ಹಗರಿಬೊಮ್ಮನಹಳ್ಳಿ
ಫೆ.12ರ ರಥಸಪ್ತಮಿಯಂದು ರಾಜ್ಯಾದ್ಯಂತ ಸವಿತಾ ಸಮುದಾಯದಿಂದ ಸವಿತಾ ಮಹರ್ಷಿ ಜಯಂತಿಯನ್ನು ಆಚರಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ, ಅದ್ದರಿಂದ ತಾಲೂಕಿನಲ್ಲಿ ಆಚರಣೆಗೆ ತಾಲೂಕು ಆಡಳಿತ ಪೂರ್ವಭಾವಿ ಸಭೆಯನ್ನು ಕರೆಯುವಂತೆ ಸಮುದಾಯದ ಪದಾಧಿಕಾರಿಗಳು ತಹಸಿಲ್ದಾರ್‍ಗೆ ಬುಧವಾರ ಮನವಿ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯ ಬಳಿ ಸೇರಿದ ಸಮಾಜದ ಪದಾಧಿಕಾರಿಗಳು ಮನವಿ ಸಲ್ಲಿಸಿದ ಬಳಿಕ ಸಮುದಯದ ತಾಲೂಕು ಅಧ್ಯಕ್ಷ ಕೆ.ವೆಂಕಟಕೃಷ್ಣ ಮಾತನಾಡಿ, ಪೂರ್ವಭಾವಿ ಸಭೆಯನ್ನು ಕರೆದು ಜಯಂತಿ ಆಚರಣೆಯ ಬಗ್ಗೆ ಮಾಹಿತಿ ನೀಡಬೇಕು ಎಂದರು. ಅಧಿಕಾರಿಗಳು ಕೂಡಲೆ ಗಮನಹರಿಸಬೇಕು, ನಮ್ಮ ಸಮುದಾಯ ಸಮಾಜದಲ್ಲಿ ತುಳಿತಕ್ಕೊಳಗಾಗಿರುವ ಚಿಕ್ಕ ಸಮುದಾಯವಾಗಿದ್ದು, ಸಮಾಜದ ಕಡಗಣೆಗೆ ಗುರಿಯಾಗುತ್ತಾ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆದ್ದರಿಂದ ಫೆ.12ರಂದು ಆಚರಿಸುವ ಜಯಂತಿಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಸವಿತಾ ಸಮಾಜದ ಮುಖಂಡರಾದ ಚಂದ್ರಪ್ಪ, ಅಂಜಿನಪ್ಪ, ಬಿ.ಕುಲಾಲಪ್ಪ, ಬಿ.ರಾಜು, ನಾಗರಾಜ್, ಸುರೇಶ ಬಾಬು, ಸುಬ್ರಮಣ್ಯ, ಸುರೇಶ, ಬಿ.ಶ್ರೀನಿವಾಸ, ಕೆ.ಗಂಗಾಧರ, ರಘು, ಸಣ್ಣಸಿದ್ದಪ್ಪ, ಲಿಂಗಮೂರ್ತಿ, ರಂಗಪ್ಪ, ಉಮೇಶ್, ಬಿ.ಕೃಷ್ಣ, ಸಿದ್ದೇಶ ಮತ್ತು ರಮೇಶ ಮತ್ತಿತರರು. ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
