ಹಿರಿಯೂರು ಮಾರುಕಟ್ಟೆಯಲ್ಲಿ ಬಣ್ಣಬಣ್ಣದ ಕಲರ್‍ಪುಲ್ ಗಣಪತಿಗಳು

ಹಿರಿಯೂರು :

              ನಗರದ ಪ್ರದಾನ ರಸ್ತೆ ಹಾಗೂ ನೆಹರು ವೃತ್ತದಲ್ಲಿ ಭಾದ್ರಪದ ಚೌತಿಯ ಗಣೇಶ ಚತುರ್ಥಿ ಹಬ್ಬಕ್ಕೆಂದು ಬಣ್ಣ ಬಣ್ಣದ ಗಣಪತಿಗಳು ಮಾರಾಟಕ್ಕೆ ಬಂದಿವೆ, ರಸ್ತೆಯ ಇಕ್ಕೆಲಗಳಲ್ಲಿ ಕಲಾವಿದರ ಕುಂಚದಲ್ಲಿ ಅರಳಿದ ವಿಘ್ನೇಶ್ವರ ಸ್ವಾಮಿ ಮೂರ್ತಿಗಳು ಬಂದಿವೆ. ರಸ್ತೆಯಲ್ಲಿ ಓಡಾಡುವವರು ಅತ್ತ ಒಮ್ಮೆಯಾದರೂ ಕಣ್ಣಾಡಿಸಿ ನೋಡದೆ ಇರಲಾರರು, ಪುಟಾಣಿ ಮಕ್ಕಳು ಗಣಪತಿಗಳ ಕಡೆ ನೋಡುವುದೇ ಒಂದು ಹಬ್ಬವಾಗಿದೆ. ಮಾರಾಟಕ್ಕೆ ಬಂದಿರುವ ಗಣಪತಿಗಳು ಸಾರ್ವಜನಿಕರ ಕಣ್ಮನ ಸೆಳೆಯುತ್ತಿವೆ.