ತೂಕ ಇಳಿಸಬೇಕೇ…? ರಾತ್ರಿ ಊಟಕ್ಕೆ ಇಂತಹ ಆಹಾರಗಳನ್ನು ಸೇವಿಸಿ

Image result for weight loss

      ತೂಕ ಹೆಚ್ಚಿಸಿಕೊಳ್ಳಲು ಹೆಚ್ಚಿನವರಿಗೆ ಯಾವುದೇ ಕಷ್ಟವಾಗುವುದಿಲ್ಲ. ಆದರೆ ತೂಕ ಇಳಿಸಿಕೊಳ್ಳುವುದು ಅವರಿಗೆ ದೊಡ್ಡ ಸಮಸ್ಯೆ ಯಾಗಿರುವುದು. ದೇಹದಲ್ಲಿ ತುಂಬಿರುವ ಬೊಜ್ಜಿನಿಂದ ಯಾವುದೇ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅವರಿಗೆ ಮನಸ್ಸಾಗುವುದಿಲ್ಲ. ಇಂತಹ ಸಮಯದಲ್ಲಿ ತೂಕ ಕಡಿಮೆ ಮಾಡಬೇಕೆಂದು ಶತಪ್ರಯತ್ನ ಮಾಡುತ್ತಾರೆ.

      ಮಾರುಕಟ್ಟೆಯಲ್ಲಿ ಸಿಗುವಂತಹ ತೂಕ ಇಳಿಸಿಕೊಳ್ಳುವ ಮಾತ್ರೆ, ಹುಡಿ ಇತ್ಯಾದಿಗಳನ್ನು ಸೇವಿಸಲು ಆರಂಭಿಸುವರು. ಆದರೆ ಇದು ತೂಕ ಇಳಿಸಿದರೂ ಇದರ ಸೇವನೆ ನಿಲ್ಲಿಸಿದ ಕೂಡಲೇ ಮತ್ತೆ ತೂಕ ಹೆಚ್ಚಳವಾಗುವುದು. ಇಂತಹ ಸಮಯದಲ್ಲಿ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಇರುವಂತಹ ಮನೆಮದ್ದನ್ನು ಬಳಸಿದರೆ ಅದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು.

Image result for weight loss

      ಅದರಲ್ಲೂ ಕೆಲವರು ತೂಕ ಬೇಗನೇ ಇಳಿಯಲಿ ಎಂದು ರಾತ್ರಿ ಊಟವನ್ನೂ ಬಿಡುತ್ತಾರೆ. ಆದರೆ ಇದು ಪರೋಕ್ಷವಾಗಿ ತೂಕ ಇಳಿಸುವ ಪ್ರಯತ್ನಗಳಿಗೆ ಭಿನ್ನವಾಗಿಯೇ ಕೆಲಸ ಮಾಡಬಹುದು. ಹೇಗೆ ಎಂದರೆ ರಾತ್ರಿ ಊಟ ಮಾಡದೇ ಮಲಗುವ ಮೂಲಕ ರಾತ್ರಿ ಹಸಿವಿನಿಂದ ಎಚ್ಚರಾಗುತ್ತದೆ ಹಾಗೂ ಅನಾರೋಗ್ಯಕರ, ಹೆಚ್ಚಿನ ಕ್ಯಾಲೋರಿಗಳ ಸಿದ್ಧ ಆಹಾರಗಳನ್ನು ಸೇವಿಸಿ ತೂಕದ ಹೆಚ್ಚಳಕ್ಕೆ ಕಾರಣವಾಗುತ್ತದೆ.

      ಇದು ಕೇವಲ ನಿಮ್ಮ ಸವಿನಿದ್ದೆಯನ್ನು ಕೆಡಿಸುವುದು ಮಾತ್ರವಲ್ಲ, ಮರುದಿನ ಬೆಳಿಗ್ಗೆದ್ದಾಗ ದಣಿವಾದಂತೆ ಹಾಗೂ ಇಡಿಯ ದಿನದ ಚಟುವಟಿಕೆಗಳನ್ನು ಸೂಕ್ತವೇಗದಲ್ಲಿ ನಿರ್ವಹಿಸಲಾಗದೇ ಹಿಂದೆ ಬೀಳುವಂತಾಗುತ್ತದೆ. ಅಲ್ಲದೇ ಆಹಾರಕ್ರಮವನ್ನೂ ಏರುಪೇರುಗೊಳಿಸಬಹುದು. ಆದ್ದರಿಂದ ತೂಕ ಇಳಿಸಬೇಕೆಂದರೆ ಉತ್ತಮ ನಿದ್ದೆಯೂ ಅಗತ್ಯವಾಗಿದೆ ಹಾಗೂ ರಾತ್ರಿ ಮಲಗುವ ಮುನ್ನ ಉತ್ತಮ ಪ್ರಮಾಣದ ಪೌಷ್ಟಿಕ ಆಹಾರವನ್ನು ಸೇವಿಸಿಯೇ ಮಲಗಬೇಕು. ಬನ್ನಿ, ಈ ನಿಟ್ಟಿನಲ್ಲಿ ರಾತ್ರಿ ಸೇವಿಸಬಹುದಾದ ಹತ್ತು ಆರೋಗ್ಯಕರ ಆಹಾರಗಳ ಬಗ್ಗೆ ಅರಿಯೋಣ….

ಚೆರ್ರಿಗಳು: Related image

      ಇವು ಕೇವಲ ಊಟದ ಬಳಿಕ ಹಸಿವನ್ನು ತಣಿಸುವುದು ಮಾತ್ರವಲ್ಲ, ಸುಖಕರ ನಿದ್ದೆಗೂ ನೆರವಾಗುತ್ತವೆ. ಚೆರ್ರಿಗಳಲ್ಲಿ ಮೆಲಟೋನಿನ್ ಎಂಬ ಪೋಷಕಾಂಶವಿದ್ದು ಇದು ನಿದ್ದೆಯನ್ನು ನಿಯಂತ್ರಿಸಲು ನೆರವಾಗುತ್ತದೆ. ಹಾಗೂ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಉರಿಯೂತ ಹಾಗೂ ಹೊಟ್ಟೆಯುಬ್ಬರಿಕೆಯಾಗದಂತೆ ನೋಡಿಕೊಳ್ಳುತ್ತವೆ.

  

ಮೊಸರು:

Image result for curd

      ಸಾಧ್ಯವಾದರೆ ಗ್ರೀಕ್ ಮೊಸರು ಎಂದು ಸಿಗುವ ಮೊಸರನ್ನು ಕೊಂಡು ತನ್ನಿ. ಮನೆಯಲ್ಲಿಯೇ ಹೆಪ್ಪುಗಟ್ಟಿಸಿದ ಮೊಸರೂ ಉತ್ತಮ. ರಾತ್ರಿಯ ಊಟದಲ್ಲಿ ಮೊಸರನ್ನು ಸೇವಿಸುವ ಮೂಲಕ ಉತ್ತಮ ಪ್ರಮಾಣದ ಪ್ರೋಟೀನು ಹಾಗೂ ಕಡಿಮೆ ಸಕ್ಕರೆ ಲಭ್ಯವಾಗುತ್ತದೆ. ಪ್ರೋಟೀನು ಹೊಟ್ಟೆಯನ್ನು ತುಂಬಿರುವ ಭಾವನೆ ಮೂಡಿಸಿತ್ತದೆ ಹಾಗೂ ರಾತ್ರಿ ನಿದ್ದೆಯ ಸಮಯದಲ್ಲಿ ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ. ಮೊಸರಿನ ಪ್ರೋಟೀನು ದೇಹದ ಕೊಬ್ಬನ್ನು ಕರಗಿಸುತ್ತದೆ ಹಾಗೂ ತನ್ಮೂಲಕ ತೂಕ ಇಳಿಯಲು ನೆರವಾಗುತ್ತದೆ.

ಪೀನಟ್ ಬಟರ್:

Related image

      ಇಡಿಯ ಗೋಧಿಯ ಧಾನ್ಯದ ಹಿಟ್ಟಿನಿಂದ ತಯಾರಿಸಿದ ಬ್ರೆಡ್ ತುಣುಕಿನ ಮೇಲೆ ಪೀನಟ್ ಬಟರ್ ಅಥವಾ ಶೇಂಗಾ ಬೀಜ-ಬೆಣ್ಣೆಯ ಲೇಪನವನ್ನು ಲೇಪಿಸಿ ರಾತ್ರಿಯೂಟಕ್ಕೆ ಸೇವಿಸುವುದು ತೂಕ ಇಳಿಸುವ ನಿಟ್ಟಿನಲ್ಲಿ ಉತ್ತಮ ಆಯ್ಕೆಯಾಗಿದೆ. ಏಕೆಂದರೆ ಇದರಲ್ಲಿರುವ ಸಸ್ಯಜನ್ಯ ಪ್ರೋಟೀನು ಸ್ನಾಯುಗಳ ಬೆಳವಣಿಗೆಗೆ ಹಾಗೂ ಆರೋಗ್ಯಕರ ಅಪರ್ಯಾಪ್ತ ಕೊಬ್ಬುಗಳು ಹೊಟ್ಟೆಯನ್ನು ಹೆಚ್ಚು ಹೊತ್ತು ತುಂಬಿರುವ ಭಾವನೆ ಮೂಡಿಸಿ ಹೆಚ್ಚುವರಿ ಆಹಾರ ಸೇವಿಸದಂತೆ ತಡೆಯುತ್ತದೆ ಹಾಗೂ ಸೊಂಟದ ಕೊಬ್ಬು ಕರಗಲು ನೆರವಾಗುತ್ತದೆ.

ಕಾಟೇಜ್ ಚೀಸ್:

Image result for cottage cheese

      ತೂಕ ಇಳಿಸುವ ನಿಟ್ಟಿನಲ್ಲಿ ರಾತ್ರಿ ಮಲಗುವ ಮುನ್ನ ಸೇವಿಸಲು ಕಾಟೇಜ್ ಚೀಸ್ ಸಹಾ ಉತ್ತಮ ಆಹಾರವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕ್ಯಾಸೀನ್ ಪ್ರೋಟೀನು ಹೊಟ್ಟೆಯನ್ನು ಇಡಿಯ ರಾತ್ರಿ ತುಂಬಿರುವಂತೆ ಮಾಡುತ್ತದೆ ಹಾಗೂ ಘಾಸಿಗೊಂಡಿದ್ದ ಸ್ನಾಯುಗಳನ್ನು ದುರಸ್ತಿಗೊಳಿಸಲು ನೆರವಾಗುತ್ತದೆ. ಇದರಲ್ಲಿ ಕ್ಯಾಲೋರಿಗಳು ಕಡಿಮೆ ಇದೆ ಹಾಗೂ ಅನಗತ್ಯ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.

 ಟರ್ಕಿ:

Related image

      ಟರ್ಕಿ ಮಾಂಸದಲ್ಲಿರುವ ಟ್ರಿಪ್ಟೋಫ್ಯಾನ್ ಎಂಬ ಪೋಷಕಾಂಶ ಉತ್ತಮ ನಿದ್ದೆ ಪಡೆಯಲು ನೆರವಾಗುತ್ತದೆ ಹಾಗೂ ತೂಕ ಇಳಿಸುವವರಿಗೆ ರಾತ್ರಿಯ ಸಮಯದಲ್ಲಿ ಸೇವಿಸಲು ಉತ್ತಮ ಆಯ್ಕೆಯಾಗಿದೆ. ಇದರಲ್ಲಿರುವ ಪ್ರೋಟೀನು ಸ್ನಾಯುಗಳ ಬೆಳವಣಿಗೆಗೆ ನೆರವಾಗುತ್ತದೆ ಹಾಗೂ ಕೊಬ್ಬು ಕರಗಿಸುವ ಮೂಲಕ ತೂಕ ಇಳಿಯಲೂ ನೆರವಾಗುತ್ತದೆ. ಟರ್ಕಿಯನ್ನು ಸ್ಯಾಂಡ್ ವಿಚ್ ರೂಪದಲ್ಲಿ ಸೇವಿಸುವುದು ಉತ್ತಮವಾಗಿದೆ. 

ಚಾಕಲೇಟು ಹಾಲು:

Image result for chocolate milk

      ಕೊಬ್ಬು ಕರಗಿಸಲು ಚಾಕಲೇಟು ಬೆರೆಸಿದ ಹಾಲು ಸಹಾ ಉತ್ತಮವಾಗಿದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ಹೊಟ್ಟೆಯ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ 1000ಮಿಲಿಗ್ರಾಂ ಕ್ಯಾಲ್ಸಿಯಂ ಸೇವಿಸುವ ಮೂಲಕ 18 ಪೌಂಡುಗಳಷ್ಟು ಕೊಬ್ಬು ಕರಗಿಸಬಹುದು. ಹಾಲಿನಲ್ಲಿರುವ ವಿಟಮಿನ್ ಡಿ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ನೆರವಾಗುತ್ತದೆ.

  ಬಾದಾಮಿ:

Related image

      ಇದರಲ್ಲಿ ಐದು ಗ್ರಾಂ ನಷ್ಟು ಪ್ರೋಟೀನ್ ಇದೆ. ಇದು ಘಾಸಿಗೊಂಡಿದ್ದ ಸ್ನಾಯುಗಳನ್ನು ಒಂದೇ ರಾತ್ರಿಯಲ್ಲಿ ದುರಸ್ತಿಗೊಳಿಸಲು ಸಮರ್ಥವಾಗಿದೆ. ಬಾದಾಮಿಯಲ್ಲಿರುವ ಕರಗುವ ನಾರು ಹೊಟ್ಟೆಯನ್ನು ತುಂಬಿರುವ ಭಾವನೆಯನ್ನು ಮೂಡಿಸಿ ಹೆಚ್ಚು ಆಹಾರ ತಿನ್ನದಂತೆ ತಡೆಯುತ್ತದೆ. ಕೊಬ್ಬನ್ನು ಕರಗಿಸಲು ಬಾದಾಮಿ ಒಂದು ಉತ್ತಮ ಆಹಾರವಾಗಿದೆ.

ಅಧಿಕ ನಾರಿನ ಆಹಾರಗಳು:

      ರಾತ್ರಿಯ ಊಟದಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಇರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಬೇಕು. ಅಧಿಕ ನಾರಿನಂಶ ಇರುವ ಏಕದಳ ಧಾನ್ಯಗಳು ಉತ್ತಮ ಆಯ್ಕೆಯಾಗಿದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಕರಗದ ನಾರಿನ ಸೇವನೆಯಿಂದ ಕೊಬ್ಬು ಕರಗುತ್ತದೆ ಹಾಗೂ ತೂಕ ಇಳಿಯಲೂ ನೆರವಾಗುತ್ತದೆ

ಹಸಿರು ಟೀ:

Related image

      ಹಸಿರು ಟೀ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ವಿಶೇಷವಾಗಿ ಹೃದಯದ ಕ್ಷಮತೆ ಹೆಚ್ಚಿಸುವುದು ಹಾಗೂ ಮಾನಸಿಕ ಆರೋಗ್ಯ ಉತ್ತಮಗೊಳಿಸುವುದು. ರಾತ್ರಿ ಊಟದ ಬಳಿಕ ಒಂದು ಕಪ್ ಹಸಿರು ಟೀ ಸೇವಿಸುವ ಮೂಲಕ ಈ ಪ್ರಯೋಜನಗಳನ್ನು ಪಡೆಯುವ ಜೊತೆಗೇ ತೂಕವನ್ನೂ ಇಳಿಸಬಹುದು. ಹಸಿರು ಟೀಯಲ್ಲಿರುವ ಕೆಲವು ಪೋಷಕಾಂಶಗಳು ವಿಶೇಷವಾಗಿ ರಾತ್ರಿಯ ಹೊತ್ತಿನಲ್ಲಿ ಹೆಚ್ಚಿನ ಕೊಬ್ಬನ್ನು ದಹಿಸುವ ಕ್ಷಮತೆ ಪಡೆದಿವೆ.

  ಹೆಚ್ಚು ಬೆಂದಿರುವ ಮೊಟ್ಟೆ:

Image result for boiled egg

      ಮೊಟ್ಟೆಗಳಲ್ಲಿ ಪ್ರೋಟೀನ್ ಹಾಗೂ ಇತರ ಪೋಷಕಾಂಶಗಳು ಹೆಚ್ಚಿನ ಪ್ರಮಾಣದಲ್ಲಿವೆ ಹಾಗೂ ರಾತ್ರಿಯ ಊಟದಲ್ಲಿ ಸೇರಿಸಿಕೊಳ್ಳಲು ಉತ್ತಮ ಆಯ್ಕೆಯಾಗಿದೆ. ಒಂದು ದೊಡ್ಡ ಮೊಟ್ಟೆಯಲ್ಲಿ ಸುಮಾರು ಎಪ್ಪತ್ತೆಂಟು ಕ್ಯಾಲೋರಿಗಳಿವೆ ಹಾಗೂ ಇತರ ಪೋಷಕಾಂಶಗಳೂ ಹೆಚ್ಚಿವೆ. ಆದ್ದರಿಂದ ತೂಕ ಇಳಿಸಲು ಮೊಟ್ಟೆಯನ್ನು ಸಾಮಾನ್ಯವಾಗಿ ಬೇಯಿಸುವ ಬದಲು ಹೆಚ್ಚಾಗಿ ಬೇಯಿಸಿ (hard boiled) ಸೇವಿಸುವ ಮೂಲಕ ಇದನ್ನು ಜೀರ್ಣೀಸಿಕೊಳ್ಳಲು ಹೆಚ್ಚಿನ ಕೊಬ್ಬನ್ನು ಬಳಸಿಕೊಂಡು ತೂಕ ಇಳಿಕೆಗೆ ನೆರವಾಗುತ್ತದೆ.ಈ ಲೇಖನ ನಿಮಗೆ ಉಪಯುಕ್ತವೆಂದು ಅನ್ನಿಸಿದರೆ ನಿಮ್ಮ ಆಪ್ತರು ಹಾಗೂ ಸ್ನೇಹಿತರಲ್ಲಿ ಹಂಚಿಕೊಳ್ಳುವ ಮೂಲಕ ಅವರೂ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತಾಗಲಿ.

 

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap