ಸಂಸಾರದಲ್ಲಿ ವಿರಸ ಮೂಡಿಸಿದ ವಾಟ್ಸಾಪ್

ಬೆಂಗಳೂರು:

                   ಮಹಿಳೆಯ ಫೋಟೋ ತೆಗೆದುಕೊಂಡು ಅರೆಬೆತ್ತಲೆ ಮಾಡಿ ಅದನ್ನು ಆಕೆಯ ಪತಿಯ ಜೊತೆಗೆ ಹಲವರ ವಾಟ್ಸಾಪ್ ಹರಿಬಿಟ್ಟು ಸಂಸಾರದಲ್ಲಿ ವಿರಸ ಮೂಡಿಸಿ ಮಹಿಳೆಯ ನಾಪತ್ತೆಯಾಗಲು ಕಾರಣವಾಗಿರುವ ದುಷ್ಕರ್ಮಿಗಳ ವಿರುದ್ದ ನಗರ ಪೊಲೀಸರಿಗೆ ದೂರು ದಾಖಲಾಗಿದೆ.
                 ದುಷ್ಕರ್ಮಿಗಳ ಕೃತ್ಯದಿಂದ ಮಹಿಳೆಯ ಸಂಸಾರದಲ್ಲಿ ಬಿರುಕು ಕಾಣಿಸಿಕೊಂಡಿತ್ತಿದರ ಅವಮಾನ ತಾಳಲಾರದೇ ಮಹಿಳೆಯು ನಾಪತ್ತಾಯಾಗಿದ್ದಾರೆ ಆಕೆಯನ್ನು ಅಪಹರಿಸಲಾಗಿದೆ ಎನ್ನುವ ಶಂಕೆ ವ್ಯಕ್ತಪಡಿಸಿ ಮಹಿಳೆಯ ಸಹೋದರ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
                  ಮಹಿಳೆ ಪತಿಗೆ ವಾಟ್ಸ್‍ಆಪ್‍ನಲ್ಲಿ ಫೋಟೋ ಕಳುಹಿಸಿದ ದುಷ್ಕರ್ಮಿಗಳು ಇತರೆ ಮೂರು ಜನರಿಗೆ ಇದೇ ರೀತಿ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ರೀತಿ ಅರೆಬೆತ್ತಲೆ ಫೋಟೋವನ್ನ ನೂರಾರು ವಾಟ್ಸ್‍ಆಪ್‍ಗಳಿಗೆ ಕಳುಹಿಸಿರುವ ಹಿನ್ನೆಲೆ ದಂಪತಿ ನಡುವೆ ಆಗಾಗ್ಗೆ ಜಗಳ ಉಂಟಾಗಿ ವಿಚ್ಚೇದನ ಹಂತಕ್ಕೂ ಹೋಗಿದೆ.
ವಿಚ್ಚೇದನಕ್ಕೆ ಅರ್ಜಿ

                  ವಿಚ್ಚೇದನ ಕೊಡುವ ಹಿನ್ನಲೆಯಲ್ಲಿ ಮಹಿಳೆಯು ಪತಿಯ ಮನೆಯನ್ನೇ ಬಿಟ್ಟು ಹೋಗಿದ್ದಾಳೆ.ಮನೆ ಬಿಟ್ಟು ಹೋದ ಪತ್ನಿಗಾಗಿ ಎಲ್ಲಾ ಕಡೆ ಹುಡುಕಿದರೂ ಆಕೆ ಎಲ್ಲಿಯೂ ಪತ್ತೆಯಾಗಿಲ್ಲ.
                    ಇತ್ತ ಸಹೋದರ ಕೂಡ ಎಲ್ಲಾ ಕಡೆ ಹುಡುಕಿದರೂ ಅವರ ಸಹೋದರಿ ಪತ್ತೆಯಾಗಿಲ್ಲ. ಆರೋಪಿಗಳೇ ಕಿಡ್ನ್ಯಾಪ್ ಮಾಡಿರಬಹುದು ಎಂದು ಸಂಬಂಧಿಕರು ಶಂಕೆ ವ್ಯಕ್ತಪಡಿಸಿದ್ದಾರೆ.ಅರೆಬೆತ್ತಲೆ ಪೋಟೋ ಹರಿಬಿಟ್ಟು ಸಂಸಾರವನ್ನ ಹಾಳು ಮಾಡಿ ಖುಷಿ ಪಡುತ್ತಿರುವ ದುಷ್ಕರ್ಮಿಗಳನ್ನು ಶೀಘ್ರ ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಆಕೆಯ ಸಹೋದರ ದೂರಿನಲ್ಲಿ ಮನವಿ ಮಾಡಿದ್ದಾರೆ.