ಸಿರುಗುಪ್ಪ ಅಂಚೆ ಜೀವ ವಿಮೆ ಸಣ್ಣ ಕಂತು ಅಧಿಕ ಬೋನಸ್ ಪೋಸ್ಟ್ ಮಾಸ್ಟರ್ ಬಿ. ನಾಗರಾಜ

0
30

ಸಿರಗುಪ್ಪ :-

     ನಿಮ್ಮ ಪ್ರೀತಿ ಪಾತ್ರರ ಸಂತೋಷ ಅನಿಶ್ಚಿತತೆಯ ಕೈಗೆ ಒಪ್ಪಿಸುವಿರಿ? ನೀವು ಅವರಿಗಾಗಿ ಅಂಚೆ ಜೀವ ವಿಮೆ ಮಾಡಬಹುದು. ಪಿಎಲ್‍ಐ ಸಣ್ಣ ಕಂತು ಅಧಿಕ ಬೋನಸ್ ಎಂದು ಸಿರುಗುಪ್ಪ ಮುಖ್ಯ ಅಂಚೆ ಕಚೇರಿ ಮಾಸ್ಟರ್ ಬಿ.ನಾಗರಾಜ ಹೇಳಿದರು.

      ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಗುರುವಾರ ಭಾರತ ಸರ್ಕಾರ ಸಂವಹನ ಮಂತ್ರಾಲಯ ಅಂಚೆ ಇಲಾಖೆಯು ರಾಷ್ಟ್ರೀಯ ಅಂಚೆ ಸಪ್ತಾಹದಲ್ಲಿ ಅವರು ಮಾತನಾಡಿ  ಲೈಫ್ ಇನ್ಶೂರೆನ್ಸ್ ಯೋಜನೆಯಲ್ಲಿ ಸುರಕ್ಷಾ ಸಂಪೂರ್ಣ ಜೀವ ವಿಮೆ, ಸಂತೋಷ್ ಎಂಡೋಮೆಂಟ್ ವಿಮೆ, ಸುವಿಧಾ ಪರಿವರ್ತನೆಯ ಸಮಗ್ರ ಜೀವ ವಿಮೆ, ಸುಮಂಗಲ ನಿರೀಕ್ಷಿತ ಎಂಡೋಮೆಂಟ್ ವಿಮೆ, ಯುಗಳ ಸುರಕ್ಷಾ ಜಂಟಿ ಜೀವ ವಿಮೆ, ಬಾಲ ಜೀವನ್ ಬಿಮಾ ಮಕ್ಕಳ ಪಾಲಿಸಿ ವಿವಿಧ ಯೋಜನೆ ಪಾಲಿಸಿಗಳ ಪ್ರಯೋಜನೆಗಳು ಮತ್ತು ಹೆಚ್ಚುವರಿ ವೈಶಿಷ್ಟ್ಯಗಳು 50 ಲಕ್ಷ ರೂ, ವರೆಗೆ ವಿಮೆ ಸಾಲ ಸೌಲಭ್ಯ ಆದಾಯ ತೆರಿಗೆಯಡಿ ವಿನಾಯಿತಿ ಕಂತು ಪಾವತಿ ಅವಕಾಶ ಎಂದರು.

       ಅಂಚೆ ಕಚೇರಿಯ ಪಿಎ ಯವರಾದ ವೈ.ಶಿವ ಪ್ರಸಾದ್ ಅವರು ಸರ್ವರನ್ನು ಸ್ವಾಗತಿಸಿ ವಿಶೇಷವಾಗಿ ಆಧಾರ್ ನೋಂದಣಿ ಅಭಿಯಾನವನ್ನು ಅಕ್ಟೋಬರ್ 13 ರಿಂದ 15 ರವರೆಗೆ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೊಸದಾಗಿ ಆಧಾರ್ ನೋಂದಣಿ ಮತ್ತು ಆಧಾರ್ ಕಾರ್ಡ್ ತಿದ್ದುಪಡಿಯನ್ನು ಸಹ ಮಾಡಿಕೊಳ್ಳಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ. ಪಡೆದುಕೊಳ್ಳಬೇಕು ಎಂದರು. ಭಾರತ ಸರಕಾರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜನಾಭಿಪ್ರಾಯ ಮುಖಂಡರು ಮಿನಿಸ್ಟ್ರಿ ಆಫ್ ಕಮ್ಯೂನಿಕೇಷನ್ ಅಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ ಎಸ್ಜಿಪಿ ಎಂಡಿಜಿ ಸದಸ್ಯರಾದ ಎ ಅಬ್ದುಲ್ ನಬಿ ಅವರು ಮಾತನಾಡಿ 1884 ರಲ್ಲಿ ಪ್ರಾರಂಭಗೊಂಡ  ಲೈಫ್ ಇನ್ಶೂರೆನ್ಸ್ ಅಂಚೆ ಜೀವ ವಿಮೆ ಅತ್ಯಂತ ಹಳೆಯ ಜೀವ ವಿಮಾ ಯೋಜನೆಗಳಲ್ಲಿ ಒಂದಾಗಿದ್ದು ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರಿಗೆ ಪ್ರಯೋಜನಕಾರಿಯಾಗಿದೆ.

     ಈ ಯೋಜನೆ ಅಧಿಕ ಸಕ್ರಿಯ ಪಾಲಿಸಿಗಳನ್ನು ಹೊಂದಿರುವುದು ಗಮನಾರ್ಹವಾಗಿದೆ ಎಂದರು ಜೈ ಸಿಂಗ್ ಅಲ್ವಾರಿ ಸಿಬ್ಬಂದಿ ವರ್ಗದವರು ಎ ಮೊಹಮ್ಮದ್ ಇಬ್ರಾಹಿಂ, ಎ ಮೊಹಮ್ಮದ್ ರಫಿ, ಎ ಮೊಹಮ್ಮದ್ ನೌಶಾದ್ ಅಲಿ, ಸಾರ್ವಜನಿಕರು ಗ್ರಾಹಕರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here