ಪುರುಷರ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಚಿನ್ನದ ಪದಕ

ಚಾಂಗ್‍ವೊನ್:

               ದಕ್ಷಿಣ ಕೊರಿಯಾ ಚಾಂಗ್‍ವೊನ್  ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಚಾಂಪಿಯನ್ ಶಿಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಭಾರತ ಶೂಟರ್ ಅಂಕುರ್ ಮಿತ್ತಲ್ ಪುರುಷರ ಡಬಲ್ ಟ್ರ್ಯಾಪ್ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದ್ದಾರೆ.ಇದಾಗಲೇ ಹಲವು ವಿಶ್ವ ಕಪ್ ಗಳಲ್ಲಿ ಚಿನ್ನ ಗೆದ್ದು ಸಾಧನೆ ಮಾಡಿದ್ದ ಅಂಕುರ್ ಶನಿವಾರದ ಪಂದ್ಯದಲ್ಲಿ  150 ರಲ್ಲಿ 140 ಅಂಕ ಗಳಿಸಿದ್ದಾರೆ.ಇದಲ್ಲದೆ ಅಂಕುರ್ ತಮ್ಮ ಸಹ ಆಟಗಾರರಾದ ಮಹಮದ್ ಅಸಾಬ್, ಶಾರ್ದೂಲ್ ವಿಹಾನ್ ಜತೆಗೂಡಿ ನಡೆದ ಪಂದ್ಯದಲ್ಲಿ ಕಂಚಿನ ಪದಕ ಗಳಿಸಿಕೊಂಡಿದ್ದಾರೆ.ಅಂಕುರ್ ಅವರನ್ನೊಳಗೊಂಡ ತಂಡ 409 ಅಂಕ ಗಳಿಕೆಯೊಡನೆ ಕಂಚಿನ ಸಾಧನೆ ಮಾಡಿತ್ತು.

Recent Articles

spot_img

Related Stories

Share via
Copy link