವಣಿಗೆ, ಸಂಘಟನೆ, ಕನ್ನಡಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದ ಡಾ. ಕವಿತಾಕೃಷ್ಣ 190ಕ್ಕಿಂತಲೂ ಹೆಚ್ಚಿನ ಕೃತಿಗಳನ್ನು ರಚಿಸಿ ಜಿಲ್ಲೆಯ ದಿಗ್ಗಜ ಕವಿ ಎನಿಸಿಕೊಂಡಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಮಾತ್ರವಲ್ಲದೆ ಇಡೀ ರಾಜ್ಯಾದ್ಯಂತ ಶಿಷ್ಯ ಬಳಗ, ಅಭಿಮಾನ ಬಳಗ ಸಂಪಾದಿಸಿರುವ ಇವರು, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ರಾಜ್ಯ ನಾಟಕಕಾರರ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಹಕಾರಿ ಸಾಹಿತ್ಯ ಪ್ರಕಾಶನ ಆರಂಭಿಸಿ ಹಲವು ಉದಯೋನ್ಮುಖ ಲೇಖಕರ ಕೃತಿ ಪ್ರಕಟಿಸಿರುವ ಹೆಗ್ಗಳಿಕೆಯೂ ಇದೆ. ಒಂದೇ ದಿನ ಒಂದೇ ವೇದಿಕೆಯಲ್ಲಿ 33 ಕೃತಿ ಬಿಡುಗಡೆ ಮಾಡಿದ ದಾಖಲೆಯೂ ಇದ್ದು, ರಾಜ್ಯ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ, ಜ್ಞಾನಬುತ್ತಿ ಸ್ಥಾಪಕ ಅಧ್ಯಕ್ಷ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

Recent Articles

spot_img

Related Stories

Share via
Copy link