ಶ್ರೀ ಕೊಲ್ಲಾಪುರದಮ್ಮನಿಗೆ ಕಾರ್ತೀಕ ಮಾಸದ ಲಕ್ಷದೀಪೋತ್ಸವ: ಅನ್ನಸಂತರ್ಪಣೆ ಕಾರ್ಯಕ್ರಮ

ತುಮಕೂರು:

     ಇಲ್ಲಿನ ಹನುಮಂತಪುರದ ಅಗ್ನಿಕುಲ ತಿಗಳ ಜನಾಂಗದ ವತಿಯಿಂದ, ಯ.ಟಿ.ಹೆಚ್.ಹನುಮಂತರಾಜು ಅವರ ನೇತೃತ್ವದಲ್ಲಿ ಡಿ.12 ರಂದು ಹನುಮಂತಪುರದಲ್ಲಿ ಲಕ್ಷ ದೀಪೋತ್ಸವ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

    ಬೆಳಗ್ಗೆ 8 ಗಂಟೆಗೆ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನಡೆಯಲಿದ್ದು, ಸಂಜೆ 6.30ಕ್ಕೆ ಶ್ರೀ ಕೊಲ್ಲಾಪುರದಮ್ಮ ದೇವಿಗೆ ವಿಶೇಷ ಹೂವಿನ ಅಲಂಕಾರ ಏರ್ಪಡಿಸಲಾಗಿದೆ.ಅಧ್ಯಕ್ಷತೆಯನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಹಿಸಲಿದ್ದು, ದೀಪೋತ್ಸವದ ಉದ್ಘಾಟನೆಯನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ನೆರವೇರಿಸುವರು.

    ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಎಸ್.ಆರ್.ಶ್ರೀನಿವಾಸ್, ಸುರೇಶ್ ಗೌಡ, ರಾಜೇಂದ್ರ, ಎಂ.ಆರ್.ಸೀತಾರಾಂ, ಮಹಾಪೌರರಾದ ಪ್ರಭಾವತಿ ಎಂ., ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಶಾಸಕ ಡಿ.ಸಿ.ಗೌರಿಶಂಕರ್, ಅಟ್ಟಿಕಾ ಬಾಬು, ಪಿ.ಎನ್.ಕೃಷ್ಣಮೂರ್ತಿ, ಉದಯ್ ಸಿಂಗ್, ಹೆಚ್.ಸುಬ್ಬಣ್ಣ, ಡಾ.ಎಂ.ಆರ್.ಹುಲಿನಾಯ್ಕರ್, ಡಾ.ರಫೀಕ್ ಅಹಮದ್, ಗೋವಿಂದರಾಜು, ಗೃಹ ಸಚಿವರ ಆಪ್ತ ಕಾರ್ಯದರ್ಶಿ ನಾಗಣ್ಣ, ಸ್ಪೂರ್ತಿ ಡೆವಲಪರ್ಸ್‍ನ ಎಸ್.ಪಿ.ಚಿದಾನಂದ್, ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ, ಜಿಲ್ಲಾಧಿಕಾರಿ ಶ್ರೀನಿವಾಸ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಎಸ್ಪಿ ಅಶೊಕ್, ಜಿ.ಪಂ ಸಿಇಓ ಪ್ರಭು ಮುಂತಾದವರು ಆಗಮಿಸುವರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap