ಬೆಂಗಳೂರು 
ಮೈಸೂರು ಹೆದ್ದಾರಿಯಲ್ಲಿ ಹಾಡಹಾಗಲೇ ದುಷ್ಕರ್ಮಿಯೊಬ್ಬ ಕಾರಿನಲ್ಲಿ ಗನ್ ಹಿಡಿದು ಪುಡಾಂಟಿಕೆ ನಡೆಸಿದ್ದು ಆತನ ಬಂಧನಕ್ಕೆ ರಾಮನಗರ ಪೋಲಿಸರು ತೀವ್ರ ಶೋಧ ನಡೆಸಿದ್ದಾರೆ.
ಬೆಂಗಳೂರು ಚನ್ನಪಟ್ಟಣ್ಣದಿಂದ ರಾಮನಗರ ತನಕ ಈತ ಹೆದ್ದಾರಿಯಲ್ಲಿ ಕಾರ್ ಹೊರಗಡೆ ಗನ್ ತೋರಿಸುತ್ತಲೇ ಪ್ರಯಾಣ ಮಾಡಿ ಆತಂಕ ಸೃಷ್ಠಿಸಿದ್ದಾನೆ. ದುಷ್ಕರ್ಮಿಯ ಕಾರಿನ ಹಿಂದೆ ಮತ್ತೊಂದು ಕಾರಿನಲ್ಲಿ ಬರುತ್ತಿದ್ದವರು ಇದನ್ನು ವಿಡಿಯೋ ಮಾಡಿದ್ದು ಸಿನಿಮೀಯ ರೀತಿಯಲ್ಲಿ ಕಾರಿನಲ್ಲಿ ಗನ್ ಹಿಡಿದು ಆರ್ಭಟಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.
ಮಾರುತಿ ಎಸ್ಟೀಮ್ ಕಾರಿನಲ್ಲಿ ರಾಮನಗರ ಹೊರವಲಯದ ಪಂಜಾಬಿ ಗಾರ್ಡನ್ ಡಾಬಾ ಬಳಿಯಿಂದ ರಾಮನಗರದ ತನಕ ಗನ್ ಹಿಡಿದು ಪ್ರಯಾಣಿಸಿದ್ದಾನೆ. ಕಾರು ಬೆಂಗಳೂರಿನ ದಕ್ಷಿಣ ವಲಯಕ್ಕೆ ಸೇರಿದ್ದಾಗಿದ್ದು, ಹಾಡ ಹಾಗಲೇ ಈ ರೀತಿ ಗನ್ ಹಿಡಿದು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಾನೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸ್ವಕ್ಷೇತ್ರದಲ್ಲಿಯೇ ಇಂತಹ ಕೃತ್ಯ ನಡೆದಿದ್ದು ಪ್ರಕರಣ ದಾಖಲಿಸಿರುವ ರಾಮನಗರ ಪೊಲೀಸರು ಪುಂಡಾಟಿಕೆ ನಡೆಸಿದ ದುಷ್ಕರ್ಮಿಗಾಗಿ ವೈರಲ್ ಆಗಿರುವ ವಿಡಿಯೋ ಆಧರಿಸಿ ತೀವ್ರ ಶೋಧ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








