ಸರ್ಕಾರ ಬಿದ್ದರೆ, ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡು‌ ಕೂರುವ ಸನ್ಯಾಸಿಗಳು ನಾವಲ್ಲ : ಸಿ.ಟಿ.ರವಿ

 ಚಿಕ್ಕಮಗಳೂರು:           ಸರ್ಕಾರ ಬೀಳಿಸಲು ನಾವು ಮುಂದಾಗುವುದಿಲ್ಲ. ಆದರೆ ಬಿದ್ದರೆ ಮಾತ್ರ ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡು‌ ಕೂರುವ ಸನ್ಯಾಸಿಗಳು ನಾವಲ್ಲ ಎಂದು ಶಾಸಕ ಸಿ.ಟಿ.ರವಿ ಅಪಹಾಸ್ಯ ಮಾಡಿದ್ದಾರೆ. 

      ಸರ್ಕಾರ ರಚನೆಯಾದಾಗಿಂದಲೂ ಕಾಂಗ್ರೆಸ್, ದಳದಲ್ಲಿರುವವರಿಗೆ ಸಮಾಧಾನವಿಲ್ಲ. ಸರ್ಕಾರ ಉಳಿಸಿಕೊಳ್ಳುವ ಕೆಲಸ‌ ನಮ್ಮದ್ದಲ್ಲ. ಈ ಸರ್ಕಾರಕ್ಕೆ‌ ಸೈದ್ಧಾಂತಿಕ ಬದ್ಧತೆಯೂ ಇಲ್ಲ ಎಂದು ಕಿಡಿಕಾರಿದರು.

      ನಾವು ಬಿಜೆಪಿಗೆ ರಾಜಯೋಗ ಬರಲೆಂದು ಬಯಸುವುದಿಲ್ಲ. ಭಾರತಕ್ಕೆ ಬರಲೆಂದು ಬಯಸುತ್ತೇವೆ. 37 ಸ್ಥಾನ ಪಡೆದವರು ಸಿಎಂ ಆಗುತ್ತಾರೆ ಎಂದರೆ ಸೋಶಿಯಲ್ ಜಸ್ಟೀಸ್, ನ್ಯಾಚುರಲ್ ಜಸ್ಟೀಸ್ ಎನ್ನುತ್ತಾರೆ. ಅದೃಷ್ಟದಿಂದ‌ ಸಿಎಂ ಆಗಿದ್ದಾರೆ. ಅದೃಷ್ಟ ಖಾಲಿಯಾದ ಮೇಲೆ ಇಳಿಯುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. 

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ